No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Tuesday, September 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ದಕ್ಷಿಣ ಕನ್ನಡ

ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶಿ ಹೂಡಿಕೆ ವಂಚನೆ |11 ಜನರ ಬಂಧನ

kalpa News by kalpa News
February 7, 2026
in ದಕ್ಷಿಣ ಕನ್ನಡ
0
ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶಿ ಹೂಡಿಕೆ ವಂಚನೆ |11 ಜನರ ಬಂಧನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  |

ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ವಂಚನೆ ಮಾಡಿದ 11 ಜನ ಆರೋಪಿತರ ತಂಡವನ್ನು ಮಂಗಳೂರು ನಗರ ಸೆನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ಧಾರೆ.

ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೈನಾದ ವಂಚಕರಿದ್ದು, ನೇಪಾಳ ಪೊಲೀಸರು ಚೈನಾದ ವಂಚಕರನ್ನು ದಸ್ತಗಿರಿ ಮಾಡಿರುತ್ತಾರೆ.  05 ಭಾರತೀಯ ಆರೋಪಿತರು ತಲೆಮರಿಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಆರೋಪಿತರ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಗಳನ್ನು ಪರಿಶೀಲಿಸಿದಾಗ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಕಂಡುಬಂದಿದ್ದು, ಸದ್ರಿ ಬ್ಯಾಂಕ್  ಖಾತೆಗಳ ಮೇಲೆ ಒಟ್ಟು 4580 ಕ್ಕೂ ಹೆಚ್ಚು NCRP PORTAL ನಲ್ಲಿ ಪ್ರಕರಣಗಳು ದಾಖಲಾಗಿದೆ ಇದರಲ್ಲಿ 1 ಬ್ಯಾಂಕ್ ಖಾತೆಯಲ್ಲಿ 167 ಕೋಟಿ ಹಣ ವರ್ಗಾವಣೆಯಾಗಿರುತ್ತದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ಸುಮಾರು ರೂ 30,70,26,725  ಹಣ ವರ್ಗಾವಣೆ ಆಗಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆದಬೇಕಾಗಿದೆ.

ಪ್ರಕರಣದ ವಿವರ

ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣಾ ಅ.ಕ್ರ 02/2026 ಕಲಂ 66(ಸಿ), 66(ಡಿ), ಐಟಿ ಕಾಯ್ದೆ ಕಲಂ 318(4), 308(5) ಬಿಎನ್ ಎಸ್ ಪ್ರಕರಣದಲ್ಲಿ ಪಿರ್ಯಾದಿದಾರರಿಂದ 1 ಕೋಟಿ 38 ಲಕ್ಷ  ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ  ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಸದ್ರಿ ವಂಚಕರು ನೇಪಾಳದಲ್ಲಿ ಕುಳಿತು ವಂಚನೆ ಮಾಡುತ್ತಿದ್ದ ಬಗ್ಗೆ ತನಿಖೆಯಿಂದ ಹಾಗೂ ತಾಂತ್ರಿಕ ವಿಶ್ಲೇಷಣೆಯಿಂದ ಪತ್ತೆ ಹಚ್ಚಿ ವಂಚಕರ ಗ್ಯಾಂಗ್ ನ್ನು ದಸ್ತಗಿರಿ ಮಾಡಲಾಗಿದೆ.
ಒಂದು ವಂಚಕರ ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್ ರವರನ್ನು ನೇಮಕ ಮಾಡಿಕೊಂಡು, ವಂಚನೆಯ ಹಣವನ್ನು ವರ್ಗಾವಣೆ ಮಾಡುವುದು ಹಾಗೂ ಹಣವನ್ನು USDT  ನಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಾರೆ.

ಇನ್ನೊಂದು ವಂಚಕರ ತಂಡವು ಕಾಂಬೋಡಿಯಾ ಮತ್ತು ಇತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹೆಚ್ಚು ಹಣ ಗಳಿಸುವ ಆಮೀಷ ಒಡ್ಡಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದು, ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು  ನಿಯಂತ್ರಣ ಮಾಡುತ್ತಿರುವುದು ತಿಳಿದುಬಂದಿರುತ್ತದೆ.

ಸೆನ್ ಪೊಲೀ್ಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಉಪಯೋಗಿಸಲು ಫಿರ್ಯಾದಿಗೆ ನೀಡಿದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ  NCRP  PORTAL  ನಲ್ಲಿ ಸುಮಾರು 128 ಪ್ರಕರಣಗಳು ಮತ್ತು ಒಟ್ಟು 36 FIR ದಾಖಲಾಗಿರುತ್ತದೆ.
ಬ್ಯಾಂಕ್ ಖಾತೆಗಳನ್ನು ಪಡೆಯಲು ವಂಚಕರು ಅನುಸರಿಸುವ  ವಿಧಾನ

ವಂಚಕರು ಬೇರೆ ಬೇರೆ ಕಂಪನಿಯ ಹೆಸರಿನಲ್ಲಿ  ಇನ್ ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮೂಲಕ ತಮ್ಮ ನಿಜವಾದ ಹೆಸರುಗಳನ್ನು ಮರೆ ಮಾಚಿ ಜಾಹೀರಾತು ಮೂಲಕ ಕಾರ್ಪೋರೇಟ್ ಖಾತೆಗಳು, ಕರೆಂಟ್ ಖಾತೆಗಳು, USDT TO INR  Exchange, Management Operator ಗಳು ಮತ್ತು OTP Worker ರವರು ಬೇಕಾಗಿದ್ದಾರೆ ಎಂಬುದಾಗಿ ಟೆಲಿಗ್ರಾಂ ಮತ್ತು ಇನ್ಸಾಟ್ರಾ ಗ್ರಾಂ ಮೂಲಕ ಬ್ಯಾಂಕ್ ಖಾತೆದಾರರನ್ನು ಸಂಪರ್ಕಿಸುತ್ತಾರೆ.

ದುರಾಸೆಗೊಳಗಾದವರು ಅವರನ್ನು ಸಂಪರ್ಕಿಸಿದಾಗ 5% ರಿಂದ 10%  ಕಮಿಷನ್ ಕೊಡುವುದಾಗಿ ಮತ್ತು ಅವರಿಗೆ ಬೇಕಾದ ವಿಮಾನ ಟಿಕೇಟ್, ಕ್ಯಾಬ್ ಬುಂಕಿಂಗ್, ಹೋಟೇಲ್, ಲಾಡ್ಜ್ ವ್ಯವಸ್ಥೆ ನೀಡಿವುದಾಗಿ ಹಾಗೂ ಇವರಿಗೆ ವಿವಿಧ ರೀತಿಯ ಆಮಿಷಗಳನ್ನು ನೀಡಿ, ದುಬೈ, ನೇಪಾಳ ಮುಂತಾದ ಕಡೆಗಳಲ್ಲಿ ಕರೆಸಿಕೊಳ್ಳುತ್ತಾರೆ. ನಂತರ ಖಾತೆದಾರರನ್ನು ಮತ್ತು ಖಾತೆಗಳನ್ನು ಪೂರೈಸುವವರನ್ನು ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ವ್ಯವಸ್ಥೆ ಮಾಡಿರುತ್ತಾರೆ.  ವಂಚಕರು ತಮಗೆ ಸೇರಿದ ವಿವಿಧ ಕಂಪನಿಯ ಮೊಬೈಲ್  ಫೋನ್ ಗಳಿಗೆ ಖಾತೆದಾರರ ಸಿಮ್ ಗಳನ್ನು ಹಾಕಿಕೊಂಡು, Net Banking,  ಮುಖಾಂತರ ವಂಚನೆಯ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ವಂಚಕರು ವಂಚನೆ ಮಾಡಿದ ಹಣದಿಂದ USDT ಗಳನ್ನು ಬೇರೆ ಬೇರೆ ಕಡೆಯಿಂದ  ಖರೀದಿ ಮಾಡಿ, ಪ್ರತಿದಿನ ವಿದೇಶದಲ್ಲಿನ ಆರೋಪಿತರಿಗೆ ಕಳುಹಿಸುತ್ತಾರೆ.
ಹೂಡಿಕೆದಾರರನ್ನು ಆಕರ್ಷಿಸುವ ವಿಧಾನ

ಕಾಂಬೋಡಿಯಾ ಮತ್ತು ದುಬೈಗಳಲ್ಲಿ ಕುಳಿತು, ನಮ್ಮ ದೇಶದ ನಾಗರಿಕರಿಗೆ ಮುಖ್ಯ ವಂಚಕರು  ಅಪರಿಚಿತ ವಾಟ್ಸಾಪ್ ಮೊಬೈಲ್ ನಂಬ್ರಗಳ ಮೂಲಕ ಇನ್ ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ ಬುಕ್ ಗಳ ಮುಖಾಂತರ ಹೂಡಿಕೆದಾರರನ್ನು ಸಂಪರ್ಕಿಸಿ ಹೆಚ್ಚಿನ ಲಾಭಂಶ ನೀಡುವುದಾಗಿ ಆರ್ಕಷಿಸುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಂಶ ಬಂದಿರುವುದಾಗಿ ಆಪ್ ಮೂಲಕ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭಂಶದ ಹಣವನ್ನು ನೀಡಿ ನಂಬಿಕೆ ಬರುವ ಹಾಗೆ ಮಾಡಿದ ನಂತರ ಉಳಿದ ಹಣನ್ನು ಡ್ರಾ ಮಾಡಬೇಕಾದರೆ, ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕೆಂದು ಪುಸುಲಾಯಿಸಿ ಹಣವನ್ನು ಹೂಡಿಕೆ ಮಾಡಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು  60 ಲಕ್ಷದಿಂದ 01 ಕೋಟಿಯವರೆಗೆ Investment fraud  ಗೆ ಒಳಪಡಿಸುತ್ತಿದೆ.

ಡಿಜಿಟಲ್ ಸ್ಲೇವರಿ ಬಗ್ಗೆ ಎಚ್ಚರವಿರಲಿ

ವಿದೇಶಗಳಲ್ಲಿ ಕೆಲಸಕ್ಕಾಗಿ ನೋಡುತ್ತಿರುವ ಯುವಕರಿಗೆ ನಕಲೀ ಜಾಹಿರಾತುಗಳ, ಏಜೆಂಟ್ ಗಳ  ಮೂಲಕ ನಂಬಿಸಿ, ಪುಸಲಾಯಿಸಿ ಅವರನ್ನು ಟೂರಿಸ್ಟ್ ವೀಸಾ ದಲ್ಲಿ ಮಧ್ಯ ಪ್ರಾಂಚ್ಯ ದೇಶಗಳಿಗೆ ಕರೆದುಕೊಂಡು ಹೋಗಿ ಅವರಿಂದ ದಾಖಲೆಗಳನ್ನು ಮತ್ತು ಪಾಸ್ ಪೋರ್ಟ್ ತೆಗೆದುಕೊಂಡು ಅವರನ್ನು ಅಲ್ಲಿ ಗೊತ್ತಿರದೇ ಇರುವ ಸ್ಥಳದಲ್ಲಿ ಬಂಧಿಸುತ್ತಾರೆ. ಅವರಿಂದ ಒತ್ತಾಯ ಪೂರಕವಾಗಿ ಮುಗ್ದ ಹೂಡಿಕೆದಾರರಿಗೆ ಅವರ ಮಾತೃ ಭಾಷೆಯಲ್ಲೇ ಮಾತನಾಡಿಸಿ ಪುಸಲಾಯಿಸಿ ಹಣ ವರ್ಗಾಹಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ ಉಪಹಾರ ನೀಡದೇ ಹಾಗೂ ಕುಟುಂಬದವರೊಂದಿಗೆ ಸಂಪರ್ಕವನ್ನು ಮಾಡಲು ಅವಕಾಶ ಕೊಡದೇ ಕೂಡಿ ಹಾಕಿ ಭಾರತದ ನಾಗರೀಕರಿಗೆ ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದು, ಈ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರುವುದು.

ಉದ್ಯೋಗಕ್ಕೆ ವಿದೇಶಗಳಿಗೆ ಏಜೆನ್ಸಿ ಮೂಲಕ ಹೋಗುವ ಯುವಕರು ಪ್ರೊಟೆಕ್ಟ್ಸ್ ಆಫ್ ಇಮಿಗ್ರೇಟ್ಸ್ ಬಳಿ ನೊಂದಣಿ ಆಗಿರುವ ಏಜೆನ್ಸಿ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದು ಅವರ ಮೂಲಕ ವಷ್ಟೇ ಕೆಲಸಗಳನ್ನು ಪಡೆದು, ಚೆಕ್ ಮಾಡಿ ಉದ್ಯೋಗಕ್ಕೆ ವಿದೇಶಕ್ಕೆ ಹೋಗುವುದು ಉತ್ತಮ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 06 ಜನರನ್ನು ವಿದೇಶದಲ್ಲಿ ಉತ್ತಮ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅವರನ್ನು ಸೈಬರ್ ಸ್ಲೇವರಿ ಆಗಿ ಕೆಲಸ ಮಾಡಿಸುತ್ತಿದ್ದವರನ್ನು ರಕ್ಷಿಸಲಾಗಿದ್ದು, ಅವರು ನೀಡದ ದೂರಿನ ಮೇಲೆ ಪ್ರಕರಣ ಕೂಡ ದಾಖಲಾಗಿರುತ್ತದೆ.

ಪಿರ್ಯಾದಿದಾರರಿಗೆ ಕಳೆದುಕೊಂಡ ಹಣವು  ಮರಳಿ ಸಿಗದೇ ಇರುವುದಕ್ಕೆ ಕಾರಣಗಳು

ವಂಚಕರು ವಂಚನೆಯಾದ ಹಣದಲ್ಲಿ ಆನ್ ಲೈನ್ ಮೂಲಕ USDT ಗಳನ್ನು ಖರೀದಿ ಮಾಡಿಕೊಂಡು ಅದೇ ದಿನ ಬೇರೆ ದೇಶಗಳಿಗೆ ಕಳುಹಿಸುವುದರಿಂದ ವಿದೇಶಕ್ಕೆ ಹಣ ಹೋಗುತ್ತದೆ.

ವಂಚನೆಗೊಳಗಾದ ದೂರುದಾರರು ಅದೇ ದಿನ ದೂರನ್ನು ನೀಡಲು ವಿಳಂಬ ಮಾಡುವುದರಿಂದ ಹಣ ಮರಳಿ ಸಿಗುವುದು ಕಷ್ಟವಾಗುತ್ತದೆ.

ಬ್ಯಾಂಕ್ ಖಾತೆ ನೀಡುವರೇ ಎಚ್ಚರ

ಕಮೀಷನ್ ಆಸೆಗೆ ಒಳಗಾಗಿ ಬ್ಯಾಂಕ್ ಖಾತೆಯನ್ನು ವಂಚಕರಿಗೆ ನೀಡಿದಲ್ಲಿ ಖಾತೆದಾರರು ಸಹ ಆರೋಪಿತರಾಗುತ್ತಾರೆ. ಮುಖ್ಯ ವಂಚಕರು ವಿದೇಶದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದರಿಂದ ಪ್ರಮುಖ ಆರೋಪಿಗಿಂತ ಮೊದಲೇ ಕಮಿಷನ್ ಆಸೆಗೆ ಒಳಗಾದವರು ಕಾನೂನು ಪ್ರಕಾರ ಶೀಘ್ರವಾಗಿ ದಸ್ತಗಿರಿಯಾಗುತ್ತಾರೆ.

https://kalpa.news/wp-content/uploads/2024/04/VID-20240426-WA0008.mp4

ಹೂಡಿಕೆದಾರರೇ ಎಚ್ಚರ

ವಿದೇಶದಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯ ಆಕರ್ಷಿತ  ಜಾಹೀರಾತುಗಳನ್ನು ನೋಡಿ, ಹೆಚ್ಚಿನ ಲಾಭಾಂಶದ ವಂಚನೆಗೆ ಒಳಗಾಗಬೇಡಿ. ಹಾಗೂ ಹೂಡಿಕೆಯನ್ನು ಮಾಡುವಾಗ ನಕಲಿ ಸೆಬಿ ಸರ್ಟಿಪೀಕೇಟ್, ನಕಲಿ ಡಿಮೇಟ್ ಖಾತೆಗಳನ್ನು ನೋಡಿ ಮೋಸ ಹೋಗಬೇಡಿ.

ಹೆಚ್ಚು ಹಣ ಗಳಿಸಬೇಕೆಂಬ ಆಸೆಗೆ ಬಿದ್ದ ಹೆಚ್ಚಿನ ವಿದ್ಯಾವಂತರು ಇತ್ತಿಚೀನ ದಿನಗಳಲ್ಲಿ ಆನ್ ಲೈನ್  ಹೂಡಿಕೆ, ಹಣ ದ್ವಿಗುಣ, ಟ್ರೇಡಿಂಗ್  ಹೂಡಿಕೆಯಲ್ಲಿ ವಿಚಾರಿಸದೇ ವಂಚಕರ ಮೋಸದ ಬಲೆಗೆ ಬಿದ್ದು, ಹಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ.

ಹೂಡಿಕೆ ಮಾಡಬೇಕಾದರೆ SEBI Registration  ಆಗಿರುವ ಸಂಸ್ಥೆ ಅಥವಾ ಬ್ರೋಕರ್ ರವರಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಮಾಡಿಸುವುದು. ಹೆಚ್ಚಿನ ಲಾಭಾಂಶ ಭರವಸೆಯ ಹೂಡಿಕೆ ಬಗ್ಗೆ ಅತೀ ಹೆಚ್ಚಿನ ಕಾಳಜಿ ಅವಶ್ಯವಾಗಿದೆ.

ಸೈಬರ್ ವಂಚನೆಗೆ ಪರಿಹಾರಗಳು

  • ವಂಚನೆಯಾದ ಒಂದು ಗಂಟೆಯ ಒಳಗೆ 1930 ಗೆ ಕರೆ ಮಾಡುವುದು ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣವೇ ದೂರು ಸಲ್ಲಿಸುವುದು.
  • ಆನ್ ಲೈನ್ ಗೇಮ್, ನಕಲಿ ಲೋನ್ ಆ್ಯಪ್,  ನಕಲಿ ಪಾರ್ಟ ಟೈಮ್ ಜಾಬ್, ನಕಲಿ ಜಾಬ್ ಆಫರ್, ಗಳಿಂದ ದೂರ ಇರುವುದು.
  • APK ಫೈಲ್ ಮತ್ತು ಲಿಂಕ್ ಗಳ ಬಗ್ಗೆ ಜಾಗ್ರತೆಯಿಂದ ಇರುವುದು.
  • ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳು, ಆಕರ್ಷಿಕ ಹೂಡಿಕೆಗಖ ಬಗ್ಗೆ ಜಾಗ್ರೂತರಾಗಿರವುದು.
  • ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಪ್ರೇಮ, ಗೆಳೆತನದ ಮೂಲಕ ಬ್ಯಾಂಕ್ ಖಾತೆಗಳನ್ನು ಮತ್ತು ಸಿಮ್ ಗಳನ್ನು ನೀಡುವುದು, ನಿಮ್ಮ ಅರೆ ನಗ್ನ, ಮತ್ತು ನಗ್ನ ಚಿತ್ರಗಳನ್ನು ಹಂಚಿಕೊಳ್ಳುವುದು, ಗಿಫ್ಟ್ ಕಳುಹಿಸುವುದಾಗಿ ವಂಚನಗೆ ಒಳಗಾಗಿ ಹಣವನ್ನು ಕಳುಹಿಸುವುದರಿಂದ ದೂರವಿರಿ.
  • ವಿಡೀಯೋ ಕಾಲ್ ಮೂಲಕ CBI, POLICE, JUDGES, CUSTOMS, SEBI, TRAI,  ಮುಂತಾದ ಇಲಾಖೆಗಳನ್ನು ಬಳಸಿಕೊಳ್ಳುವ ನಕಲಿ ಅಧಿಕಾರಿಗಳಂತೆ ನಟಿಸಿ, ನಿಮಗೆ ದಸ್ತಗಿರಿ ಬೆದರಿಕೆ ನೀಡಿ ಹಣವನ್ನು ಲೂಟಿ ಮಾಡುವ ವ್ಯಕ್ತಿಗಳಿಂದ ದೂರವಿರಿ. ಯಾವುದೇ ವಿಡೀಯೋ ಕಾಲ್ ಮೂಲಕ ದಸ್ತಗಿರಿ ಮಾಡುವ ಕ್ರಮವನ್ನು ಯಾವ ಇಲಾಖೆಯೂ ಅನುಸರಿಸುತ್ತಿಲ್ಲ. ಹಾಗೂ ಭಾರತೀಯ ಕಾನೂನಿನಲ್ಲಿ ಇರುವುದಿಲ್ಲ. ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡುವುದು.
  • ಆನ್ ಲೈನ್ ಮೂಲಕ ಹೋಟೆಲ್, ಕ್ಯಾಬ್, ಫ್ಲೈಟ್ಸ್ ಬುಕ್ಕಿಂಗ್ ಮಾಡುವಾಗ ಎಚ್ಚರದಿಂದರಬೇಕು.
  • ಗೂಗಲ್ ನಲ್ಲಿ ಸಿಗುವಂತಹ  ಯಾವುದೇ ಕಸ್ಟಮರ್ ಕೇರ್ ಗಳ ಬಗ್ಗೆ ಎಚ್ಚರದಿಂದರಬೇಕು ಹಾಗೂ ಯಾವುದೇ ಓಟಿಪಿಗಳನ್ನು ಶೇರ್ ಮಾಡದೇ ಇರುವುದು.

ದಸ್ತಗಿರಿಯಾದ ಆರೋಪಿತರ ವಿವರ

ಮಕವನ್ ವಿಕ್ರಂ (25) ತಂದೆ: ದೇವರಾಜ್ ಬಾಯ್, ಬಾವಾ ನಗರ್ ಜಿಲ್ಲೆ ಗುಜರಾತ್, ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ತಂದೆ: ಸರಂಜಿತ್ ಕೊಲ್ಲತ್ತಾ ಪಶ್ಚಿಮ ಬಂಗಾಳ, ಪುಪ್ಲ ಶಿವ ಕುಮಾರ್ ರಾವ್ (32) ತಂದೆ: ಲೇಟ್ ಪುಪ್ಲ ಕುಮಾರ್ ರಾವ್, ಸಿಂಗಬುಮ್ ಜಿಲ್ಲೆ ಜಾರ್ಖಾಂಡ್, ಗೌರವ್ ಪಾಂಡೆ (24) ತಂದೆ; ಕೌಶಾಲ್ ಪಾಂಡೆ , ಮಾವೋ ಜಿಲ್ಲೆ ಉತ್ತರ ಪ್ರದೇಶ, ಹರ್ಷ್ ಮಿಸ್ರಾ (22) ತಂದೆ: ಗ್ಯಾನ್ ಪ್ರಕಾಶ್, ಸುಲ್ತಾನ್ ಪುರ್ ಜಿಲ್ಲೆ ಉತ್ತರ ಪ್ರದೇಶ, ರಾಜೇಶ್ ಮಂಡನ್ (30) ತಂದೆ: ಪಾವು ಮಂಡನ್, ಡಿಯೋಗರ್ ಜಿಲ್ಲೆ ಜಾರ್ಖಾಂಡ್, ಮೊಹಮ್ಮದ್ ಆಕೀಬ್ ಅಲಿ (27) ತಂದೆ: ಮೊಹಮ್ಮದ್ ಸಾಬಿತ್ ಅಲಿ, ಲಕ್ನೋ ಜಿಲ್ಲೆ ಉತ್ತರ ಪ್ರದೇಶ, ರಾಜೀವ್ ರಂಜನ್ ಕುಮಾರ್ (30) ತಂದೆ: ಶ್ರೀಕಾಂತ್ ಕುಮಾರ್, ನಳಂದ ಜಿಲ್ಲೆ ಬಿಹಾರ್, ಮಿಥುನ್ ಕುಮಾರ್ ಮಂಗರಾಜ್ (38) ತಂದೆ: ನಿರ್ಮಲ್ ಕುಮಾರ್, ಸಿಂಗಬುಮ್ ಜಿಲ್ಲೆ ಜಾರ್ಖಾಂಡ್, ನೌಶಾದ್ ಅಲಿ (34) ತಂದೆ: ಜೋಕಾನ್ ಅಲಿ, ಝಾನ್ಸಿ ಜಿಲ್ಲೆ ಉತ್ತರ ಪ್ರದೇಶ, ಓಂ ಪ್ರಕಾಶ್  ಯಾಧವ್ (37)ತಂದೆ: ಪ್ರೇಮ್ ಚಂದ್ ಯಾದವ್, ಜೈಪುರ್ ರಾಜಸ್ಥಾನ.

ವಂಚಕರಿಂದ ವಶಪಡಿಸಿಕೊಂಡ ಸೊತ್ತುಗಳ ವಿವರ
ಲ್ಯಾಪ್ ಟಾಪ್ -1, ಮೊಬೈಲ್ ಪೋನ್ ಗಳು-21, ವಿವಿಧ ಕಂಪನಿಯ  ಸಿಮ್ ಕಾರ್ಡ್ ಗಳು – 20, ಬೇರೆ ಬೇರೆ ಬ್ಯಾಂಕ್ ಡೆಬಿಟ್ ಕ್ರೆಡಿಟ್ ಕಾರ್ಡ್ ಗಳು – 20.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaMangaloreNews in KannadaNews Kannadaಮಂಗಳೂರು
Share200Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಕೌಶಲ್ಯ ವೃದ್ಧಿಸಿಕೊಂಡು ಉದ್ಯೋಗ ಪಡೆದುಕೊಳ್ಳಲು ಮಾಹಿತಿ ಶಿಬಿರಗಳು ಸಹಕಾರಿ

Next Post

ತೀರ್ಥಹಳ್ಳಿ | ಜಾನುವಾರು ಕಳ್ಳತನ ಪ್ರಕರಣ | ಮೂವರ ಬಂಧನ

kalpa News

kalpa News

Next Post
ತೀರ್ಥಹಳ್ಳಿ | ಜಾನುವಾರು ಕಳ್ಳತನ ಪ್ರಕರಣ | ಮೂವರ ಬಂಧನ

ತೀರ್ಥಹಳ್ಳಿ | ಜಾನುವಾರು ಕಳ್ಳತನ ಪ್ರಕರಣ | ಮೂವರ ಬಂಧನ

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL