ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ರಾಜ್ಯದ 28 ಕ್ಷೇತ್ರಗಳಲ್ಲೂ ಸಹ ಎನ್’ಡಿಎ ಮೈತ್ರಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ನಿಖಲ್ ಕುಮಾರಸ್ವಾಮಿ #Nikhil Kumaraswamy ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಗಳ ಪರವಾಗಿ ರಾಜ್ಯದಾದ್ಯಂತ ವಿಶ್ವಾಸವಿದೆ. 28 ಕ್ಷೇತ್ರಗಳಲ್ಲೂ ಸಹ ನಾವು ಗೆಲುವು ಸಾಧಿಸುತ್ತೇವೆ. ಸಮನ್ವಯ ಸಮಿತಿ ಸಭೆಯಲ್ಲೂ ಸಹ ಈ ಕುರಿತಂತೆ ಚರ್ಚಿಸಿದ್ದು, ಯಶಸ್ಸು ಸಾಧಿಸಲು ಒಗ್ಗಟ್ಟಾಗಿ ಮುನ್ನಡೆಯುವ ನಿಲುವು ಕೈಗೊಳ್ಳಲಾಗಿದೆ ಎಂದರು.
ಮೇಲ್ಮಟ್ಟದ ನಾಯಕರಲ್ಲಿ ಮೈತ್ರಿಯಾಗಿದೆ ನಿಜ. ಆದರೆ, ತಳಮಟ್ಟದ ಕಾರ್ಯಕರ್ತರೂ ಸಹ ಇದಕ್ಕೆ ಪೂರಕವಾಗಿ ಮೈತ್ರಿ ಯಶಸ್ಸಿಗಾಗಿ ಶ್ರಮಿಸಬೇಕು. ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
Also read: ಕುಮಾರಸ್ವಾಮಿ 100% ಗೆಲ್ತಾರೆ, ನಾಳೆ ಸುಮಲತಾ ಬಿಜೆಪಿ ಸೇರ್ತಾರೆ | ಯಡಿಯೂರಪ್ಪ ಹೇಳಿಕೆ
ಮಂಡ್ಯದಲ್ಲಿ ಕುಮಾರಸ್ವಾಮಿ ಅವರ ಸ್ಪರ್ಧೆ ಖಚಿತಗೊಂಡ ಕ್ಷಣದಿಂದಲೇ ಜಿಲ್ಲೆ ಬಿಜೆಪಿ ನಾಯಕರು ಉತ್ಸಾಹದಿಂದ ಜೆಡಿಎಸ್’ನೊಂದಿಗೆ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರ ಶ್ರಮದಿಂದ ಕುಮಾರಸ್ವಾಮಿ ಅವರು ಪ್ರಚಂಡ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರ ಬೆಂಬಲಕ್ಕೆ ಸುಮಲತಾ #Sumalatha ಅವರು ನಿಂತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post