ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಕಾರದಪುಡಿ ಎರಚಿದ ಘಟನೆ ನಡೆದ ಒಂದೇ ವಾರದಲ್ಲಿ ಅವರ ನಿವಾಸ ಸನಿಹವೇ ಜೀವಂತ ಕಾಟ್ರೇಜ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಇಂದು ಮುಂಜಾನೆ ಇಮ್ರಾನ್ ಎಂಬ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಈತ ಸಿಎಂ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ತೆರಳುತ್ತಿದ್ದ ಎನ್ನಲಾಗಿದೆ.
ಬಂಧಿತ ವ್ಯಕ್ತಿ ಕೇಜ್ರಿವಾಲ್ ನಿವಾಸದ ಬಳಿ ಆಗಮಿಸಿದ ವೇಳೆ ಭದ್ರತಾ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 32 ಎಂಎಂ ಜೀವಂತ ಬುಲೆಟ್‌ಗಳನ್ನು ವ್ಯಕ್ತಿ ಹೊಂದಿದ್ದ ಎನ್ನಲಾಗಿದೆ. ಸುಮಾರು 10 ರಿಂದ 12 ಮುಸ್ಲಿಮರೊಂದಿಗೆ ಕೇಜ್ರಿವಾಲ್ ಅವರನ್ನು ಭೇಟಿಯಾಗಲಿ ಸಮಯ ನಿಗದಿಪಡಿಸಿಕೊಂಡಿದ್ದ ಎನ್ನಲಾಗಿದ್ದು, ವಕ್‌ಫ್ ಬೋರ್ಡ್ ಸಿಬ್ಬಂದಿಗಳ ವೇತನ ಹೆಚ್ಚಳ ಕುರಿತು ಮಾತನಾಡಲು ವಿಷಯ ತಂದಿದ್ದರು ಎನ್ನಲಾಗಿದೆ.
ಇನ್ನು, ಮಸೀದಿದ ಡೊನೇಶನ್ ಡಬ್ಬಿಯಿಂದ ಈ ಜೀವಂತ ಕಾಟ್ರೇಜ್‌ಗಳನ್ನು ತೆಗೆಕೊಂಡಿದ್ದೆ. ಆವೇಳೆ ತನ್ನ ಬ್ಯಾಗ್‌ಗಳನ್ನು ಅಲ್ಲಿಯೇ ಮರೆತಿದ್ದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಹೇಳಿದ್ದಾನೆ ಎನ್ನಲಾಗಿದೆ.
Discussion about this post