ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಅ.18ರಂದು ಬೆಳಗ್ಗೆ 9 ರಿಂದ ಸಂಜೆ 3:30 ರವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಸ್ಪೆಕ್ಟ್ರಂ ಇಂಡಸ್ಟ್ರಿಯ ಮುಖ್ಯ ವ್ಯವಸ್ಥಾಪಕ ಹಾಗೂ ಕಾನ್ಪೇಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಜೀವನ್ ಸಲ್ದಾನ ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು, ಬೆಂಗಳೂರು, ಮುಂಬೈ, ಗೋವಾ ಹಾಗೂ ಕೇರಳದ ಐಟಿ, ಬಿಪಿಒ, ಇನ್ಸೂರೆನ್ಸ್ ಬ್ಯಾಂಕಿಂಗ್, ಆರೋಗ್ಯ, ಹೊಟೇಲ್, ಆಟೊಮೊಬೈಲ್, ಕ್ರೂಸ್, ಶಿಕ್ಷಣ, ಟೆಲಿಕಮ್ಯುನಿಕೇಷನ್, ಸೇಲ್ಸ್ ಮತ್ತು ರಿಟೈಲ್ ನಂತಹ 60 ಕಂಪೆನಿಗಳು ಸುಮಾರು 2500 ಉದ್ಯೋಗವಕಾಶಗಳನ್ನು ಒದಗಿಸಲಿವೆ.
ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಐಟಿಐ, ಡಿಪ್ಲೋಮಾ, ಕ್ರೂಸ್, ಹೊಟೇಲ್ ಮ್ಯಾನೆಜ್‌ಮೆಂಟ್ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದಲ್ಲಿ ವ್ಯಾಸಂಗ ಪ್ರಯೋಜನವನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಈ ಉದ್ಯೋಗಮೇಳದ ಪ್ರಯೋಜನ ಪಡೆದುಕೊಳ್ಳಬಹುದು.
Also read: ಸಕರಾತ್ಮಕ ಆಲೋಚನೆ, ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ: ಡಾ. ಧನಂಜಯ ಸರ್ಜಿ ಸಲಹೆ
ಯಾವುದೇ ನೋಂದಣಿ ಶುಲ್ಕವಿಲ್ಲದೆ ಭಾಗವಹಿಸಲು ಅವಕಾಶವಿದ್ದು, ಅಭ್ಯರ್ಥಿಗಳು ಸ್ವವಿವರದ ಅನೇಕ ಪ್ರತಿಗಳು ಮತ್ತು ಸೂಕ್ತ ದಾಖಲೆಗಳೊಂದಿಗೆ ಹಾಜರಾಗತಕ್ಕದ್ದು ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















