ಮಂಡ್ಯ: ಪುಲ್ವಾಮದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದ ಸಿಆರ್’ಪಿಎಫ್ ಯೋಧರಿಗೆ ಶ್ರೀರಂಗಪಟ್ಟಣದ ಗಂಜಾಮ್’ನಲ್ಲಿ ಚಿಣ್ಣರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಕ್ಯಾಂಡಲ್ ಹಿಡಿದ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಚಿಣ್ಣರು, ಯೋಧರು, ಭಾರತೀಯ ಸೇನೆಯ ತ್ಯಾಗವನ್ನು ಕೊಂಡಾಡಿದರು. ಗ್ರಾಮದ ಬೀದಿಯಲ್ಲಿ ಯೋಧರಿಗೆ ಮತ್ತು ದೇಶಕ್ಕೆ ಜೈಕಾರ ಕೂಗುತ್ತಾ ಚಿಣ್ಣರು ದೇಶಪ್ರೇಮ ಮೆರೆದರು.
ಚಿಣ್ಣರ ದೇಶ ಪ್ರೇಮಕ್ಕೆ ಕಂಡು ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗ್ರಾಮಸ್ತರು ಕೈಜೋಡಿಸಿದರು.
















