ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಡ್ಯ: ತಾನು ಒಂದು ವರ್ಷಗಳಿಂದ ಗೋಲಕದಲ್ಲಿ ಕೂಡಿಟ್ಟಿದ್ದ ಹಣವನ್ನು ಕೋವಿಡ್19 ಪ್ರಧಾನಮಂತ್ರಿ ಪರಿಹಾರ ನಿಧಿಗೆ ಪಾಂಡವಪುರದ 6 ವರ್ಷದ ಈ ಬಾಲಕಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಪಾಂಡವಪುರ ಪಟ್ಟಣದ 6 ವರ್ಷದ ಪುಣ್ಯ ಎಂಬ ಬಾಲಕಿ ತಾನು ಒಂದು ವರ್ಷ ಗೋಲಕದಲ್ಲಿ ಪೈಸೆ ಪೈಸೆ ಕೂಡಿಟ್ಟಿದ್ದ ಹಣವನ್ನು ಕೊರೊನೊ ವೈರಸ್ ತಡೆಗಟ್ಟಲು ಹಾಗೂ ಪರಿಹಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿಹಾರ ನಿಧಿಗೆ ವಿತರಿಸಿದ್ದಾಳೆ.
ಪಾಂಡವಪುರ ತಾಲೂಕು ಪಂಚಾಯ್ತಿ ಬಿಜೆಪಿ ಸದಸ್ಯೆ ಮಂಗಳ ನವೀನ್ ಕುಮಾರ್ ಹಾಗೂ ಬಿಜೆಪಿ ಮುಖಂಡ ನವೀನ್ ಕುಮಾರ್ ದಂಪತಿಯ ಪುತ್ರಿ ಪುಣ್ಯಳಿಂದ ಕೂಡಿಟ್ಟಿದ್ದ ಗೋಲಕ ಹಣವನ್ನು ಬಿಜೆಪಿ ಜಿಲ್ಲಾ ಮುಖಂಡ ನಾಗಣ್ಣಗೌಡ, ಪಾಂಡವಪುರ ತಾಲೂಕು ಬಿಜೆಪಿ ಅಧ್ಯಕ್ಷ, ಪುರಸಭೆ ಸದಸ್ಯ ಎಲ್. ಅಶೋಕ್ ಮೂಲಕ ಪ್ರಧಾನಮಂತ್ರಿ ನಿಧಿಗೆ ಹಣವನ್ನು ದೇಣಿಗೆ ನೀಡಲು ಹಸ್ತಾಂತರ ಮಾಡಲಾಯಿತು.
ಈ ವೇಳೆ ನಮ್ಮೊಂದಿಗೆ ಮಾತನಾಡಿದ ಪುಣ್ಯ, ನಾನು ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಭಿಮಾನಿಯಾಗಿದ್ದೇನೆ. ಕೊರೋನಾ ವೈರಸ್ ಹರಡದಂತೆ ಎಲ್ಲರೂ ಜಾಗೃತರಾಗಿ ದಯವಿಟ್ಟು ಮನೆಯಲ್ಲೇ ಇರಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
Get in Touch With Us info@kalpa.news Whatsapp: 9481252093

















