ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ವಿವಾದಕ್ಕೆ ಕಾರಣವಾಗಿರುವ ಮಳಲಿ ಜುಮ್ಮಾ ಮಸೀದಿ Malali Jumma Mosque ಸ್ಥಳದಲ್ಲಿ ಈ ಹಿಂದೆ ದೇವಸ್ಥಾನವಿತ್ತು. ಅದನ್ನು ಈಗ ಮರು ಸ್ಥಾಪಿಸಬೇಕು ಎಂದು ತಾಂಬೂಲ ಪ್ರಶ್ನೆಯಲ್ಲಿ ಉತ್ತರ ಬಂದಿದೆ.
ಇಲ್ಲಿನ ಜುಮ್ಮಾ ಮಸೀದಿ ನವೀಕರಣದ ವೇಳೆ ದೇವಾಲಯದ ಮಾದರಿ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ರಾಮಾಂಜನೇಯ ಭಜನಾ ಮಂದಿರದಲ್ಲಿ ಇಂದು ತಾಂಬೂಲ ಪ್ರಶ್ನೆ Thambula Prashne ಹಾಕಲಾಗಿದ್ದು, ಇದರಲ್ಲಿ ಕೇರಳದ ಖ್ಯಾತ ಜೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಈರೀತಿ ಹೇಳಿದ್ದಾರೆ.
Karnataka | VHP and Bajrang Dal perform ‘Tambula Prashne’ at Sri Ramanjaneya Bhajana Mandira in Malali
A Hindu temple-like architectural design was allegedly discovered underneath an old mosque on the outskirts of Mangaluru on April 21. pic.twitter.com/QnlXtAV3US
— ANI (@ANI) May 25, 2022
ಈ ಸ್ಥಳದಲ್ಲಿ ದೇವಸ್ಥಾನವಿತ್ತು. ಅದನ್ನು ನಾಶಪಡಿಸಿ ಮಸೀದಿ ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ದೇವಸ್ಥಾನವನ್ನು ಮರುಸ್ಥಾಪಿಸಬೇಕು ಎಂದು ಪ್ರಶ್ನೆಯಲ್ಲಿ ಹೇಳಲಾಗಿದೆ.
ಈ ಸ್ಥಳದಲ್ಲಿ ಗುರುಮಠವೊಂದಿತ್ತು. ಇದನ್ನು ನಾಶಮಾಡಲಾಗಿದ್ದು, ಇಲ್ಲಿ ಒಂದು ಮರಣವು ಸಂಭವಿಸಿದೆ. ಹಿಂದೆ ವಿವಾದವಾದ ಸಂದರ್ಭದಲ್ಲಿ ಇಲ್ಲಿದ್ದ ಮಠವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಪೂರ್ಣ ಸಾನಿಧ್ಯ ಕೊಂಡು ಹೋಗದೆ ಅರ್ಧ ಇಲ್ಲಿಯೇ ಉಳಿದಿದೆ. ಈ ಜಾಗದ ಮಾಲಿಕತ್ವ ಇರುವವರು ಜೀರ್ಣೋದ್ಧಾರ ಮಾಡದಿದ್ದರೆ ಊರಿಗೆ ಗಂಡಾಂತರವಿದೆ ಎಂದು ಪ್ರಶ್ನೆಯಲ್ಲಿ ತಿಳಿದು ಬಂದಿದೆ.
ಷೇಧಾಜ್ಞೆ ಜಾರಿ:
ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ವಾತಾವರಣ ನಿರ್ಮಾಣವಾಗದಿರಲು ಪೂರ್ವಭಾವಿಯಾಗಿ ಮಳಲಿ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post