No Result
View All Result
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ
English Articles

Periodicity of Bhubaneswar–Yesvantpur Special Train Extended

by ಕಲ್ಪ ನ್ಯೂಸ್
June 19, 2026
0

Kalpa Media House  |  Yesvantpur | To manage the increased passenger rush, East Coast Railway has announced the extension of...

Read moreDetails
Blood Donation Camp Successfully Organised at Mysuru Division

Blood Donation Camp Successfully Organised at Mysuru Division

June 16, 2026
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
  • Advertise With Us
  • Grievances
  • About Us
  • Contact Us
Friday, June 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಂಗಳೂರು ಗಲಭೆ: ಜಾತ್ಯತೀತರೆನಿಸಿಕೊಂಡ ಮೊಯಿದ್ದೀನ್ ಬಾವಾರಂತಹವರ ನಿಜಬಣ್ಣ ಬಯಲು

ನಮ್ಮನ್ನು ಕಾಯುವ ಪೊಲೀಸರ ಮೇಲೇಯೇ ಕೀಳು ರಾಜಕೀಯಕ್ಕಾಗಿ ಆರೋಪಿಸುವ ನಾಲಾಯಕ್’ಗಳು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 25, 2019
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮೋಯಿದ್ದೀನ್ ಬಾವ ಎನ್ನುವ ಮಂಗಳೂರಿನ ವ್ಯಕ್ತಿ, ಮಾಜಿ ಶಾಸಕನೊಬ್ಬನ ಮಾತುಗಳನ್ನು ನಿನ್ನೆ ಟಿವಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕೇಳ್ತಾ ಇದ್ದೆ. ಮಂಗಳೂರಿನ ಗಲಭೆ ಬಗ್ಗೆ ಸಿಕ್ಕಿರುವ ಸಿಸಿ ಟಿವಿ ತುಣುಕುಗಳ ಕುರಿತು ಭಾರಿ ಚರ್ಚೆ ನಡೆಯುತ್ತಲಿತ್ತು.

ಆತ ಶುರುವಿನಲ್ಲಿ ನಾವೆಲ್ಲ ಮಾನವರು ಒಂದೇ ಕುಲದವರು ಯಾರು ಕೇಳಿ ಅರ್ಜಿ ಹಾಕಿ ಹುಟ್ಟಿರುವುದಿಲ್ಲ. ನಾನು ಮಾತನಾಡುತ್ತಿರುವುದು ಮುಸ್ಲಿಂ ಮತದವನಾಗಿ ಹೇಳಿಕೆಗಳನ್ನು ಕೊಡುತ್ತಿಲ್ಲ. ನನ್ನ ನಿಲುವು ಭಾರತೀಯರೆಲ್ಲ ಒಂದೇ ಎಂಬುದಾಗಿದೆ ಇವೇ ಇತ್ಯಾದಿ ವಿಷಯಗಳನ್ನು ಮಂಡಿಸುತ್ತಿದ್ದಾಗ ನಡುವೆ ಸುವರ್ಣ ನ್ಯೂಸ್ ಚಾನಲ್ ಅ್ಯಂಕರ್ ಅಜಿತ್ ಹನುಮಕ್ಕನವರ್ ಮಂಗಳೂರು ಗಲಭೆ ವಿಷಯವಾಗಿ ಮಾತನಾಡಲಿಕ್ಕೆ ಕೇಳ್ತಾರೆ.

ಬಾವ ಅವರು, ನಡುವೆ ಮಾತನಾಡಲಿಕ್ಕಿಲ್ಲ, ಹೇಳುವುದನ್ನು ಕೇಳಿಸಿಕೊಳ್ಳಬೇಕು ಅಷ್ಟೆ ಎಂದು ಮೊದಲ ಅವಾಜ್ ಹಾಕಿಯೇ ಬಿಡುತ್ತಾರೆ. ನಂತರ ತ್ರಿವಳಿ ತಲಾಖ್ ತಂದ್ರಿ ಏನು ಮಾತಾಡಿಲ್ಲ, ಕಾಶ್ಮೀರಕ್ಕಿದ್ದ 370 ವಿಧಿಯನ್ನು ಕಿತ್ತು ಹಾಕಿದ್ರಿ ಮಾತಾಡಿಲ್ಲ. ಅಸ್ಸಾಂನಲ್ಲಿ ಎನ್’ಆರ್’ಸಿ ತಂದ್ರಿ ಏನು ಮಾತಾಡಿಲ್ಲ. ಇವಾಗ ಪೌರತ್ವ ಕಾಯ್ದೆ ತರಲಿಕ್ಕೆ ಸಿದ್ದರಾಗಿದ್ರಿ. ಈಗಲೂ ನಾವು ಹೇಗೆ ಮೌನವಾಗಿರುವುದು ಹೇಳಿ ಎಂದಾಗ ನೋಡುಗನಾಗಿ ಅನಿಸಿದ್ದು ಈ ಹಂತದಲ್ಲಿ ಮೋಯಿದ್ದೀನ್ ಬಾವ ಅವರ ನಿಜವಾದ ಧರ್ಮಂಧತನ ಆವರಿಸಿಕೊಂಡ ಪರಿ.

ಮೋಯಿದ್ದೀನ್ ಬಾವ

1996ರ ಚಿತ್ರೀಕರಣಗಳನ್ನಿಟ್ಟುಕೊಂಡು ಮಂಗಳೂರಿನಲ್ಲಿ ಮೊನ್ನೆ ನಡೆದ ಘಟನೆಗಳ ಸಿಸಿ ಟಿವಿ ಪೋಟೇಜ್ ಎಂದು ದೇಶದ ಜನತೆಗೆ ಮಂಕು ಬೂದಿ ಎರಚುವಿರಾ ಎಂದು ಅ್ಯಂಕರ್ ಮೇಲೆ ಮಾತಿನ ದಾಳಿ ನಡೆದರು. ಖಾಸಿಂ ಎಂಬ ವ್ಯಕ್ತಿಯನ್ನು ಟೆರರಿಸ್ಟ್‌ ಎಂದು ಬಣ್ಣಿಸುತ್ತಿರುವಿರಿ, ಇದು ಕೂಡ 1996ರ ದೃಶ್ಯ, ಸುಳ್ಳು ಸುದ್ದಿ ನೀಡಬೇಡಿ ಎಂದರು. ಕಲ್ಲನ್ನು ತುಂಬಿಕೊಂಡಿದ್ದ ಗೂಡ್ಸ್‌ ಅಟೋ ಕೂಡ 1996ರ ದೃಶ್ಯದ ತುಣುಕು ಎಂದು ವಿಷಯ ಮಂಡಿಸಿದರು.

ಅ್ಯಂಕರ್ ಅಜಿತ್ ಹನುಮಕ್ಕನವರ್ ಕ್ರಮವಾಗಿ ಪ್ರತಿ ದೃಶ್ಯವನ್ನು ದಿನಾಂಕ ಮತ್ತು ಸಮಯದ ಸಮೇತ ತೋರಿಸಿ ಇವು ಮಂಗಳೂರಿನಲ್ಲಿ ಮೊನ್ನೆ ನಡೆದ ಗಲಭೆಯ ದೃಶ್ಯ ಎಂದು ಸಾಬೀತುಪಡಿಸಿದಾಗ ಮೋಯಿದ್ದೀನ್ ಬಾವ ಹೇಳಿದ್ದೇನು ಗೊತ್ತಾ? ಎರಡು ಹೆಣ ಬಿದ್ದಿವೆ, ಆಗ ಆಕ್ರೋಶದಿಂದ ಹೀಗೆಲ್ಲ ಮಾಡಿರಬಹುದು ಏನ್ ಇವಾಗ. ನಿಮ್ಮ ಕುಟುಂಬದವರಿಗೆ ಗುಂಡೇಟು ಬಿದ್ದು ಸತ್ತಿದ್ರೆ ಶಾಂತಿಯಿಂದ ಇರ್ತಾ ಇದ್ರಾ ಎಂದು ಪ್ರತಿ ಸವಾಲು ಹಾಕಿ ಗಲಭೆಕೋರರು ಮಾಡಿದ್ದು ಸರಿ ಇದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಕರಾವಳಿಯನ್ನು ಕಾಶ್ಮೀರ ಎಂದು ಯಾಕೆ ತೋರಿಸ್ತಾ ಇದ್ದೀರಿ? ನೀವು ಸುದ್ದಿ ಸಂಪಾದಕರಾಗಲು ನಾಲಾಯಕ್. ಮೊದಲು ರಾಜೀನಾಮೆ ಕೊಟ್ಟು ಪತ್ರಿಕಾರಂಗದಿಂದ ಹೊರಗೆ ಬನ್ನಿ ಎಂದು ಅವಾಜ್ ಹಾಕುವ ಮೋಯಿದ್ದೀನ್ ಬಾವರಂತಹ ಮತಾಂಧರ ಬಗ್ಗೆ ಅಸಹ್ಯವಾಗುತ್ತದೆ.

ಆಸ್ಪತ್ರೆಯ ಐಸಿಯುನಲ್ಲಿ ರಕ್ತ ಕೊಡುತ್ತಿದ್ದರು, ಪೋಲಿಸಿನವರು ಐಸಿಯು ಕೊಠಡಿಯನ್ನು ಮುರಿದು ಹಾಕಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದಾಗ ಅ ಆಸ್ಪತ್ರೆಯ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಬಗ್ಗೆ ವಿವರವಾಗಿ ಅ್ಯಂಕರ್ ತಿಳಿಸ್ತಾರೆ. ನಮ್ಮ ಆಸ್ಪತ್ರೆಯ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ರಕ್ಷಿಸಿದ ಪೋಲೀಸಿನವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ ಎಂದಾಗ ಮೋಹಿದ್ದೀನ್ ಬಾವಾ ಹೇಳ್ತಾರೆ: ಅಯ್ಯೋ ಅವರು ಆರ್’ಎಸ್’ಎಸ್ ವೈದ್ಯರು, ಅದಕ್ಕೆ ಹಾಗೆ ಹೇಳಿರುತ್ತಾರೆ ಬಿಡ್ರಿ ಎಂದು.

ಪೋಲಿಸಿನವರು ಕೂಡ ಒಂದು ಪಂಥೀಯ ನಿಲುವಿನವರು. ಗಾಳಿಯಲ್ಲಿ ಗುಂಡು ಹಾರಿಸಿಬೇಡಿ ಎಂಬ ಪೂರ್ವನಿಯೋಜನೆಯಂತೆ ಎದೆಗೆ ಗುರಿ ಇಟ್ಟು ಸಾಯಿಸಿ ಎಂದು ಕೊಂದಿದ್ದಾರೆ. ಪೋಲಿಸ್’ನವರು ಸಹ ಒಂದು ಕಡೆಗೆ ಸೇರಿದವರೇ ಎನ್ನುತ್ತಾರೆ ಈ ಮಹಾನುಭಾವ.

ಅಜಿತ್ ಹನುಮಕ್ಕನವರ್

ಭಾರತ ಸಂವಿಧಾನದ ಮೂಲ ಉದ್ದೇಶಗಳ ಬಗ್ಗೆ ನಂಬಿಕೆ ಸಡಿಲವಾಗುತ್ತಿದೆ. ಹೆಸರಿಗೆ ಮಾತ್ರ ಜಾತ್ಯತೀತ ರಾಷ್ಟ್ರವಾಗಿದ್ದು, ಹಳ್ಳಿಯಿಂದ ಡೆಲ್ಲಿಯವರೆಗೂ ಜಾತಿ ಬಿಟ್ಟು ರಾಜಕೀಯವಿಲ್ಲ. ಭಾರತದ ಬಹುತೇಕ ಜನರ ಬದುಕೇ ಇಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಹೇಸಿಗೆ ತುಂಬಿದ ಆಸೆಗೆ ಒಂದು ಕೋಮನ್ನು ಓಲೈಸಿಕೊಳ್ಳಲು ಮೋಯಿದ್ದೀನ್ ಬಾವರಂತಹ ಪೀಳಿಗೆ ಮನುಷ್ಯ ಜಗತ್ತನ್ನು ಬಲಿ ಪಡೆದಿದೆ.

ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ ಎನ್ನುವ ಸಿದ್ಧಾಂತ ಹಾಗೂ ವ್ಯಕ್ತಿತ್ವ ಹೊಂದಿರುವ ಎಲ್ಲ ರಾಜಕೀಯ ಪಕ್ಷ ನಾಯಕರು ಭಾರತೀಯರಿಗೆ ಮಂಕು ಬೂದಿ ಎರಚಿದ್ದಾರೆ. ಧರ್ಮದ ಹೆಸರಿನಲ್ಲಿ ಜನಗಳು ಕಿತ್ತಾಡಿ ವೈಯಕ್ತಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಬೆಳವಣಿಗೆಯನ್ನು ಕುಂಠಿತ ಮಾಡಿ ದಿವಾಳಿಗೆ ತಳ್ಳುವ ಹುನ್ನಾರದಲ್ಲಿ ತೊಡಗಿರುವುದು ಸ್ಪಷ್ಟವಾಗಿದೆ. ಸ್ವಾತಂತ್ರ ಬಂದಾಗಿನಿಂದಲೂ ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಲೇ ಬಂದಿವೆ.

ಶಿಕ್ಷಣ ಹಾಗೂ ಆರ್ಥಿಕ ಸಬಲತೆ ಕಂಡ ದೇಶಗಳನ್ನು ಗಮನಿಸಿದರೇ ತಿಳಿಯಿತೆ. ನಮ್ಮವರು ಶತಮಾನಗಳಿಂದಲ್ಲೂ ವ್ಯವಸ್ಥಿತವಾಗಿ ಹೇಗೆ ತುಳಿದಿದ್ದಾರೆಂಬುದು.

ಇನ್ನಾದರೂ ಜನ ಸಾಮಾನ್ಯರು ಕುತಂತ್ರಿಗಳ ಬಲೆ ಸಿಲುಕದೇ ಪಾರದರ್ಶಕತೆಯಿಂದ ನೋಡುವ ಗುಣಗಳನ್ನು ಬೆಳೆಸಿಕೊಂಡು ವೈಯಕ್ತಿಕ ಅಭಿವೃದ್ಧಿ ಕಡೆ ಗಮನ ಕೊಡುವುದು ಭಾರತದಂತಹ ದೇಶದಲ್ಲಿ ಸೂಕ್ತ.


Get in Touch With Us info@kalpa.news Whatsapp: 9481252093

Tags: cctv footageCoastal ArticleKannada News WebsiteMangaluru RiotsMohiuddin BavaU J Niranjan Murthyಕರಾವಳಿಕಾಶ್ಮೀರಭಾರತ ಸಂವಿಧಾನಮಂಗಳೂರು ಗಲಭೆಮೋಯಿದ್ದೀನ್ ಬಾವಸಿಸಿ ಟಿವಿ ದೃಶ್ಯ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಯೋಧ್ಯೆಯಲ್ಲಿ ಭಾರೀ ನರಮೇಧ ನಡೆಸಲು ನಿಷೇಧಿತ ಜೈಷ್ ಉಗ್ರ ಸಂಘಟನೆ ಸಂಚು

Next Post

ಭದ್ರಾವತಿ: ಜನ್ಮದಿನದ ಅಂಗವಾಗಿ ಉಚಿತ ಸೇವೆಯ ಆಂಬ್ಯುಲೆನ್ಸ್‌ ಕೊಡುಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ: ಜನ್ಮದಿನದ ಅಂಗವಾಗಿ ಉಚಿತ ಸೇವೆಯ ಆಂಬ್ಯುಲೆನ್ಸ್‌ ಕೊಡುಗೆ

ಭದ್ರಾವತಿ: ಜನ್ಮದಿನದ ಅಂಗವಾಗಿ ಉಚಿತ ಸೇವೆಯ ಆಂಬ್ಯುಲೆನ್ಸ್‌ ಕೊಡುಗೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ನಕಲಿ ಪತ್ರದ ಮೂಲಕ ಸಾಲ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ

ನಕಲಿ ಪತ್ರದ ಮೂಲಕ ಸಾಲ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ

June 19, 2026
ಭುವನೇಶ್ವರಿ ಬಡಾವಣೆ ಪಾರ್ಕ್ ಪರಿಶೀಲನೆ: ಮೂಲಸೌಕರ್ಯ ಕೊರತೆಗೆ ಶಾಸಕ ಚನ್ನಬಸಪ್ಪ ಗರಂ

ಭುವನೇಶ್ವರಿ ಬಡಾವಣೆ ಪಾರ್ಕ್ ಪರಿಶೀಲನೆ: ಮೂಲಸೌಕರ್ಯ ಕೊರತೆಗೆ ಶಾಸಕ ಚನ್ನಬಸಪ್ಪ ಗರಂ

June 19, 2026
ಮಾಸಿಕ ಪಿಂಚಣಿ ಯೋಜನೆ ಸ್ಥಗಿತ | ಬಡವರಿಗೆ ದ್ರೋಹ: ಶಾಸಕ ಚನ್ನಬಸಪ್ಪ ಆಕ್ರೋಶ

ಧರ್ಮಸ್ಥಳ ವಿಚಾರ: ನಟ ಪ್ರಕಾಶ್ ರಾಜ್ ವಿರುದ್ಧ ತನಿಖೆ ನಡೆಸಲು ಶಾಸಕ ಚನ್ನಬಸಪ್ಪ ಆಗ್ರಹ

June 19, 2026
ಮೂರ್ತಿರಾಯರು ಲಲಿತ ಪ್ರಬಂಧ ಸೊಗಡನ್ನು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಸಾಹಿತಿ: ಸುರೇಶ್ ಋಗ್ವೇದಿ

ಮೂರ್ತಿರಾಯರು ಲಲಿತ ಪ್ರಬಂಧ ಸೊಗಡನ್ನು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಸಾಹಿತಿ: ಸುರೇಶ್ ಋಗ್ವೇದಿ

June 19, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Periodicity of Bhubaneswar–Yesvantpur Special Train Extended

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL