ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ಕೇಂದ್ರ ಗೃಹ ಸಚಿವ ಅಮಿತ್ ಷಾ Amith Shah ಅವರು 103 ಅಡಿ ಎತ್ತರದ ಪಂಚಲೋಹದ ಭವ್ಯ ಶ್ರೀರಾಮ Shri Rama ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಗುರು ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪುಣ್ಯ ಕ್ಷೇತ್ರ ಮಂತ್ರಾಲಯದಲ್ಲಿ Mantralaya ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಅತಿ ಎತ್ತರದ ಪಂಚಲೋಹದ ವಿಗ್ರಹ ಸ್ಥಾಪನೆ ಆಗಲಿದೆ.

Also read: ಕ್ಯಾಮರಾ ಟ್ರಾಪ್’ನಲ್ಲಿ ಈ ಬಾರಿ ರಾಜ್ಯದಲ್ಲಿ 435 ಹುಲಿಗಳು ಪತ್ತೆ | ಎಲ್ಲೆಲ್ಲಿ ಎಷ್ಟಿವೆ ವ್ಯಾಘ್ರಗಳು?
ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಷಾ, ಪುಣ್ಯ ಕ್ಷೇತ್ರ ಮಂತ್ರಾಲಯದ ಹಿರಿಮೆಗೆ ಇನ್ನಷ್ಟು ಮೆರುಗು ಶ್ರೀರಾಮನ ಪ್ರತಿಷ್ಠಾಪನೆಯಿಂದ ಬರಲಿದೆ ಎಂದರು.
ಶ್ರೀ ಸುಭುಧೇಂದ್ರ ತೀರ್ಥ ಶ್ರೀಪಾದರು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪುತ್ಥಳಿ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಿದರು. ಜೈ ಶ್ರೀರಾಮ ಫೌಂಡೇಶನ್ ಮುಖ್ಯಸ್ಥರಾದ ಎಂ.ಪಿ. ಶ್ರೀಧರ, ರಾಮು ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post