ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಡ್ಯ: ವಿವೇಕ ಶಿಕ್ಷಣ ವಾಹಿನಿಯ ರಾಜ್ಯ ಸಂಯೋಜಕ ಪ್ರಬಂಜನ್, ಕು. ಭೂಮಿಕಾ ಮತ್ತು ಭಾಗ್ಯಲಕ್ಷ್ಮಿ ಮನಸ್ವಿನಿ ಅವರು ನಿರಂತರ 15 ದಿನಗಳ ಕಾಲ 35 ಮಕ್ಕಳಿಗೆ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣವನ್ನು ಬೋಧಿಸಿದರು.
ಇಂದು ನಡೆದ ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಮೈಸೂರಿನ ರಾಮಕೃಷ್ಣ ಆಶ್ರಮದ ಸರ್ವಜಯಾನಂದ ಸ್ವಾಮೀಜಿ ಮತ್ತು ಶ್ರೀರಂಗಪಟ್ಟಣದ ಶಾರದಾ ವಿಶ್ವ ಭಾವೈಕ್ಯ ಅಶ್ರಮದ ಅಮೋಘಮಯಿ ಮಾತಾಜಿಯವರ ಸಮ್ಮುಖದಲ್ಲಿ ಸಾಮೂಹಿಕವಾಗಿ ಸ್ತೋತ್ರ ಪಾರಾಯಣ ಮಾಡಿದರು. ಹಾಗೂ ಈ ಮಕ್ಕಳ ಜೀವನ ವಿಷ್ಣು ಸಹಸ್ರನಾಮ ಪಾರಾಯಣದಿಂದ ಶ್ರೇಷ್ಠವಾಗಲೆಂದು ಉಪಸ್ಥಿತರಿದ್ದ ಸ್ವಾಮೀಜಿಯವರು ಹಾರೈಸಿದರು.
ಮೈಸೂರಿನ ಮಧುಸೂಧನ್ ಮತ್ತು ಕಲ್ಬುರ್ಗಿಯ ಸಿದ್ರಾಮು ಅವರು ಕೊಡುಗೆಯಾಗಿ ನೀಡಿದ ವಿಷ್ಣು ಸಹಸ್ರನಾಮ ಪುಸ್ತಕ ಮತ್ತು ಪ್ರಮಾಣಪತ್ರಗಳನ್ನು ಕೊಡುಗೆಯಾಗಿ ಪಡೆದರು. ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಈ ಕಾರ್ಯ ಕೈಗೊಂಡಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.
ನೃತ್ಯ ಕಲಾ ಶಾಲೆಯ ಮುಖ್ಯಸ್ಥ ವಿದುಷಿ ಚಂದನ್ ಮತ್ತು ಮೋಹನ್ ಉಪಸ್ಥಿತರಿದ್ದರು.
ಹರೀಶ್ ಮತ್ತು ನಿತೇಶ್ ಸರಸ್ವತಿ ಹೋಮವನ್ನು ನಡೆಸಿಕೊಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಶುಭವಾಗಲೆಂದು ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post