ನವದೆಹಲಿ: 2018ನೆಯ ವರ್ಷದಲ್ಲಿ ದೇಶದ ಪ್ರತಿ ಗ್ರಾಮಕ್ಕೂ ಸಹ ವಿದ್ಯುತ್ ತಲುಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಮನ್ ಕಿ ಬಾತ್ ನ 51ನೆಯ ಸರಣಿಯಲ್ಲಿ ದೇಶವನ್ನುದ್ದೇಶಿಸಿ ರೇಡಿಯೋದಲ್ಲಿ ಮಾತನಾಡಿದ ಅವರು, ದೇಶದ ಪ್ರತಿ ಪ್ರಜೆಗೂ 2019ರ ಹೊಸ ವರ್ಷಾಚರಣೆಯ ಶುಭಾಶಯಗಳು. ಈ ಸಂಭ್ರಮದೊಂದಿಗೆ ಏಷ್ಯನ್ ಗೇಮ್ಸ್ ಹಾಗೂ ಅಂಧರ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಸಾಧನೆ ಮಾಡಿರುವ ದೇಶದ ಕ್ರೀಡಾಪಟುಗಳನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಇನ್ನು, ಆಯುಷ್ಯಾಮ್ ಭಾರತ ಆರೋಗ್ಯ ವಿಮಾ ಯೋಜನೆಯನ್ನು ಉಲ್ಲೇಖಿಸಿದ ಪ್ರಧಾನಿಯವರು, ದೇಶದ ಪ್ರತಿಗ್ರಾಮಗಳಿಗೂ ನಮ್ಮ ಸರ್ಕಾರ ವಿದ್ಯುತ್ ನೀಡಿದೆ. ಹಾಗೆಯೇ, ದೇಶದಲ್ಲಿ ಬಡತನದ ಪ್ರಮಾಣ ಕಡಿಮೆಯಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಗುರುತರವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜಾಗತಿಕ ಮಟ್ಟದ ಸಂಸ್ಥೆಗಳು ಪ್ರಶಂಸಿಸಿವೆ ಎಂದಿದ್ದಾರೆ.
ಜನವರಿ 15ರಿಂದ ಆರಂಭವಾಗುವ ಕುಂಭಮೇಳದ ವಿಚಾರವನ್ನು ಪ್ರಸ್ತಾಪಿಸಿದ ಮೋದಿಯವರು, ಅತ್ಯಂತ ದೈವಭಕ್ತಿ ಹಾಗೂ ಶ್ರದ್ಧಾಭಕ್ತಿಗಳಿಂದ ನಡೆಯುವ ಪವಿತ್ರ ಕುಂಭಮೇಳವನ್ನು ಕಳೆದ ವರ್ಷ ಯುನೆಸ್ಕೋ ಪ್ರಶಂಸಿಸಿದ್ದು ನಮ್ಮ ಹೆಮ್ಮೆ ಎಂದರು.
Happy to be connecting once again, thanks to #MannKiBaat. Tune in. https://t.co/2kJdT6On0S
— Narendra Modi (@narendramodi) December 30, 2018







Discussion about this post