ಮಂಗಳೂರು: ಮಹಿಳೆಯೋರ್ವಳ ತಲೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿ, ಗೋಣಿಚೀದಲ್ಲಿ ಕಟ್ಟಿ ಎಸೆದಿರುವ ಬರ್ಭರ ಘಟನೆ ನಡೆದಿದೆ.
ಕದ್ರಿ ಪಾರ್ಕ್ ಸಮೀಪ ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಂಗಡಿ ಪಕ್ಕ ಹೆಲ್ಮೆಟ್ ಇಟ್ಟು ಹೋಗಿದ್ದ. ಅದಾಗಿ ತುಸು ಹೊತ್ತಿನಲ್ಲೇ ಅಲ್ಲೇ ಸಮೀಪದಲ್ಲಿ ರಕ್ತಸಿಕ್ತವಾಗಿದ್ದ ಗೋಣಿಚೀಲವೊಂದು ಸಿಕ್ಕಿದ್ದು ಅದರಲ್ಲಿ ಹೆಲ್ಮೆಟ್ ಸಮೇತವಾಗಿದ್ದ ಅನಾಮಧೇಯ ಮಹಿಳೆಯ ರುಂಡ ಪತ್ತೆಯಾಗಿತ್ತು ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ ಸ್ಥಳೀಯರಿಗೆ ರುಂಡ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಯ ನಂತರ ಕೋಟಿ ಚೆನ್ನಯ್ಯ ವೃತ್ತ ಸಮೀಪ ರುಂಡವಿಲ್ಲದ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿದೆ. ಪತ್ತೆಯಾಗಿರುವ ದೇಹ ಹಾಗೂ ಮಹಿಳೆಯ ತಲೆ ಒಂದೇ ವ್ಯಕ್ತಿಯದೆಂದು ಪೋಲೀಸರು ಶಂಕಿಸಿದ್ದಾರೆ.
ಹತ್ಯೆಯಾದ ಮಹಿಳೆಯ ಗುರುತು ಇನ್ನೂ ತಿಳಿದುಬಂದಿಲ್ಲ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post