ಕಲ್ಪ ಮೀಡಿಯಾ ಹೌಸ್ | ಮಣಿಪಾಲ |
ಸಾಯಲೆಂದು ಮೇಲ್ಚಾವಣಿಯ ಕಬ್ಬಿಣದ ಅಡ್ಡಪಟ್ಟಿಗೆ ನೇಣು #Hang ಹಾಕಿಕೊಂಡಿದ್ದ ವ್ಯಕ್ತಿಯೊಬ್ಬರ ಭಾರ ತಡೆಯಲಾರದೇ ಅಡ್ಡಪಟ್ಟಿ ಮುರಿದುಬಿದ್ದು ಸಾವಿಗೀಡಾಗಿರುವ #Death ಘಟನೆ ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮೆಲ್ರಾಯ್(55) ಎಂದು ತಿಳಿದುಬಂದಿದೆ.
ಮೊದಲ ಅಂತಸ್ಥಿನ ಮೇಲ್ಚಾವಣಿಯ ಕಬ್ಬಿಣದ ಅಡ್ಡಪಟ್ಟಿಗೆ ಆತ ನೇಣು ಬಿಗಿದುಕೊಂಡಿದ್ದಾರೆ. ಆದರೆ, ವ್ಯಕ್ತಿ ನೇಣು ಕುಣಿಕೆಯಲ್ಲಿ ನರಳಾಡುತ್ತಿದ್ದಾಗ, ದೇಹದ ಭಾರವು ನಿಯಂತ್ರಣ ಸಿಗದೆ, ಹಗ್ಗವು ತುಂಡಾದ ಪರಿಣಾಮ, ವ್ಯಕ್ತಿ 20 ಅಡಿಗಿಂತಲೂ ಅಧಿಕ ಎತ್ತರದಿಂದ ಮನೆಯ ಹೊರಾಂಗಳದಲ್ಲಿ ಬಿದ್ದಿದ್ದಾರೆ. ತಲೆ ಭಾಗಕ್ಕಾದ ಗಂಭೀರ ಸ್ವರೂಪದ ಗಾಯದಿಂದ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ, ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ, ಮೃತರು 2018ರಲ್ಲಿ ಮರಣಾನಂತರ ಅಂಗಾಂಗ ದಾನ ಮಾಡಲು, ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಂಗಾಗ ದಾನ ಪ್ರತಿಜ್ಞಾ ಪತ್ರವನ್ನು ಪಡೆದಿದ್ದರು. ಸ್ಥಳದಲ್ಲಿ ಲಭ್ಯವಾಗಿರುವ ದಾನ ಪತ್ರದಲ್ಲಿ ಯಕೃತ್ತು, ಕರುಳು, ಕಣ್ಣಿನ ಚೆಂಡುಗಳು, ಚರ್ಮ, ಮೂಳೆಗಳು, ಹೃದಯ ಕವಾಟಗಳು, ರಕ್ತನಾಳಗಳು ದಾನಗೈಯುವ ಉಲ್ಲೇಖಗಳಿದ್ದವು.
ಘಟನಾ ಸ್ಥಳದಲ್ಲಿದ್ದು ಮಣಿಪಾಲ ಪೋಲಿಸ್ ಠಾಣೆಯ ಪಿಎಸ್’ಐ ಅನಿಲ್ ಕುಮಾರ್, ಎಎಸ್’ಐ ನಾಗೇಶ್ ನಾಯ್ಕ್, ಸಿಬ್ಬಂದಿ ವಿದ್ಯಾ ಕಾನೂನು ಪ್ರಕ್ರಿಯೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post