ಶ್ರೀನಗರ: ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಇಂದು ಮುಂಜಾನೆ ಕರ್ತವ್ಯದಲ್ಲಿದ್ದ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧ ವೀರಸ್ವರ್ಗ ಸೇರಿದ್ದಾರೆ.
ಕುಲ್ಗಾಮ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅಡಗಿ ಕುಳಿತಿದ್ದ ಉಗ್ರರು ಅತ್ತ ಪಹರೆ ನಡೆಸುತ್ತಿದ್ದ ಸೈನಿಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
#UDPATE Kulgam encounter: One jawan of Rashtriya Rifles died in action, two jawans of 163 Bn CRPF injured. Two terrorists neutralised, their identities and affiliations are being ascertained. #JammuAndKashmir https://t.co/Hwhr4B5nfx
— ANI (@ANI) November 27, 2018
ತತಕ್ಷಣ ಎಚ್ಚೆತ್ತ ಸೈನಿಕರು ಉಗ್ರರು ಅಡಗಿದ್ದ ಕಟ್ಟಡವನ್ನು ಸುತ್ತುವರೆದಿದ್ದು, ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದ್ದು, ಓರ್ವ ಭಾರತೀಯ ಯೋಧ ವೀರಸ್ವರ್ಗ ಸೇರಿದ್ದಾರೆ.
ಇನ್ನು ಈ ಭಾಗದಲ್ಲಿ ಮತ್ತಷ್ಟು ಉಗ್ರರು ಅಡಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಇದೇ ವೇಳೆ ಪುಲ್ವಾಮಾ ಜಿಲ್ಲೆಯಲ್ಲೂ ಸಹ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದೆ.
Discussion about this post