ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಸೆ.19ರಂದು ಗಣೇಶ ಚತುರ್ಥಿಗೆ Ganesha Chathurthi ಸಾರ್ವತ್ರಿಕ (ಸರ್ಕಾರಿ ರಜೆ) ರಜೆ ಘೋಷಣೆ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ VHP ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಗಣೇಶ ಚತುರ್ಥಿ ಹಬ್ಬದ ದಿನದ ರಜೆ ಸರ್ಕಾರಿ ರಜೆಗಳ ಪಟ್ಟಿಯಲ್ಲಿ ಸೆ.18ರಂದು ಇದೆ. ಆದರೆ, ಗಣೇಶ ಚತುರ್ಥಿಯನ್ನು ಸೆ.19ರಂದು ಆಚರಿಸಲಾಗುತ್ತಿದೆ. ಹೀಗಾಗಿ, ಸೆ.19ರಂದೇ ರಜೆಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿಗಳಾದ ಶರಣ್ ಪಂಪುವೆಲ್, ಜಿಲ್ಲಾಧ್ಯಕ್ಷರಾದ ಎಚ್.ಕೆ. ಪುರುಷೋತ್ತಮ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕ್ ನವೀನ ಮೂಡುಶೆಡ್ಡೆ ಇದ್ದರು.
Also read: ಭೀಕರ ರಸ್ತೆ ಅಪಘಾತ: ಕಾರ್ಕಳ ನಿವಾಸಿ ಯೂಟ್ಯೂಬರ್ ದುರ್ಮರಣ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















