ಮನಿಕರ್ಣಿಕಾ: ಝಾನ್ಸಿ ರಾಣಿ
ನಿರ್ದೇಶಕರು – ಕಂಗನಾ ರಾವತ್, ರಾಜ ಕೃಷ್ಣ ಜಗರ್ಲಾಡಿ
ಪಾತ್ರವರ್ಗ – ಕಂಗನಾ ರಾವತ್, ಅತುಲ್ ಕುಲಕರ್ಣಿ, ಜಿಸ್ಸು ಸೆನ್ಗುಪ್ಟಾ, ಡ್ಯಾನಿ ಡೆನ್ಜಾಂಗ್ಪಾ, ಸುರೇಶ್ ಒಬೆರಾಯ್
ರೇಟಿಂಗ್ – 4/5
ಹೌದು… ಅದು ಒನ್ ಹಿಂದೂ ವುಮೆನ್ ಆರ್ಮಿ. ಮಣಿಕರ್ಣಿಕಾ ಚಿತ್ರವನ್ನು ಈ ಅಭಿಪ್ರಾಯಕ್ಕೆ ಎರಡು ರೀತಿಯಲ್ಲಿ ಅರ್ಥೈಸಬಹುದು. ಒಂದು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂಬ ಭಾರತೀಯರ ಹೆಮ್ಮೆ ಓರ್ವ ಆರ್ಮಿಯಾಗಿದ್ದರೆ, ಇಡಿಯ ಚಿತ್ರದಲ್ಲಿ ಒನ್ ವುಮೆನ್ ಆರ್ಮಿಯಾಗಿರುವುದು ಕಂಗನಾ ರಾವತ್…
300 ವರ್ಷಗಳ ಕಾಲ ಭಾರತವನ್ನು ಕಾಲಕಸದಂತೆ ಕಂಡ ಬ್ರಿಟೀಷರ ವಿರುದ್ಧ ಹೋರಾಡಿದ ಕೋಟ್ಯಾಂತರ ಮಂದಿಯಲ್ಲಿ ಕೆಲವೇ ಕೆಲವು ಮಂದಿ ಹೋರಾಟದ ಮುಂದಾಳತ್ವವನ್ನು ವಹಿಸಿ, ಕೊನೆಯ ಉಸಿರುರುವವರೆಗೂ ಹೋರಾಡಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರರ ಸಾಲಿನಲ್ಲಿ ನಿಲ್ಲುವ ಸ್ತ್ರೀ ಶಕ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ. ಈ ಮಹಾನ್ ವೀರವನಿತೆಯ ಜೀವನ ವೃತ್ತಾಂತವೇ ಮಣಿಕರ್ಣಿಕಾ…
ಶ್ರೀಮಂತ ಭಾರತವನ್ನು ನೀಚ ಬ್ರಿಟೀಷರು ಹೇಗೆಲ್ಲಾ ದೋಚಿದರು ಎಂಬ ವಿಚಾರವನ್ನು ಅಮಿತಾಬ್ ಬಚ್ಚನ್ ಅವರು ಪ್ರಬುದ್ಧ ಧ್ವನಿಯೊಂದಿಗೆ ಆರಂಭವಾಗುವ ಚಿತ್ರ, ತತಕ್ಷಣ ಮಣಿಕರ್ಣಿಕಾ ಪಾತ್ರದಲ್ಲಿ ಮಿಂಚಿರುವ ಕಂಗನಾ ರಾವತ್ ಅವರ ಅದ್ದೂರಿ ಎಂಟ್ರಿಯೊಂದಿಗೆ ತೆರೆಯಲ್ಲಿ ವಿಜೃಂಭಿಸುತ್ತದೆ.
ಝಾನ್ಸಿ ರಾಜ ಕುಟುಂಬಕ್ಕೆ ಸೊಸೆಯಾಗಿ ಹೆಜ್ಜೆಯಿಡುವ ಮಣಿಕರ್ಣಿಕಾ ಆನಂತರ ಝಾನ್ಸಿಯ ರಾಣಿಯಾಗಿ ದೇಶಕ್ಕಾಗಿ ಹೋರಾಡಿದ್ದು ಇಂದು ಇಡಿಯ ಭಾರತಕ್ಕೇ ಆದರ್ಶನೀಯ. 1800 ರ ಅವಧಿಯಲ್ಲಿ ನಡೆದ ಘಟನೆಗಳು ಚಿತ್ರದ ಕಥಾಹಂದರವಾಗಿದ್ದು, 1857ರ ಸಿಪಾಯಿ ಧಂಗೆಯ ಘಟನೆಗಳನ್ನೂ ಸಹ ಚಿತ್ರದಲ್ಲಿ ಪೂರಕವಾಗಿ ರೂಪಿಸಲಾಗಿದೆ. ಆದರೆ, ಝಾನ್ಸಿ ಸಾಮ್ರಾಜ್ಯ ಬ್ರಿಟೀಷರ ವಿರುದ್ಧ ಹೇಗೆ ಹೋರಾಡಿತು ಎನ್ನುವುದೇ ಪ್ರಮುಖ ಭಾಗವಾಗಿದೆ.
ಚಿತ್ರದ ಪ್ರತಿ ಫ್ರೇಮ್’ನಲ್ಲೂ ಕಂಗನಾ ರಾವತ್, ಚಿತ್ರ ಮುಂದುವರೆದಂತೆ ಪಾತ್ರವೇ ಆಕೆಯಾಗಿ ಶಕ್ತಿಯಂತೆ ಆವರಿಸುತ್ತಾರೆ. ಕಂಗನಾ ಅವರ ಅತ್ಯಂತ ಪ್ರಬುದ್ಧ ಅಭಿನಯಕ್ಕೆ ಈ ಚಿತ್ರ ಸ್ಪಷ್ಟ ಸಾಕ್ಷಿಯಾಗಿದೆ. ಚಿತ್ರದ ಆರಂಭದಲ್ಲಿ ಯುವತಿಯಾಗಿ ನವಿರಾದ ಸುಂದರ ಕ್ಷಣಗಳಲ್ಲಿ ಮಣಿಕರ್ಣೀಕಾ ಆಗಿ ಮಿಂಚುವ ಕಂಗನಾ, ಆನಂತರ ಭಾರೀ ಆಕ್ಷನ್ ಸೀನ್’ಗಳಲ್ಲಿ ಅಭಿನಯಿಸಿದ ರೀತಿ ಅದ್ಬುತವಾಗಿದೆ. ಇನ್ನು, ಉಳಿದ ನಟರ ಅಭಿನಯದ ವಿಚಾರದಲ್ಲೂ ಸಹ ಯಾವುದೇ ರಾಜಿಯಿಲ್ಲ.
ಡ್ಯಾನಿ ಡೆನ್ಜೋಂಪಾ (ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಘೌಸ್ ಖಾನ್ರಂತೆ) ಮತ್ತು ಕುಲ್ಬುಷಾನ್ ಖರ್ಬಂದ ಅಥವಾ ಝಲ್ಕರಿಬಾಯ್ ಪಾತ್ರವನ್ನು ನಿರ್ವಹಿಸುವ ಅಂಕಿತ ಲೋಖಂಡೆಯಂತಹವರ ಅಭಿನಯ ಮನಗೆಲ್ಲುತ್ತದೆ. ತಾತ್ಯಾ ತೊಪೆ ಪಾತ್ರ ನಿರ್ವಹಿಸಿರುವ ಅತುಲ್ ಕುಲಕರ್ಣಿ ಸೇರಿದಂತೆ ಎಲ್ಲಾ ಪೋಷಕ ನಟರು ಅಮೂಲ್ಯವಾದ ನಟನೆ ಮಾಡಿದ್ದಾರೆ. ಸರ್ ಹಗ್ ರೋಸ್ ಪಾತ್ರ ವಹಿಸುತ್ತಿರುವ ನಟ ರಿಚರ್ಡ್ ಕೀಪ್ ಹೊರತುಪಡಿಸಿ, ಬಹುತೇಕ ಬ್ರಿಟಿಷ್ ಪಾತ್ರಗಳು ವ್ಯಂಗ್ಯಚಿತ್ರಗಳಂತೆ ಹೊರಬರುತ್ತವೆ ಎಂದು ಹೇಳಲು ಅವಶ್ಯಕತೆಯಿಲ್ಲ.
ಸ್ವತಃ ಕಂಗನಾ ರಾವತ್ ಹಾಗೂ ಕ್ರಿಶ್ ನಿರ್ದೇಶಿಸಿರುವ ಚಿತ್ರದಲ್ಲಿ, ಝಾನ್ಸಿ ಒಳಗಿನ ಶತ್ರುಗಳ ಹೇಗೆ ಕುತಂತ್ರಿಗಳಾಗಿದ್ದು, 1800ರ ವೇಳೆಯಲ್ಲಿ ಹಿತಶತ್ರುಗಳಿಂದ ಝಾನ್ಸಿ ಅನುಭವಿಸಿದ ತೊಂದರೆಯನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ.
ಪ್ರಸೂನ್ ಜೋಷಿ ಅವರ ಸಂಭಾಷಣೆಯ ಪ್ರಬುದ್ದತೆ ವೀಕ್ಷಕರ ಮನದಲ್ಲಿ ರಾಷ್ಟಭಕ್ತಿಯನ್ನು ಜಾಗೃತಿಗೊಳಿಸುವಲ್ಲಿ ಹೆಜ್ಜೆಯನ್ನಿಟ್ಟಿದೆ. ಚಿತ್ರದ ಮೊದಲಾರ್ಧದಲ್ಲಿ ಐತಿಹಾಸಿಕ ವೈಭವವನ್ನು ಸೃಷ್ಠಿಗೆ ಸಾಕಷ್ಟು ಕೆಲಸ ಮಾಡಿರುವುದು ತಿಳಿಯುತ್ತದೆ. ದ್ವಿತೀಯಾರ್ಧದಲ್ಲಿ ಯುದ್ಧಭೂಮಿಯಲ್ಲಿ ದೃಶ್ಯಗಳು, ತೀವ್ರವಾದ ಕ್ರಮದ ಅನುಕ್ರಮಗಳು, ರಕ್ತಪಾತದ ಕೊಲೆಗಳು, ಎಸ್ಕೇಪ್ ಆಗುವುದು, ನಷ್ಟ ಮತ್ತು ವಿಜಯೋತ್ಸವದೊಂದಿಗೆ ತೆರೆದುಕೊಳ್ಳುತ್ತದೆ.
ಮನಿಕರ್ಣಿಕಾ ಕಂಗನಾ ನಟನೆಯ ಪರಾಕ್ರಮವನ್ನು ತೋರಿಸುತ್ತದೆ. ಮೊದಲ ಬಾರಿಗೆ ಚಲನಚಿತ್ರ ನಿರ್ದೇಶಕಿಯಾಗಿ ಕಂಗನಾ ನಿಸ್ಸಂದೇಹವಾಗಿ ಒಂದು ಇತಿಹಾಸವನ್ನು ಮನಮುಟ್ಟುವಂತೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಮಹಾಕಾವ್ಯದ ಸಣ್ಣ ಭಾಗ, ಇತಿಹಾಸದ ಈ ಪುಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಜೀವಂತ ಯುದ್ಧದ ಚಿತ್ರಕ್ಕಿಂತ ಸಾಕಷ್ಟು ದೊಡ್ಡ ಶೌರ್ಯ ಮತ್ತು ಆತ್ಮವಿದೆ ಎಂಬುದನ್ನು ತೋರಿಸುತ್ತದೆ.
ಒಟ್ಟಾರೆಯಾಗಿ, ಇಡಿಯ ಭಾರತ ದೇಶ ಪ್ರಮುಖವಾಗಿ ಹಿಂದೂಗಳಿಗೆ ಹೆಮ್ಮೆಯ ಪ್ರಾಥಃಸ್ಮರಣೀಯರಾಗಿರುವ ಝಾನ್ಸಿ ರಾಣಿ ಲಕ್ಷ್ಮೀಬಾಯಿ ತಾಯ್ನಾಡಿಗಾಗಿ ಕೊನೆಯ ಉಸಿರು ಇರುವವರೆಗೂ ಹೋರಾಡಿ, ವೀರತ್ವದಿಂದಲೇ ಆತ್ಮಾರ್ಪಣೆ ಮಾಡಿದ ತ್ಯಾಗಮಯಿ. ನಿಜಕ್ಕೂ ಈ ಚಿತ್ರ ನೋಡಿ ಹೊರಬರುವ ವೇಳೆ, ಪ್ರತಿ ಮನೆಯಲ್ಲೂ ಇಂತಹ ಲಕ್ಷ್ಮೀಬಾಯಿಯಂತಹ ವೀರಾಗ್ರಣಿ ಜನಿಸಬೇಕು ಎಂದೆನಿಸದೇ ಇರದು.
ನೀವು ಇನ್ನೂ ಮಣಿಕರ್ಣಿಕಾ ನೋಡಿಲ್ಲವೇ? ಹಾಗಾದರೆ, ಇಂದೇ ನಿಮ್ಮ ಕುಟುಂಬದೊಂದಿಗೆ ಪ್ರಮುಖವಾಗಿ ನಿಮ್ಮ ಮನೆಯ ಪುಟ್ಟ ಮಕ್ಕಳೊಂದಿಗೆ ಈ ಚಿತ್ರವನ್ನು ನೋಡಲು ಮರೆಯದಿರಿ.
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post