ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ಮುಸಲ್ಮಾರ ಪವಿತ್ರ ರಂಜಾನ್ Ramzan ಹಿನ್ನೆಲೆಯಲ್ಲಿ ನೂರಾರು ಮುಸಲ್ಮಾನರು ಮಂತ್ರಾಲಯದ Mantralaya ಶ್ರೀಮಠಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿಗಳ Raghavendra Swamy ಮೂಲ ಬೃಂದಾವನ ದರ್ಶನ ಪಡೆದರು.
ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ನೂರಾರು ಮುಸಲ್ಮಾನರು ಶ್ರೀ ಮಠಕ್ಕೆ ಆಗಮಿಸಿ, ರಾಯರ ಮೂಲ ಬೃಂದಾವನ ಹಾಗೂ ಎಲ್ಲಾ ಗುರುವರ್ಯರ ಬೃಂದಾವನ ದರ್ಶನ ಪಡೆದರು.
ಆನಂತರ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮುಸಲ್ಮಾನ ಭಕ್ತರಿಗೆ ಅನುಗ್ರಹ ಸಂದೇಶ ನೀಡಿ, ಮುಸಲ್ಮಾನ ಸಮುದಾಯದವರಲ್ಲಿ ಬಹಳಷ್ಟು ಮಂದಿ ರಾಯರ ಭಕ್ತರಿದ್ದಾರೆ. ಇದೇರೀತಿ ಗುರುರಾಯರಲ್ಲಿ ಶ್ರದ್ಧೆಯಿಂದ ನಂಬಿಕೆಯಿಟ್ಟು ಅವರ ಅನುಗ್ರಹಕ್ಕೆ ಪಾತ್ರರಾಗಿ ಎಂದರು.
Also read: ಪಿಯುಸಿ ಫಲಿತಾಂಶ: ಡಿಸ್ಟಿಂಕ್ಷನ್ ಶ್ರೇಣಿ ಪಡೆದು ಸಾಗರ ತಾಲೂಕಿಗೆ ಕೀರ್ತಿ ತಂದ ಸೃಷ್ಟಿ
ಶ್ರೀಗಳು ಮಾತನಾಡಿ, ರಾಯರು ಜಾತಿ, ಧರ್ಮ, ದೇಶ-ಭಾಷೆ ಇವೆಲ್ಲವನ್ನೂ ಮೀರಿ ಇಡೀ ವಿಶ್ವಕ್ಕೆ ಯತಿಕುಲ ತಿಲಕರಾಗಿ ತಮ್ಮ ಆಶೀರ್ವಾದವನ್ನು ಅನುಗ್ರಹಿಸಿದ್ದಾರೆ. ನಿಮ್ಮ ಪವಿತ್ರ ಹಬ್ಬ ರಂಜಾನನ್ನು ನಿಮ್ಮ ಸಂಪ್ರದಾಯದಂತೆ ಆಚರಿಸಿದ್ದೀರಿ ಇದರೊಂದಿಗೆ ನಿಮ್ಮ ಹಬ್ಬದ ದಿನವೇ ಗುರುರಾಯರಲ್ಲಿ ನಂಬಿಕೆ ಹೊಂದಿರುವ ನೀವುಗಳು ಮಠಕ್ಕೆ ಆಗಮಿಸಿ ಗುರುಗಳ ದರ್ಶನ ಪಡೆದಿರುವುದು ಸಂತಸದ ವಿಚಾರ. ನಿಮಗೆಲ್ಲಾ ಪೂರ್ಣ ಅನುಗ್ರಹವಾಗಲಿ ಎಂದು ರಾಯರಲ್ಲಿ ಪ್ರಾರ್ಥಿಸುತ್ತೇವೆ. ಇದೇರೀತಿ ನಿಮ್ಮಂತೆಯೇ ಎಲ್ಲಾ ಜಾತಿ ಹಾಗೂ ಧರ್ಮದ ಜನಗಳು ಪ್ರತಿಯೊಬ್ಬರ ಆಚರಣೆಗಳನ್ನು ಪರಸ್ಪರ ಗೌರವಿಸಿ, ಸಹಬಾಳ್ವೆಯಿಂದ ಜೀವನ ನಡೆಸುವಂತಾಗಲಿ ಎಂದು ಆಶಿಸಿದರು.
ಶ್ರೀಮಠಕ್ಕೆ ಅಗಮಿಸಿದ್ದ ಎಲ್ಲಾ ಭಕ್ತರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿ, ಪರಿಮಳ ಪ್ರಸಾದವನ್ನು ನೀಡಿ ಅವರನ್ನು ಅನುಗ್ರಹಿಸಿದರು. ಸಣ್ಣ ಮಕ್ಕಳಾದಿಯಾಗಿ ನೆರೆದಿದ್ದ ಎಲ್ಲಾ ಮುಸಲ್ಮಾನರು ಸ್ವಾಮಿಗಳಿಗೆ ಕೈಮುಗಿದು ಪ್ರಸಾದ ಸ್ವೀಕರಿಸಿ ಧನ್ಯವಾದ ಹೇಳಿದ್ದು, ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post