ಕಲ್ಪ ಮೀಡಿಯಾ ಹೌಸ್
ಪ್ರತಿಯೊಬ್ಬ ಮನುಷ್ಯನಲ್ಲೂ ಒಂದೊಂದು ಕಲೆ ಇರುತ್ತೆ ಆ ಕಲೆಗೆ ಬೆಲೆ ಸಿಗುತ್ತಾ!? ಎನ್ನುವ ಪ್ರಶ್ನೆ ನನ್ನ ಮನದಲ್ಲಿ…
ಹೌದು…. ಪ್ರತಿ ಕಲಾವಿದನ ಕಲೆಗೆ ತಕ್ಕ ಬೆಲೆ ಸಿಗಲ್ಲ. ಕೆಲವು ಕಲಾವಿದರು ಎಷ್ಟೇ ಸಾಧನೆ ಮಾಡಿದರೂ ತೆರೆಮರೆಯಲ್ಲಿಯೇ ಉಳಿದು ಬಿಡುತ್ತಾರೆ. ಆ ಕಲಾವಿದ ಬಡವನಾಗಿದ್ದರಂತೂ ಆತನ ಕಲೆ ಆತನ ಮನೆಯಂಗಳಕ್ಕೆ ಮಾತ್ರ ಸೀಮಿತ. ತೆರೆ ಮರೆಯಲ್ಲಿರುವ ಇಂತಹ ಸಾಧಕರನ್ನು ಪರಿಚಯ ಮಾಡೋ ನಮ್ಮದೊಂದು ಸಣ್ಣ ಪ್ರಯತ್ನ.
ಪ್ರತಿಯೊಬ್ಬ ಕಲಾವಿದನಿಗೆ ಒಂದೇ ಆಸೆ, ಎಲ್ಲರೂ ತನ್ನನ್ನು ಗುರುತಿಸಬೇಕು. ತನ್ನನ್ನು ತನ್ನ ಕಲೆಯನ್ನು ಗೌರವಿಸಿಬೇಕು ಅಂತ. ಆದರೆ ಈಗಿನ ಈ ಸ್ವಾರ್ಥ ಯುಗದಲ್ಲಿ ಕಲಾವಿದನೊಳಗಿರುವ ಸರಸ್ವತಿಯ ಜೊತೆಗೆ ಲಕ್ಷ್ಮೀ ಇದ್ದರಷ್ಟೆ ಮಾನ ಸಮ್ಮಾನ. ಹಾಗಿದ್ದಾಗಲೇ ಬೆಲೆ ಜಾಸ್ತಿ. ಇಲ್ಲದಿದ್ದರೆ ಆತ ಬಾಹ್ಯ ಪರಪಂಚಕ್ಕೆ ನಾಸ್ತಿ. ಇಂತಹ ಅಡಕತ್ತರಿಯ ತ್ರಿಶಂಕು ಸ್ಥಿತಿಯಲ್ಲಿ ಸಾವಿರಾರು ಬಡ ಕಲಾವಿದರುಗಳು ನಮ್ಮ ನಿಮ್ಮ ಜೊತೆ ಇದ್ದಾರೆ. ಅಂತಹ ಹಲವಾರು ಸಾಧಕರ ನಡುವೆ ಒಬ್ಬ ಬಡ ಕಲಾವಿದ, ಕಲಾಮಾತೆಯ ಪ್ರೀತಿಯ ಪುತ್ರನ ಸಣ್ಣ ಪರಿಚಯ ನಿಮಗಾಗಿ.
ಇವರ ತಂದೆ ಕೃಷ್ಣ ಕುಲಾಲ್, ತಾಯಿ ವನಜ. ಈಗ 23 ನೆಯ ವಸಂತದಲ್ಲಿ ಕಲಾ ಸಾಧನೆಯ ಒಂದೊಂದೇ ಮೆಟ್ಟಿಲು ಏರುತ್ತಿರುವ ಇವರ ಬಗೆಗೆ ಹೇಳಲು ಸಾಕಷ್ಟಿದೆ. ಜೊತೆಗೆ ಹೆಮ್ಮೆಯೂ ಆಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರದಲ್ಲಿನ ಆಸಕ್ತಿಯಿ ಫಲವಾಗಿ 12 ಕ್ಕೂ ಹೆಚ್ಚು ಯಕ್ಷಗಾನದ ಪಾತ್ರವನ್ನು ಮಾಡಿ ಬಾಲ್ಯದಲ್ಲಿಯೇ ಕೆಲಸಕ್ಕೂ ಹೋಗುತ್ತಾ ಶಾಲೆಗೂ ಹೋಗಿ ತನ್ನ ಶಾಲೆಯ ದಿನಗಳಲ್ಲಿ ಸ್ನೇಹಿತರನ್ನು ಒಟ್ಟುಗೂಡಿಸಿ ನಾಟಕ ತಂಡವನ್ನು ಕಟ್ಟಿ ಹಲವಾರು ವೇದಿಕೆಗಳ ಮೇಲೆ ತನ್ನನ್ನು ಹಾಗೂ ತನ್ನ ಸ್ನೇಹಿತರನ್ನು ಹಲವಾರು ಜನರಿಗೆ ತೋರಿಸಿಕೊಂಡರು. ಕಾಲೇಜಿನ ದಿನದಲ್ಲಿ ವಿದ್ಯಾಭ್ಯಾಸದೊಂದಿಗೆ ಕ್ಯಾಟರಿಂಗ್ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಷ್ಟೇ ಅಲ್ಲದೆ ಸ್ನೇಹಿತರಿಗೂ ಅವಕಾಶವನ್ನು ನೀಡಿ ಸುಮ್ಮನೆ ಕುಳಿತಿದ್ದ ಹುಡುಗರಿಗೆ ಕೆಲಸ ಕೊಡುವ ಮೂಲಕ ಸ್ನೇಹ ಬಳಗಗಕ್ಕೂ ಮನೆ ಮಗನಾಗಿ ಇದ್ದವರು.
ಅಸೆ ಬೆಟ್ಟದಷ್ಟಿದ್ದರೂ ಕಷ್ಟದಲ್ಲಿ ಬೆಳೆದ ಇವರಿಗೆ ಗುರಿ ತಲುಪಲು ಕಷ್ಟಕರವಾಗಿದ್ದರೂ ಅವರ ಸ್ವಂತ ನಿರ್ಧಾರದಿಂದ ಒಂದು ನೃತ್ಯ ತಂಡವನ್ನು ಕಟ್ಟಿ ಸ್ನೇಹ ಬಳಗದ ಸಹಾಯದಿಂದ ಹಲಾವಾರು ಪ್ರಶಸ್ತಿಯನ್ನು ತನ್ನ ಮುಡುಗೇರಿಸಿಕೊಂಡವರು. ಹಾಗೆಯೆ ಅವರ ತಂಡಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡರು. ಹಲವಾರು ಜನರ ಮನ ಗೆದ್ದಂತಹ ಇವರು ಹಲವಾರು ಕಡೆಯಲ್ಲಿ ತನ್ನ ತಂಡದ ಪ್ರದರ್ಶನವನ್ನು ನೀಡಿ ಇನ್ನೊಮ್ಮೆ ಮತ್ತೆ ನಿಮ್ಮ ತಂಡವೇ ನಮ್ಮ ಊರಿಗೆ ಬರಬೇಕು ಎನ್ನುವ ಉತ್ತಮ ಮಾತಿನ ಮೇರೆಗೆ ಅತ್ಯುತ್ತಮ ಹೆಸರನ್ನು ಮಾಡುತ್ತಿದ್ದರು. ಇದುವರೆಗೆ ತನ್ನ ತಂಡವನ್ನ ಕಟ್ಟಿಕೊಂಡು 501 ಪ್ರದರ್ಶನವನ್ನ ಮಾಡಿದ ಇವರು ತನ್ನ ತರಗತಿಯಲ್ಲಿ 80 ವಿದ್ಯಾರ್ಥಿಗಳಿಗೆ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರಿಗೆ ಸಾಧ್ಯವಾದ ಹಾಗೆ ಹಲವಾರು ವಿದ್ಯಾರ್ಥಿಗಳಿಗೆ ಹಲವಾರು ಕಲಾವಿದರಿಗೆ ಪ್ರೋತ್ಸಾಹ ಧನವನ್ನೂ ಹಾಗೂ ಗುರುತಿಸುವಿಕೆಯನ್ನು ಮಾಡಿ ಕಲಾವಿದರ ಬೆಳವಣಿಗೆಯಲ್ಲಿ ಸಹಾಯ ಮಾಡಿದವರು ಇವರು. ಕಲಾವಿದರನ್ನು ಒಟ್ಟು ಗೂಡಿಸುವ ಪ್ರಯತ್ನಕ್ಕೆ ಮುನ್ನುಗ್ಗಿ ತನ್ನ ತಂಡದ ಎರಡನೆಯ ವರುಷದ ವಾರ್ಷಿಕೋತ್ಸವದಲ್ಲಿ ಕಲಾವಿದರ ಸಾಗರವೇ ಹರಿದು ಬಂದಂತೆ ಕಲಾವಿದರನ್ನ ಗುರುತಿಸಿ ಕಲಾವಿದರ ಮೆಚ್ಚುಗೆಗೆ ಪ್ರೀತಿ ಪಾತ್ರರಾದರು.
ಇವರ ಸಾಧನೆಯನ್ನು ನೋಡಿ ಮಡಿಲು ಸನ್ಮಾನ ಪುರಸ್ಕಾರ ಉಜಿರೆಯಲ್ಲಿ ನೀಡಿ ಗೌರವಿಸಿದೆ. ಕುಲಾಲ ಸಮಾಜದಲ್ಲಿ ಇವರನ್ನ ಗುರುತಿಸಿ ಕುಲಾಲ ಸಮಾಜದ ಜನರ ಮನಸ್ಸಲ್ಲಿ ಇವರ ಹೆಸರು ಅಪಾರ,
ಇನ್ನೂ ಹಲವಾರು ಪ್ರಶಸ್ತಿ ಪುರಸ್ಕೃತರಾಗಿ ನಮ್ಮ ನಾಡಿನಲ್ಲಿ ಪ್ರಸಿದ್ಧರಾಗಲಿ ಎನ್ನುವ ಹಾಗೆ ಕಲೆಯೇ ಕಲಾವಿದನ ಸಂಪತ್ತು ಎನ್ನುವ ಇವರ ಮಾತಿನಂತೆ ಇವರು ಕಲಾವಿದರಾಗಿ ಇನ್ನೂ ಉತ್ತುಂಗಕ್ಕೆ ಪ್ರಜ್ವಲಿಸಲಿ. ಇವರ ಕಲಾನರ್ತನ ಡಾನ್ಸ್ ಕ್ರೀವ್ ಸಂಸ್ಥೆ ಇನ್ನೂ ಉತ್ತುಂಗಕ್ಕೆ ಏರಲಿ ಎಂದು ಕಲ್ಪ ಮೀಡಿಯಾ ಹೌಸ್ ಹಾರೈಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post