ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ನಗರದ ನಂತೂರು ಬಳಿ ಚಲಿಸುತ್ತಿದ್ದ ಸಿಟಿ ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕಂಡೆಕ್ಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುರತ್ಕಲ್ ನಿಂದ ಮಂಗಳಾದೇವಿಗೆ ತೆರಳುತ್ತಿದ್ದ ಬಸ್ಸಿನ ಫುಟ್ ಬೋರ್ಡ್ ನಲ್ಲಿದ್ದ ಕಂಡೆಕ್ಟರ್ ವೀರಯ್ಯ(27) ಆಯತಪ್ಪಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ವೀರಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮೂಲತಃ ಬಾಗಲಕೋಟೆ ಜಿಲ್ಲೆಯವರು. ಕಂಡೆಕ್ಟರ್ ವೀರಯ್ಯ ಸಾವಿಗೆ ಬಸ್ ಚಾಲಕರು ನಿರ್ವಾಹಕರು ಸಂತಾಪ ವ್ಯಕ್ತಪಡಿಸಿದ್ದಾರೆ.
Also read: ಪ್ರತಿಯೊಬ್ಬರೂ ವೃತ್ತಿ ಗೌರವ ಎತ್ತಿ ಹಿಡಿಯಬೇಕು: ಸಿಎಂ ಸಿದ್ದರಾಮಯ್ಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post