ಮಂಡ್ಯ: ದೇಶದಲ್ಲೇ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಆರಂಭದಿಂದಲೂ ಹಾವು-ಏಣಿ ಆಟದಂತೆಯೇ ಏರು ಪೇರಾಗಿದ್ದ ಮತ ಎಣಿಕೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಂದು ಹಂತದಲ್ಲಿ ನಿಖಿಲ್ ಗೆಲುವು ಸಾಧಿಸುತ್ತಾರೆ ಎಂಬಂತೆ ಅಂತರ ಕೇವಲ 1-2 ಸಾವಿರದ ಒಳಗೇ ಪೈಪೋಟಿಯಿತ್ತು.
ಆದರೆ, ಅಂತರ ಹೆಚ್ಚಿಸಿಕೊಂಡ ಸುಮಲತಾ 20 ಸಾವಿರಕ್ಕೆ ಏರಿಕೆಯಾದರು. ಈ ಅಂತರ ಹೆಚ್ಚಾಗುತ್ತಾ ಅಂತಿಮವಾಗಿ 90 ಸಾವಿರ ಮತಗಳ ಅಂತರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ, ಗೆಲುವಿನ ನಗೆ ಬೀರಿದ್ದಾರೆ.
Discussion about this post