ಕಲ್ಪ ಮೀಡಿಯಾ ಹೌಸ್ | ಸಿಯೋಲ್ |
181 ಪ್ರಯಾಣಿಕರನ್ನು ಹೊತ್ತು ಇಳಿಯುವಾಗ ವಿಮಾನವೊಂದು ರನ್ ವೇನಲ್ಲಿ ಪಲ್ಟಿಯಾದ ಪರಿಣಾಮ 98ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯ ಘಟನೆ ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
181 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಮುವಾನ್ ನಿಲ್ದಾಣದಲ್ಲಿ ಇನ್ನೇನು ಇಳಿಯಬೇಕಿತ್ತು. ಆದರೆ, ಕ್ಷಣಮಾತ್ರದಲ್ಲಿ ರನ್ ವೇನಲ್ಲಿ ಪಲ್ಟಿಯಾಗಿದ್ದು, ಬೆಂಕಿ ಹೊತ್ತಿ ಉರಿದಿದೆ. ಪರಿಣಾಮವಾಗಿ ಈವರೆಗೂ 98ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಬ್ಯಾಂಕಾಕ್’ನಿಂದ #Bangkok 175 ಪ್ರಯಾಣಿಕರು ಮತ್ತು 6 ಸಿಬ್ಬಂದಿಯನ್ನು ಹೊತ್ತ ಜೆಜು ಏರ್ ವಿಮಾನವು ಯಾವುದೇ ಸ್ಪಷ್ಟವಾದ ಲ್ಯಾಂಡಿಂಗ್ ಗೇರ್ ಇಲ್ಲದೆ ರನ್’ವೇ ಟಚ್ಡೌನ್ ಮಾಡಲು ಪ್ರಯತ್ನಿಸಿದಾಗ ಮತ್ತು ಸ್ಫೋಟದಲ್ಲಿ ಗೋಡೆಗೆ ಅಪ್ಪಳಿಸಿದಾಗ ಈ ಅಪಘಾತ ಸಂಭವಿಸಿದೆ.
ಮುವಾನ್ನಲ್ಲಿನ ವಿಮಾನ ನಿಲ್ದಾಣದಿಂದ ಗಾಳಿಯಲ್ಲಿ ಕಪ್ಪು ಹೊಗೆ ಹೊರಹೊಮ್ಮುವುದು ಅಪಘಾತದ ಭೀಕರತೆಯನ್ನು ಸಾರುತ್ತಿದೆ. ಅಗ್ನಿಶಾಮಕ ದಳದವರು ನಂದಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಯೋನ್ಹಾಪ್ ಪ್ರಕಾರ, ಪಾರುಗಾಣಿಕಾ ಕಾರ್ಯಾಚರಣೆ ಮುಂದುವರೆದಂತೆ ಇಬ್ಬರು ಜನರನ್ನು ಅವಶೇಷಗಳಿಂದ ಹೊರತೆಗೆಯಲಾಯಿತು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಜಿಜು ಏರ್ ಸಿಇಒ ಕಿಮ್ ಇ-ಬೇ, ಮೊದಲು, ನಾನು ಜೆಜು ಏರ್’ಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ತಲೆಬಾಗಿ ನನ್ನ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರಿಗೆ ಮತ್ತು ಅವರ ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಮತ್ತು ಕ್ಷಮೆಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಹಕ್ಕಿಗಳ ದಾಳಿ ಅಪಘಾತಕ್ಕೇ ಕಾರಣ: ವರದಿ
ಮುವಾನ್ನಲ್ಲಿನ ಮಾರಣಾಂತಿಕ ಅವಳಿ-ಎಂಜಿನ್ ವಿಮಾನ ಅಪಘಾತವು ಪಕ್ಷಿಗಳ ಹಿಂಡುಗಳೊಂದಿಗೆ ಘರ್ಷಣೆಯಿಂದ ಉಂಟಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದು ಲ್ಯಾಂಡಿಂಗ್ ಗೇರ್’ನ ಅಸಮರ್ಪಕ ಕಾರ್ಯಕ್ಕೆ ಕಾರಣವಾಯಿತು ಎಂದು ಕೊರಿಯಾ ಹೆರಾಲ್ಡ್ ವರದಿ ಮಾಡಿದೆ.
ದಕ್ಷಿಣ ಕೊರಿಯಾದ #SouthKorea ದಕ್ಷಿಣ ಜಿಯೋಲ್ಲಾ ಪ್ರಾಂತ್ಯದ ಪ್ರಮುಖ ಪ್ರಾದೇಶಿಕ ಕೇಂದ್ರವಾದ ನೈಋತ್ಯ ಕರಾವಳಿ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಸಮಯ ಬೆಳಗ್ಗೆ 9:07 ಕ್ಕೆ ಈ ಘಟನೆ ಸಂಭವಿಸಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಮೊದಲ ಪ್ರಮುಖ ಘಟನೆಯನ್ನು ಇದು ಗುರುತಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post