ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಲಾಗಿದ್ದು, ಆರು ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು #Narcotic Seize in Mangalore ಜಪ್ತಿ ಮಾಡಿ, ಓರ್ವ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ.
ಮಂಗಳೂರು ಪೊಲೀಸ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಕಾರ್ಯಾಚರಣೆಯಾಗಿದೆ.

Also read: ಗಮನಿಸಿ! ಅ.9 ರಂದು ಶಿವಮೊಗ್ಗ ನಗರದ ಈ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ನೈಜೀರಿಯಾ ಪ್ರಜೆ ಪೀಟರ್ ಇಕೇಡಿ ಬೆಲೊನು ಸಿಕ್ಕಿಬಿದ್ದಿದ್ದಾನೆ.

ಈತ ಬೆಂಗಳೂರು ನಗರದಿಂದ, ಕರ್ನಾಟಕದ ವಿವಿಧ ಭಾಗಗಳಿಗೆ ಹಾಗೂ ಬೆಂಗಳೂರು ಮೂಲಕ ಕೇರಳಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಶಂಕೆಯೂ ವ್ಯಕ್ತವಾಗಿದೆ. ಒಂದು ಫ್ಲಾಟಲ್ಲಿ ಫ್ಯಾಮಿಲಿ ಇರಿಸಿ, ಇನ್ನೊಂದು ಫ್ಲಾಟಲ್ಲಿ ಡ್ರಗ್ಸ್ ಸ್ಟಾಕ್ ಇಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















Discussion about this post