ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಫೆ.11ರಂದು ಪುತ್ತೂರಿಗೆ ಭೇಟಿ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಅವರ ಅದ್ದೂರಿ ರೋಡ್ ಶೋ ರದ್ದುಗೊಂಡಿದೆ.
ಹೌದು… ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಮಂಗಳೂರಿನ ಕಾವೂರಿನಿಂದ ಪದವಿನಂಗಡಿ ಮೇರಿಹಿಲ್’ವರೆಗೂ ಸುಮಾರು 2.5 ಕಿಮೀ ದೂರ ಅದ್ದೂರಿ ರೋಡ್ ಶೋ ಆಯೋಜಿಸಲಾಗಿತ್ತು. ಈ ನಡುವೆ ಪದವಿನಂಗಡಿ ಹಾದಿಯಲ್ಲೇ ಕೊರಗಜ್ಜನ ಸ್ಥಾನವಿದ್ದು, ಅಲ್ಲಿ ಕೋಲ ನಡೆಯುವ ವಿಚಾರ ತಿಳಿದ ಅಮಿತ್ ಶಾ ಅವರು ತಮ್ಮ ರೋಡ್ ಶೋವನ್ನೇ ರದ್ದು ಮಾಡಿದ್ದಾರೆ.
ಕೋಲ ನಡೆಯುವ ಸಮಯದಲ್ಲೇ ರೋಡ್ ಶೋ ನಡೆದರೆ ಕೋಲಕ್ಕೆ ಹಾಗೂ ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂಬ ವಿಚಾರವನ್ನು ಸ್ಥಳೀಯ ನಾಯಕರಿಂದ ತಿಳಿದು, ಈ ಸ್ಥಳದಲ್ಲಿ ರೋಡ್ ಶೋವನ್ನು ರದ್ದು ಮಾಡಲಾಗಿದೆ.
Also read: ಮಂಗಳೂರಿನ ಮೂರು ಟಾಪ್ ಕ್ರೈಂ ಸುದ್ದಿಗಳು
ಬೇರೊಂದು ಪ್ರದೇಶದಲ್ಲಿ ರೋಡ್ ಶೋ ಆಯೋಜಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post