ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ವಯನಾಡ್ ಭೀಕರ ಜಲಪ್ರಯಳಯಕ್ಕೆ #Wayanad Landslide ಮಂಡ್ಯದ ಕುಟುಂಬವೊಂದು ಬಲಿಯಾಗಿದ್ದು, ಇಬ್ಬರು ಸಾವನ್ನಪ್ಪಿ, ಮೂವರು ಗಾಯಾಳುಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಭೀಕರ ಜಲಪ್ರಳಯಕ್ಕೆ 143 ಮಂದಿ ಬಲಿಯಾಗಿದ್ದು, ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಕುಟುಂಬವೊಂದು ಸಿಲುಕಿದೆ. ಈ ಕುಟುಂಬದ ಪೈಕಿ ಅಜ್ಜಿ ಮೊಮ್ಮಗ ಸಾವನ್ನಪ್ಪಿದ್ರೆ, ಇನ್ನುಳಿದ ಮೂವರು ಗಾಯಾಳುಗಳಾಗಿ ಪತ್ತೆಯಾಗಿದ್ದಾರೆ.
ಭೂಕುಸಿತದ ಭೀಕರತೆ ಕುರಿತು ಕುಟುಂಬಸ್ಥರ ನೆನೆದು ಮಗಳು ಮಂಜುಳಾ ಕಣ್ಣೀರಿಟ್ಟಿದ್ದಾರೆ. ತುಂಬಾ ಮಳೆ ಬರುತ್ತಿದೆ ನಾಳೆ ಬರುತ್ತೇವೆ ಎಂದವರು ಬರಲೇ ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪುತ್ರಿ ಮಂಜುಳಾ ಮಾತನಾಡಿ, ಮಳೆ ಜಾಸ್ತಿ ಆಗ್ತಿದೆ ಅಂತ ಟಿವಿಯಲ್ಲಿ ತೋರಿಸುತ್ತಿದ್ದಾರೆ ಬಂದು ಬಿಡಿ ಅಂದೆ. ಇಲ್ಲಿ ಅಷ್ಟು ಮಳೆ ಇಲ್ಲ ಆದರೆ ನಾಳೆ ಬರುತ್ತೇವೆ. ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತಿದ್ದೇವೆ ಎಂದರು. ಬೆಳಗ್ಗೆ ಆಗುವ ಮುನ್ನವೇ ನೀರಲ್ಲಿ ಕೊಚ್ಚಿ ಹೋದರು ಎಂದು ಕಣ್ಣೀರಿಟ್ಟಿದ್ದಾರೆ.
ನಾವು ಹೊಸದಾಗಿ ಮನೆ ಕಟ್ಟಿದ್ದೇವೆ. ಮುಂದಿನ ತಿಂಗಳು ಗೃಹಪ್ರವೇಶ ಇತ್ತು. ಅಷ್ಟರಲ್ಲಿ ನನ್ನ ಅಮ್ಮನಿಗೆ (ಲೀಲಾವತಿ) ಬಂಡೆ ಹೊಡೆದು ಕೊಚ್ಚಿ ಹೋಗಿದ್ದಾರೆ. ಪಾಪು ನಿಹಾಲ್ನ ಹಿಡಿದುಕೊಳ್ಳೋಣ ಎಂದು ಅಂದುಕೊಳ್ಳುವಷ್ಟರಲ್ಲಿ ಅವನ ಮೇಲೆ ಗೋಡೆ ಬಿದ್ದಿದೆ. ನನ್ನ ತಂದೆ ಪಾಪುಗಾಗಿ ಹುಡುಕಿದ್ದಾರೆ. ಎಲ್ಲೂ ಸಿಕ್ತಿಲ್ಲ. ನನ್ನ ಅನಿಲ್ ಹೇಗೋ ಬಚಾವ್ ಆಗಿದ್ದಾನೆ. ಅವನಿಗೆ ಕಣ್ಣು, ಮೂಗು, ಶ್ವಾಸಕೋಶಕ್ಕೆ ಮಣ್ಣು ತುಂಬಿದೆ. ಬೆನ್ನು ಮುಳೆ ತುಂಡಾಗಿದೆ ಎಂದು ಮಂಜುಳಾ ಕಣ್ಣೀರಿಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post