ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಡಿಜಿಟಲ್ ಬಂಧನದ ಸೈಬರ್ ಅಪರಾಧಗಳ #CyberCrime ಕುರಿತಾಗಿ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ #PMNarendraModi ಹೇಳಿದ್ದಾರೆ.
ಮನ್ ಕಿ ಬಾತ್’ನಲ್ಲಿ ಈ ಕುರಿತಂತೆ ಉಲ್ಲೇಖಿಸಿರುವ ಅವರು, ಇದು ಸಮಾಜದ ಎಲ್ಲಾ ವರ್ಗದವರನ್ನು ತಟ್ಟಿದ್ದು, ಇಂತಹ ಪರಿಸ್ಥಿತಿ ಎದುರಾದಾಗ ನಿಲ್ಲಿಸಿ, ಯೋಚಿಸಿ ಮತ್ತು ಕ್ರಮ ತೆಗೆದುಕೊಳ್ಳಿ ಎಂಬ ಮಂತ್ರವನ್ನು ಅಳವಡಿಸಿಕೊಳ್ಳುವಂತೆ ಜನರನ್ನು ಕೋರಿದ್ದಾರೆ.
ಸಮಸ್ಯೆಯನ್ನು ಎದುರಿಸಲು ತನಿಖಾ ಸಂಸ್ಥೆಗಳು ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿವೆ. ಆದರೆ ಈ ಅಪರಾಧದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಜಾಗೃತಿ ಅಗತ್ಯ ಎಂದು ಪ್ರಧಾನಿಯವರು ಹೇಳಿದ್ದಾರೆ.

Also read: ಭದ್ರಾವತಿ | ಐತಿಹಾಸಿಕ ಪ್ರಸಿದ್ಧ ಲಕ್ಷ್ಮಿನರಸಿಂಹ ದೇಗುಲ ದುರಸ್ಥಿಗೆ ಒತ್ತಾಯ
ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ. ಅಂತಹ ತನಿಖೆಗಾಗಿ ಯಾವುದೇ ತನಿಖಾ ಸಂಸ್ಥೆಯು ಫೋನ್ ಅಥವಾ ವೀಡಿಯೊ ಕರೆ ಮೂಲಕ ನಿಮ್ಮನ್ನು ಸಂಪರ್ಕಿಸುವುದಿಲ್ಲ ಎಂದವರು ಹೇಳಿದರು.

ಈ ರೀತಿಯ ಬರುವ ಯಾವುದೇ ಕಾಲ್’ಗಳನ್ನು ಅವರು ಅಂತಹ ಸಂಭಾಷಣೆಗಳನ್ನು ರೆಕಾರ್ಡ್ ಮಾಡಬೇಕು. ಸ್ಕ್ರೀನ್ ಶಾಟ್’ಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post