ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ, ಸೂಕ್ತ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿದ್ದು, ಡಾ. ಧನಂಜಯ ಸರ್ಜಿ #Dr. Dananjaya Sarji ಅವರ ಗೆಲುವು ಶತಸಿದ್ಧ ,ಈ ನಿಟ್ಟಿನಲ್ಲಿ ಶ್ರಮಿಸುವೆ ಎಂದು ಪದವೀಧರ ಕ್ಷೇತ್ರದ ಸಹ ಸಂಚಾಲಕರಾದ ವಿಕಾಸ್ ಪುತ್ತೂರ್ ಹೇಳಿದರು.
ಮಂಗಳೂರಿನ ಬಿಜೆಪಿ ಕಛೇರಿಯಲ್ಲಿ ಮಂಗಳವಾರ ಬೆಳಗ್ಗೆ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Also read: ಫ್ರೀ ಬಸ್ ಸೀಟಿಗಾಗಿ ಚಪ್ಪಲಿಯಲ್ಲಿ ಹೊಡೆದಾಡಿ, ಬಟ್ಟೆ ಎಳೆದಾಡಿಕೊಂಡ ಮಹಿಳೆಯರು
ಪದವೀಧರ ಕ್ಷೇತ್ರದ ಸಂಚಾಲಕರು ಹಾಗೂ ಶಾಸಕರಾದ ಹರೀಶ್ ಪೂಂಜಾ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ , ಶಿಕ್ಷಕರ ಕ್ಷೇತ್ರದ ಸಂಚಾಲಕರು ಹಾಗೂ ಶಾಸಕರಾದ ಪ್ರತಾಪ್ ಸಿಂಹ ನಾಯಕ್,ಶಾಸಕಿ ಭಾಗೀರಥಿ ಮುರುಳಿ, ಸಹ ಸಂಚಾಲಕರಾದ ವಿಕಾಸ್ ಪುತ್ತೂರ್, ಡಾ.ಮಂಜುಳಾ ರಾವ್, ಹಿರಿಯರಾದ ಮೋನಪ್ಪ ಭಂಡಾರಿ, ಗಣೇಶ್ ಕಾರ್ಣೀಕ್, ಬಾಲಕೃಷ್ಣ ಭಟ್, ಸಂಜೀವ್ ಮಟಂದೂರ್ ಮತ್ತಿತರರು ಹಾಜರಿದ್ದರು, ಕಾರ್ಯಕ್ರಮಕ್ಕೂ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post