ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಬಿಸಿ ಸಾಂಬಾರ್ ಬಿದ್ದ ಪರಿಣಾಮ ಆರು ವರ್ಷದ ಬಾಲಕಿಯ ಮುಖ ಹಾಗೂ ಬೆನ್ನಿನ ಭಾಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಮ್ಮನಹಳ್ಳಿ ಅಂಗನವಾಡಿಯಲ್ಲಿ ನಿಹಾರಿಕಾ ಎಂಬ ಬಾಲಕಿಯ ಮೇಲೆ ಬಿಸಿ ಸಾಂಬಾರು ಬಿದ್ದ ಪರಿಣಾಮ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಅಂದು ಊಟದ ಸಮಯದಲ್ಲಿ ನಿಹಾರಿಕಾ ವಾಟರ್ ಬಾಟಲ್ ತರಲು ಓಡಿ ಹೋಗಿದ್ದಾಳೆ. ಆ ಕಡೆಯಿಂದ ಅಂಗನವಾಡಿಯ ಆಯಾ ಲಕ್ಷ್ಮಿ ಮಕ್ಕಳಿಗೆ ಊಟ ಬಡಿಸಲು ಬಿಸಿ ಸಾಂಬಾರ್‌ನ್ನು ತರುತ್ತಿದ್ದ ವೇಳೆ ಇಬ್ಬರ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಆಯಾ ಕೈಯಲ್ಲಿ ಇದ್ದ ಬಿಸಿ ಸಾಂಬಾರ್ ನಿಹಾರಿಕಾಳ ಮುಖ ಹಾಗೂ ಬೆನ್ನಿನ ಭಾಗಕ್ಕೆ ಬಿದ್ದ ಪರಿಣಾಮ ಗಂಭೀರವಾಗಿ ಸುಟ್ಟ ಗಾಯಗಳು ಆಗಿವೆ ಎಂದು ತಿಳಿದು ಬಂದಿದೆ.
Also read: ಶಂಕಿತ ಉಗ್ರನ ಸೆರೆಹಿಡಿದ ಐಎಸ್‌ಡಿ, ಎನ್‌ಐಎ ಅಧಿಕಾರಿಗಳು: ಎಲ್ಲಿ ಗೊತ್ತಾ?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















