ಕಲ್ಪ ಮೀಡಿಯಾ ಹೌಸ್ | ಮಂಗಳೂರು/ಮುಂಬೈ |
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಂದೇ ಭಾರತ್ ವಿಶೇಷ ರೈಲು #Vandebharath Special Tain ರಾಜ್ಯಕ್ಕೆ ಮತ್ತೊಂದು ಲಭ್ಯವಾಗುತ್ತಿದ್ದು, ಕರಾವಳಿ ಭಾಗದ ಜನರಿಗೆ ಈ ಮೂಲಕ ಗುಡ್ ನ್ಯೂಸ್ ದೊರೆತಿದೆ.
ಮಂಗಳೂರು ಹಾಗೂ ಮುಂಬೈ ನಡುವೆ ನೂತನ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದ್ದು, ಈ ಪ್ರಯಾಣದ ಅವಧಿಯಲ್ಲಿ ಹಾಲಿ ಇರುವ 15 ಗಂಟೆಯಿಂದ 12 ಗಂಟೆಗೆ ಇಳಿಕೆಯಾಗಲಿದೆ.
ಮುಂಬೈ-ಮಂಗಳೂರು #Mumbai-Mangalore ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೆ ರೈಲ್ವೆ ಇಲಾಖೆ ಸಿದ್ದತೆ ಮಾಡಿಕೊಂಡಿದೆ.
Also read: ಬೆಂಗಳೂರು-ಬೀರೂರು-ದಾವಣಗೆರೆ-ಬೆಳಗಾವಿ ರೈಲು ಪ್ರಯಾಣಿಕರೇ ಗಮನಿಸಿ
ಈಗಾಗಲೇ ಮಂಗಳೂರು ಗೋವಾ ಹಾಗೂ ಗೋವಾ-ಮುಂಬೈ ವಂದೇ ಭಾರತ್ ರೈಲು ಸೇವೆ ಲಭ್ಯವಿದೆ. ಆದರೆ ಈ ಎರಡು ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇ.70ರಷ್ಟು, ಅದರಲ್ಲೂ ಮಂಗಳೂರು ಗೋವಾ ರೈಲಿನ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇ.40ರಷ್ಟು ಮಾತ್ರ. ಹೀಗಾಗಿ ಇದೀಗ ಮುಂಬೈ-ಮಂಗಳೂರು ನೇರ ರೈಲು ಪ್ರಯಾಣಕ್ಕೆ ರೈಲ್ವೇ ಇಲಾಖೆ ಮುಂದಾಗಿದೆ.
ಆರಂಭಿಕ ಹಂತದಲ್ಲಿ ಮುಂಬೈ-ಮಂಗಳೂರು-ಕೋಝಿಕ್ಕೋಡ್ ರೈಲು ಯೋಜನೆಗೆ ಪ್ರಸ್ತಾವನೆ ಇಡಲಾಗಿತ್ತು. ಆದರೆ ಪ್ರತಿ ಭಾರಿ ಮಂಗಳೂರು ಡಿವಿಶನ್’ನಲ್ಲಿ ರೈಲು ಸೇವೆ ಕೇರಳದ ಲಾಭಿಗೆ ಮಣಿಯುತ್ತಿದೆ ಅನ್ನೋ ಆರೋಪ ಕೇಳಿಬರುತ್ತಲೇ ಇತ್ತು. ಹೀಗಾಗಿ ಕರ್ನಾಟಕದ ನಾಯಕರು ಮುಂಬೈ-ಮಂಗಳೂರು ವಂದೇ ಭಾರತ್ ರೈಲನ್ನು ಕೋಝಿಕ್ಕೋಡ್’ಗೆ ವಿಸ್ತರಣೆ ಮಾಡುವ ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇದೀಗ ಮುಂಬೈ-ಮಂಗಳೂರು ವಂದೇ ಭಾರತ್ ರೈಲು ಯೋಜನೆ ಅಂತಿಮಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post