ಕಲ್ಪ ಮೀಡಿಯಾ ಹೌಸ್ | ಶ್ರೀನಗರ
ಪಹಲ್ಗಾಮ್ ದಾಳಿಯ ಉಗ್ರರಿಗೆ ಊಟ-ಆಶ್ರಯ ನೀಡಿ ನೆರವು ನೀಡಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಹೋಗಿ, ನದಿಗೆ ಹಾರಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಇಮ್ತಿಯಾಜ್ ಅಹ್ಮದ್ ಮಾಗ್ರೆ(23) ಎಂದು ಗುರುತಿಸಲಾಗಿದ್ದು, ಈತ ಪಹಲ್ಗಾಮ್ ದಾಳಿಕೋರರಿಗೆ ಸಕಲ ನೆರವು ನೀಡುತ್ತಿದ್ದ ಎಂದು ಮೂಲಗಳು ವರದಿ ಮಾಡಿವೆ.
ಹಲವು ಅನುಮಾನಗಳ ಹಿನ್ನೆಲೆಯಲ್ಲಿ ಮಾಹಿತಿ ಪಡೆದು ಈತನನ್ನು ಭದ್ರತಾ ಪಡೆಗಳು ಬಂಧಿಸಿ ವಿಚಾರಣೆ ನಡೆಸಿದ್ದವು.ವಿಚಾರಣೆ ವೇಳೆ ಇಮ್ತಿಯಾಜ್ ತಾನು ಕಾಡಿನಲ್ಲಿ ಅಡಗಿದ್ದ ಭಯೋತ್ಪಾದಕರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದ.
ಈತನ ಮಾಹಿತಿಯ ಆಧಾರದಲ್ಲಿ ಪೊಲೀಸರು ಇಮ್ತಿಯಾಜ್‌ನನ್ನು ಭಯೋತ್ಪಾದಕರು ಅಡಗಿದ್ದ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾಗ, ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಈ ವೇಳೆ ನದಿಗೆ ಹಾರಿದ್ದು, ತುಂಬ ದೂರ ಈಜಲಾಗದೇ, ಮುಳುಗಿ ಮೃತಪಟ್ಟಿದ್ದಾನೆಂದು ಭದ್ರತಾ ಪಡೆಗಳು ತಿಳಿಸಿವೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎತ್ತರದ ಪ್ರದೇಶದಿಂದ ಸೆರೆಹಿಡಿಯಲಾದ ವೀಡಿಯೊದಲ್ಲಿ, ಆರೋಪಿ ನದಿಗೆ ಹಾರುವ ಮೊದಲು ಅರಣ್ಯ ಪ್ರದೇಶವನ್ನು ಗಮನಿಸುತ್ತಿರುವುದು, ನದಿಗೆ ಹಾರಿದ ತಕ್ಷಣ, ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿರುವುದು ಕಂಡು ಬಂದಿದೆ. ಇದೀಗ ಈ ಘಟನೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಒತ್ತಾಯಗಳೂ ಕೇಳಿ ಬರುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post