ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಪ್ರೀತಿಸಿದ ಯುವತಿ ಸಿಗಲಿಲ್ಲ ಎಂಬ ಕಾರಣದಿಂದ ಮನನೊಂದು ಯುವತಿಯ ಮನೆಯ ಮುಂದೆ ಜಿಲೆಟಿನ್ ಕಡ್ಡಿ #GelatinBlast ಸ್ಪೋಟಿಸಿಕೊಂಡು ಯುವಕನೊಬ್ಬ ಭೀಕರವಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗಮಂಗಲದ #Nagamangala ಬಸವೇಶ್ವರ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ಯುವಕನ ಹೆಸರು ಬಹಿರಂಗಗೊಂಡಿಲ್ಲ.
Also Read>> ಸಿಯೋಲ್ | ರನ್ ವೇನಲ್ಲಿ ಪಲ್ಟಿಯಾಗಿ ಹೊತ್ತಿ ಉರಿದ ವಿಮಾನ | 179 ಮಂದಿ ಸಾವು?
ಘಟನೆಯಲ್ಲಿ ಭಗ್ನ ಪ್ರೇಮಿ ಯುವಕನ ದೇಹ ಛಿದ್ರ ಛಿದ್ರವಾಗಿದ್ದು, ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಭೀಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ವರ್ಷ ಅಪ್ರಾಪ್ತ ಯುವತಿಯ ಜೊತೆಗೂಡಿ ಎಸ್ಕೇಪ್ ಆಗಿದ್ದ ಯುವಕನನ್ನು ಪೊಲೀಸರು ಬಂಧಿಸಿ ಪೋಸ್ಕೋ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣದಿಂದ ಜೈಲು ಪಾಲಾಗಿ ಮನ ನೊಂದಿದ್ದ ಯುವಕ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದು ಯುವತಿ ಮನೆ ಮುಂದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post