ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಇಂಡಿಗೋ ವಿಮಾನಯಾನ ಸೇವೆಯ #Indigo Airline Service ಸಮಸ್ಯೆ ಮುಂದುವರೆದಿದ್ದು, ಮಂಗಳೂರಿಗೂ ಸಹ ಇದರ ಬಿಸಿ ತಟ್ಟಿದೆ.
ಕರಾವಳಿಯ ಮಂಗಳೂರಿಗೂ ಸಹ ಇಂಡಿಗೋ ಸಮಸ್ಯೆ ಕಾಡುತ್ತಿದ್ದು, ಇದು ಡಿ.13ವರೆಗೂ ಮುಂದುವರೆದಿದೆ.
ಡಿ.8 ರಿಂದ 13 ರವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಹೊರಡುವ ಒಟ್ಟು 44 ವಿಮಾನಗಳು ರದ್ದಾಗಿವೆ ಎಂದು ವರದಿಯಾಗಿದೆ.
ಮಂಗಳೂರು-ಬೆಂಗಳೂರು, ಬೆಂಗಳೂರು-ಮಂಗಳೂರು, ಮಂಗಳೂರು-ಮುಂಬೈ, ಮುಂಬೈ-ಮಂಗಳೂರು ನಡುವೆ ಇಂಡಿಗೋ ವಿಮಾನ ಸಂಚಾರ ಇರುವುದಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರಿನಿಂದ ಹೊರ ರಾಷ್ಟ್ರಗಳಿಗೆ ಇಂಡಿಗೋ ವಿಮಾನ ಸಂಚಾರ ಇಲ್ಲ. ಕೇವಲ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ದೇಶಿಯ ಹಾಗೂ ಅಂತಾರಾಷ್ಟ್ರೀಯ ಸಂಚಾರ ನಡೆಸುತ್ತಿವೆ.
ಕಳೆದ ಮೂರು ದಿನಗಳಿಂದ ಇಂಡಿಗೋ ವಿಮಾನ ಸಂಚಾರ ರದ್ದತಿಯಿಂದಾಗಿ ದೇಶೀಯ ಪ್ರಯಾಣಕ್ಕೆ ತೊಂದರೆ ಉಂಟಾಗಿದೆ.
ಮಂಗಳೂರಿನಿಂದ ಮುಂಬೈ, ಬೆಂಗಳೂರು ಮೂಲಕ ಬೇರೆ ಕಡೆಗಳಿಗೆ ಪ್ರಯಾಣಿಸಿದ ಮಂದಿ ಇಂಡಿಗೋ ಮರು ಪ್ರಯಾಣ ರದ್ದತಿಯಿಂದ ಅಲ್ಲೇ ಸಿಕ್ಕಿಹಾಕಿಕೊಂಡ ವಿದ್ಯಮಾನ ನಡೆದಿದೆ.
ಪ್ರಯಾಣಿಕರು ಪ್ರಯಾಣಿಸುವ ಮೊದಲು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















