ಕಲ್ಪ ಮೀಡಿಯಾ ಹೌಸ್
ಮಂಗಳೂರು: ಮೂಡಬಿದರೆ ತಾಲೂಕು ತೋಡಾರು ಸಮೀಪದ ಹಂಡೆಲು ಎಂಬಲ್ಲಿ ಅಜ್ಜನ ಜೊತೆ ಅಂಗಡಿಗೆ ತೆರಳಿದ್ದ ಮಗು ರಸ್ತೆ ದಾಟುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
ಅಜ್ಮಾ ಫಾತಿಮಾ (5) ಮೃತ ಮಗು. ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿರು ಹಂಡೆಲಿನ ಅಬುಸ್ವಾಲಿಹ್ ಅವರ ಪುತ್ರಿ ಮೃತ ಬಾಲಕಿ.

ಅಜ್ಮಾ ಫಾತಿಮಾ ಮತ್ತು ಆಕೆಯ ಅವಳಿ ಸಹೋದರಿ ಇಬ್ಬರೂ ಅಜ್ಜನ ಜೊತೆ ಅಂಗಡಿಗೆ ಬಂದಿದ್ದರು. ಈ ವೇಳೆ ದೇವಿನಗರ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ಏಕಾಏಕಿ ಬಂದ ಕಾರು ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದೆ ಎನ್ನಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















