ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೋಯಿದ್ದೀನ್ ಬಾವ ಎನ್ನುವ ಮಂಗಳೂರಿನ ವ್ಯಕ್ತಿ, ಮಾಜಿ ಶಾಸಕನೊಬ್ಬನ ಮಾತುಗಳನ್ನು ನಿನ್ನೆ ಟಿವಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕೇಳ್ತಾ ಇದ್ದೆ. ಮಂಗಳೂರಿನ ಗಲಭೆ ಬಗ್ಗೆ ಸಿಕ್ಕಿರುವ ಸಿಸಿ ಟಿವಿ ತುಣುಕುಗಳ ಕುರಿತು ಭಾರಿ ಚರ್ಚೆ ನಡೆಯುತ್ತಲಿತ್ತು.
ಆತ ಶುರುವಿನಲ್ಲಿ ನಾವೆಲ್ಲ ಮಾನವರು ಒಂದೇ ಕುಲದವರು ಯಾರು ಕೇಳಿ ಅರ್ಜಿ ಹಾಕಿ ಹುಟ್ಟಿರುವುದಿಲ್ಲ. ನಾನು ಮಾತನಾಡುತ್ತಿರುವುದು ಮುಸ್ಲಿಂ ಮತದವನಾಗಿ ಹೇಳಿಕೆಗಳನ್ನು ಕೊಡುತ್ತಿಲ್ಲ. ನನ್ನ ನಿಲುವು ಭಾರತೀಯರೆಲ್ಲ ಒಂದೇ ಎಂಬುದಾಗಿದೆ ಇವೇ ಇತ್ಯಾದಿ ವಿಷಯಗಳನ್ನು ಮಂಡಿಸುತ್ತಿದ್ದಾಗ ನಡುವೆ ಸುವರ್ಣ ನ್ಯೂಸ್ ಚಾನಲ್ ಅ್ಯಂಕರ್ ಅಜಿತ್ ಹನುಮಕ್ಕನವರ್ ಮಂಗಳೂರು ಗಲಭೆ ವಿಷಯವಾಗಿ ಮಾತನಾಡಲಿಕ್ಕೆ ಕೇಳ್ತಾರೆ.
ಬಾವ ಅವರು, ನಡುವೆ ಮಾತನಾಡಲಿಕ್ಕಿಲ್ಲ, ಹೇಳುವುದನ್ನು ಕೇಳಿಸಿಕೊಳ್ಳಬೇಕು ಅಷ್ಟೆ ಎಂದು ಮೊದಲ ಅವಾಜ್ ಹಾಕಿಯೇ ಬಿಡುತ್ತಾರೆ. ನಂತರ ತ್ರಿವಳಿ ತಲಾಖ್ ತಂದ್ರಿ ಏನು ಮಾತಾಡಿಲ್ಲ, ಕಾಶ್ಮೀರಕ್ಕಿದ್ದ 370 ವಿಧಿಯನ್ನು ಕಿತ್ತು ಹಾಕಿದ್ರಿ ಮಾತಾಡಿಲ್ಲ. ಅಸ್ಸಾಂನಲ್ಲಿ ಎನ್’ಆರ್’ಸಿ ತಂದ್ರಿ ಏನು ಮಾತಾಡಿಲ್ಲ. ಇವಾಗ ಪೌರತ್ವ ಕಾಯ್ದೆ ತರಲಿಕ್ಕೆ ಸಿದ್ದರಾಗಿದ್ರಿ. ಈಗಲೂ ನಾವು ಹೇಗೆ ಮೌನವಾಗಿರುವುದು ಹೇಳಿ ಎಂದಾಗ ನೋಡುಗನಾಗಿ ಅನಿಸಿದ್ದು ಈ ಹಂತದಲ್ಲಿ ಮೋಯಿದ್ದೀನ್ ಬಾವ ಅವರ ನಿಜವಾದ ಧರ್ಮಂಧತನ ಆವರಿಸಿಕೊಂಡ ಪರಿ.
1996ರ ಚಿತ್ರೀಕರಣಗಳನ್ನಿಟ್ಟುಕೊಂಡು ಮಂಗಳೂರಿನಲ್ಲಿ ಮೊನ್ನೆ ನಡೆದ ಘಟನೆಗಳ ಸಿಸಿ ಟಿವಿ ಪೋಟೇಜ್ ಎಂದು ದೇಶದ ಜನತೆಗೆ ಮಂಕು ಬೂದಿ ಎರಚುವಿರಾ ಎಂದು ಅ್ಯಂಕರ್ ಮೇಲೆ ಮಾತಿನ ದಾಳಿ ನಡೆದರು. ಖಾಸಿಂ ಎಂಬ ವ್ಯಕ್ತಿಯನ್ನು ಟೆರರಿಸ್ಟ್ ಎಂದು ಬಣ್ಣಿಸುತ್ತಿರುವಿರಿ, ಇದು ಕೂಡ 1996ರ ದೃಶ್ಯ, ಸುಳ್ಳು ಸುದ್ದಿ ನೀಡಬೇಡಿ ಎಂದರು. ಕಲ್ಲನ್ನು ತುಂಬಿಕೊಂಡಿದ್ದ ಗೂಡ್ಸ್ ಅಟೋ ಕೂಡ 1996ರ ದೃಶ್ಯದ ತುಣುಕು ಎಂದು ವಿಷಯ ಮಂಡಿಸಿದರು.
ಅ್ಯಂಕರ್ ಅಜಿತ್ ಹನುಮಕ್ಕನವರ್ ಕ್ರಮವಾಗಿ ಪ್ರತಿ ದೃಶ್ಯವನ್ನು ದಿನಾಂಕ ಮತ್ತು ಸಮಯದ ಸಮೇತ ತೋರಿಸಿ ಇವು ಮಂಗಳೂರಿನಲ್ಲಿ ಮೊನ್ನೆ ನಡೆದ ಗಲಭೆಯ ದೃಶ್ಯ ಎಂದು ಸಾಬೀತುಪಡಿಸಿದಾಗ ಮೋಯಿದ್ದೀನ್ ಬಾವ ಹೇಳಿದ್ದೇನು ಗೊತ್ತಾ? ಎರಡು ಹೆಣ ಬಿದ್ದಿವೆ, ಆಗ ಆಕ್ರೋಶದಿಂದ ಹೀಗೆಲ್ಲ ಮಾಡಿರಬಹುದು ಏನ್ ಇವಾಗ. ನಿಮ್ಮ ಕುಟುಂಬದವರಿಗೆ ಗುಂಡೇಟು ಬಿದ್ದು ಸತ್ತಿದ್ರೆ ಶಾಂತಿಯಿಂದ ಇರ್ತಾ ಇದ್ರಾ ಎಂದು ಪ್ರತಿ ಸವಾಲು ಹಾಕಿ ಗಲಭೆಕೋರರು ಮಾಡಿದ್ದು ಸರಿ ಇದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.
ಕರಾವಳಿಯನ್ನು ಕಾಶ್ಮೀರ ಎಂದು ಯಾಕೆ ತೋರಿಸ್ತಾ ಇದ್ದೀರಿ? ನೀವು ಸುದ್ದಿ ಸಂಪಾದಕರಾಗಲು ನಾಲಾಯಕ್. ಮೊದಲು ರಾಜೀನಾಮೆ ಕೊಟ್ಟು ಪತ್ರಿಕಾರಂಗದಿಂದ ಹೊರಗೆ ಬನ್ನಿ ಎಂದು ಅವಾಜ್ ಹಾಕುವ ಮೋಯಿದ್ದೀನ್ ಬಾವರಂತಹ ಮತಾಂಧರ ಬಗ್ಗೆ ಅಸಹ್ಯವಾಗುತ್ತದೆ.
ಆಸ್ಪತ್ರೆಯ ಐಸಿಯುನಲ್ಲಿ ರಕ್ತ ಕೊಡುತ್ತಿದ್ದರು, ಪೋಲಿಸಿನವರು ಐಸಿಯು ಕೊಠಡಿಯನ್ನು ಮುರಿದು ಹಾಕಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದಾಗ ಅ ಆಸ್ಪತ್ರೆಯ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಬಗ್ಗೆ ವಿವರವಾಗಿ ಅ್ಯಂಕರ್ ತಿಳಿಸ್ತಾರೆ. ನಮ್ಮ ಆಸ್ಪತ್ರೆಯ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ರಕ್ಷಿಸಿದ ಪೋಲೀಸಿನವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ ಎಂದಾಗ ಮೋಹಿದ್ದೀನ್ ಬಾವಾ ಹೇಳ್ತಾರೆ: ಅಯ್ಯೋ ಅವರು ಆರ್’ಎಸ್’ಎಸ್ ವೈದ್ಯರು, ಅದಕ್ಕೆ ಹಾಗೆ ಹೇಳಿರುತ್ತಾರೆ ಬಿಡ್ರಿ ಎಂದು.
ಪೋಲಿಸಿನವರು ಕೂಡ ಒಂದು ಪಂಥೀಯ ನಿಲುವಿನವರು. ಗಾಳಿಯಲ್ಲಿ ಗುಂಡು ಹಾರಿಸಿಬೇಡಿ ಎಂಬ ಪೂರ್ವನಿಯೋಜನೆಯಂತೆ ಎದೆಗೆ ಗುರಿ ಇಟ್ಟು ಸಾಯಿಸಿ ಎಂದು ಕೊಂದಿದ್ದಾರೆ. ಪೋಲಿಸ್’ನವರು ಸಹ ಒಂದು ಕಡೆಗೆ ಸೇರಿದವರೇ ಎನ್ನುತ್ತಾರೆ ಈ ಮಹಾನುಭಾವ.
ಭಾರತ ಸಂವಿಧಾನದ ಮೂಲ ಉದ್ದೇಶಗಳ ಬಗ್ಗೆ ನಂಬಿಕೆ ಸಡಿಲವಾಗುತ್ತಿದೆ. ಹೆಸರಿಗೆ ಮಾತ್ರ ಜಾತ್ಯತೀತ ರಾಷ್ಟ್ರವಾಗಿದ್ದು, ಹಳ್ಳಿಯಿಂದ ಡೆಲ್ಲಿಯವರೆಗೂ ಜಾತಿ ಬಿಟ್ಟು ರಾಜಕೀಯವಿಲ್ಲ. ಭಾರತದ ಬಹುತೇಕ ಜನರ ಬದುಕೇ ಇಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಹೇಸಿಗೆ ತುಂಬಿದ ಆಸೆಗೆ ಒಂದು ಕೋಮನ್ನು ಓಲೈಸಿಕೊಳ್ಳಲು ಮೋಯಿದ್ದೀನ್ ಬಾವರಂತಹ ಪೀಳಿಗೆ ಮನುಷ್ಯ ಜಗತ್ತನ್ನು ಬಲಿ ಪಡೆದಿದೆ.
ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ ಎನ್ನುವ ಸಿದ್ಧಾಂತ ಹಾಗೂ ವ್ಯಕ್ತಿತ್ವ ಹೊಂದಿರುವ ಎಲ್ಲ ರಾಜಕೀಯ ಪಕ್ಷ ನಾಯಕರು ಭಾರತೀಯರಿಗೆ ಮಂಕು ಬೂದಿ ಎರಚಿದ್ದಾರೆ. ಧರ್ಮದ ಹೆಸರಿನಲ್ಲಿ ಜನಗಳು ಕಿತ್ತಾಡಿ ವೈಯಕ್ತಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಬೆಳವಣಿಗೆಯನ್ನು ಕುಂಠಿತ ಮಾಡಿ ದಿವಾಳಿಗೆ ತಳ್ಳುವ ಹುನ್ನಾರದಲ್ಲಿ ತೊಡಗಿರುವುದು ಸ್ಪಷ್ಟವಾಗಿದೆ. ಸ್ವಾತಂತ್ರ ಬಂದಾಗಿನಿಂದಲೂ ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಲೇ ಬಂದಿವೆ.
ಶಿಕ್ಷಣ ಹಾಗೂ ಆರ್ಥಿಕ ಸಬಲತೆ ಕಂಡ ದೇಶಗಳನ್ನು ಗಮನಿಸಿದರೇ ತಿಳಿಯಿತೆ. ನಮ್ಮವರು ಶತಮಾನಗಳಿಂದಲ್ಲೂ ವ್ಯವಸ್ಥಿತವಾಗಿ ಹೇಗೆ ತುಳಿದಿದ್ದಾರೆಂಬುದು.
ಇನ್ನಾದರೂ ಜನ ಸಾಮಾನ್ಯರು ಕುತಂತ್ರಿಗಳ ಬಲೆ ಸಿಲುಕದೇ ಪಾರದರ್ಶಕತೆಯಿಂದ ನೋಡುವ ಗುಣಗಳನ್ನು ಬೆಳೆಸಿಕೊಂಡು ವೈಯಕ್ತಿಕ ಅಭಿವೃದ್ಧಿ ಕಡೆ ಗಮನ ಕೊಡುವುದು ಭಾರತದಂತಹ ದೇಶದಲ್ಲಿ ಸೂಕ್ತ.
Get in Touch With Us info@kalpa.news Whatsapp: 9481252093
Discussion about this post