ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಹಲ್ಗಾಂವ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ವಿಜಯನಗರದ ಉದ್ಯಮಿ ಮಂಜುನಾಥ್ ರಾವ್ ಅವರ ಪಾರ್ಥಿವ ಶರೀರ ಶಿವಮೊಗ್ಗಕ್ಕೆ ಆಗಮಿಸಿದ್ದು, ಅಂತಿಮ ಸಂಸ್ಕಾರಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಜಿಲ್ಲಾಡಳಿತದಿಂದ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು,. ಈ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಮನೆಯ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
Also Read>> 48 ಗಂಟೆಯೊಳಗೆ ಭಾರತ ಬಿಟ್ಟು ತೊಲಗಿ | ಪಾಕಿಗಳಿಗೆ ಮೋದಿ ಸರ್ಕಾರ ಗಡುವು
ಬ್ರಾಹ್ಮಣ ಸಂಪ್ರದಾಯದಂತೆ ಮಂಜುನಾಥ್ ಅವರ ಅಂತಿಮ ವಿಧಿವಿಧಾನವನ್ನು ಕುಟುಂಬಸ್ಥರು ನೆರವೇರಿಸಲಿದ್ದು, ಮನೆಯ ಮುಂಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದ ಬಳಿಕ, ಮಧ್ಯಾಹ್ನ 12 ಗಂಟೆಯ ನಂತರ ಶವಸಂಸ್ಕಾರವನ್ನು ರೋಟರಿ ಚಿತಾಗಾರದಲ್ಲಿ ನಡೆಸಲಾಗುವುದು.
ಪಾರ್ಥಿವ ಶರೀರವನ್ನು ಐಬಿ ವೃತ್ತ, ಜೈಲ್ ಸರ್ಕಲ್, ಡಿವಿಎಸ್ ಸರ್ಕಲ್ ಮತ್ತು ಹೊಳೆ ಬಸ್ ನಿಲ್ದಾಣ ಮಾರ್ಗವಾಗಿ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು.
ಮಂಜುನಾಥ್ ರಾವ್ ಅವರ ಪಾರ್ಥಿವ ಶರೀರವನ್ನು ಸ್ವಗೃಹಕ್ಕೆ ಸ್ವಾಗತಿಸಲು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಾವಿರಕ್ಕೂ ಅಧಿಕ ಭಗವದ್ ಧ್ವಜಗಳೊಂದಿಗೆ ವಿಶೇಷ ವ್ಯವಸ್ಥೆ ಮಾಡಿವೆ. ಸ್ವಯಂಸೇವಕರು ಮನೆಯ ಮುಂಭಾಗದಲ್ಲಿ ಸಿದ್ಧರಾಗಿದ್ದು, ಈ ದುಃಖದ ಸಂದರ್ಭದಲ್ಲಿ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ ಅವರು ಉಗ್ರಗಾಮಿಗಳು ನಡೆಸಿದ ಈ ಕೃತ್ಯವನ್ನು ಮಾಡುವ ನಾಚಿಕೆಗೇಡಿನ ಘಟನೆ ಎಂದು ಹೀಯಾಳಿಸಿದರು. ಮೃತ ಮಂಜುನಾಥ್ ಪಾರ್ಥಿವ ಶರೀರ ಆಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ಇಡೀ ದೇಶ ಒಗ್ಗಟ್ಟಾಗಿ ಉಗ್ರರನ್ನು ಸಂಪೂರ್ಣವಾಗಿ ಸೆದೆ ಬಡಿಯುವ ಕೃತ್ಯ ಮಾಡಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post