ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ಶ್ರೀ ರಾಘವೇಂದ್ರ ಸ್ವಾಮಿಗಳ #Shri Raghavendra Swamy ಮೂಲ ಬೃಂದಾವನ ಸನ್ನಿಧಿಯಲ್ಲಿ ಬೆಂಗಳೂರಿನ ಖ್ಯಾತ ಯುವ ಗಾಯಕಿ ರಚನಾ ಶರ್ಮಾ ಅವರಿಂದ ನಡೆದ ಗಾನ ಸೇವೆ ಮನಸೂರೆಗೊಂಡಿತು.
ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ #Subudhendra Shri ಅನುಗ್ರಹ ಆಶೀರ್ವಾದದೊಂದಿಗೆ ರಚನಾ ಶರ್ಮಾ ಅವರು ಸಲ್ಲಿಸಿದ ಗಾಯನ ಸೇವೆಯಲ್ಲಿ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು.
Also read: ಶಿವಮೊಗ್ಗ | ಬಿರಿಯಾನಿ ತಿನ್ನುಲು ಹೋದವನಿಗೆ ಮಚ್ಚು, ಬಿಯರ್ ಬಾಟಲಿಯಿಂದ ಹಲ್ಲೆ!
ವಾದ್ಯ ಸಹಕಾರದಲ್ಲಿ ಬೆಂಗಳೂರಿನವರೇ ಆದ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಪಿಟೀಲು ವಾದನದಲ್ಲಿ ಹಾಗೂ ವಿದ್ವಾನ್ ಮುರಳಿ ನಾರಾಯಣರಾವ್ ಮೃದಂಗದಲ್ಲಿ ಸಾಥ್ ನೀಡಿದರು.
ಕಾರ್ಯಕ್ರಮದ ನಂತರ ಶ್ರೀಪಾದಂಗಳವರು ಎಲ್ಲಾ ಕಲಾವಿದರಿಗೂ ಫಲ ಮಂತ್ರಾಕ್ಷತೆ ಮತ್ತು ಅನುಗ್ರಹ ಪತ್ರ ನೀಡಿ ಆಶೀರ್ವದಿಸಿದರು.
ಈ ಕಾರ್ಯಕ್ರಮವನ್ನು ಶ್ರೀ ಪದ್ಮನಾಭಾಚಾರ್ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post