ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೊಡ್ಡಜಾತ್ರೆ ಹಾಗೂ ಪಂಚ ಮಹಾರಥೋತ್ಸವದ ಹಿನ್ನೆಲೆಯಲ್ಲಿ ಹೆಚ್ಚುವರಿ ಜನ ದಟ್ಟಣೆಯನ್ನು ನಿವಾರಿಸಲು ಹಾಗೂ ಪ್ರಯಾಣಿಕರ ಸೌಲಭ್ಯಕ್ಕಾಗಿ ಮೈಸೂರು ಹಾಗೂ ನಂಜನಗೂಡು ನಡುವೆ ವಿಶೇಷ ರೈಲು ಸಂಚಾರಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಮಾಹಿತಿ ನೀಡಿದ್ದು, ಮಾರ್ಚ್ 30ರಿಂದ ಎಪ್ರಿಲ್ 3ರವರೆಗೂ ಪ್ರತಿ ದಿಕ್ಕಿನಲ್ಲಿ 5 ಟ್ರಿಪ್’ಗಳ ವಿಶೇಷ ಕಾಯ್ದಿರಿಸದ ಎಕ್ಸ್’ಪ್ರೆಸ್ ರೈಲುಗಳನ್ನು ಓಡಿಸಲಿದೆ ಎಂದು ತಿಳಿಸಿದೆ. ವಿವರಗಳು ಹೀಗಿವೆ.
06225 ಸಂಖ್ಯೆಯ #Mysore ಮೈಸೂರು – ನಂಜನಗೂಡು ಟೌನ್ ಕಾಯ್ದಿರಿಸದ ಎಕ್ಸ್’ಪ್ರೆಸ್ ವಿಶೇಷ ಮೈಸೂರಿನಿಂದ 13:00 ಗಂಟೆಗೆ ಹೊರಟು, ನಂಜನಗೂಡು ಟೌನ್ ಗೆ 14:00 ಗಂಟೆಗೆ ತಲುಪಲಿದೆ. ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ/ನಿರ್ಗಮನ ಸಮಯಗಳು ಚಾಮರಾಜಪುರಂ #Chamarajapuram 13:07/13:08 ಗಂಟೆ, ಅಶೋಕಪುರಂ 13:15/13:16 ಗಂಟೆ, ಕಡಕೊಳ 13:29/13:30 ಗಂಟೆ, ತಾಂಡವಪುರ 13:35/13:36 ಗಂಟೆ, ಸುಜಾತಪುರಂ 13:41/13:42 ಗಂಟೆಗೆ ಬರಲಿದೆ.
06226 ಸಂಖ್ಯೆಯ ನಂಜನಗೂಡು ಟೌನ್ – ಮೈಸೂರು #Mysore ಕಾಯ್ದಿರಿಸದ ಎಕ್ಸ್’ಪ್ರೆಸ್ ವಿಶೇಷ ನಂಜನಗೂಡು ಟೌನ್ ನಿಂದ 15:10 ಗಂಟೆಗೆ ಹೊರಟು, ಮೈಸೂರಿಗೆ 16:10 ಗಂಟೆಗೆ ತಲುಪಲಿದೆ. ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ / ನಿರ್ಗಮನ ಸಮಯಗಳು, ಸುಜಾತಪುರಂ 15:15/15:16 ಗಂಟೆ, ತಾಂಡವಪುರ 15:21/15:22 ಗಂಟೆ, ಕಡಕೊಳ 15:27/15:28 ಗಂಟೆ, ಅಶೋಕಪುರಂ 15:48/15:50 ಗಂಟೆ, ಚಾಮರಾಜಪುರಂ 15:55/15:56 ಗಂಟೆಗೆ ಬರಲಿದೆ.
ಈ ರೈಲಿನಲ್ಲಿ ಒಟ್ಟು 21 ಕೋಚ್’ಗಳು ಇರುತ್ತವೆ: 2 ಎಸಿ ಟು-ಟಯರ್, 6 ಎಸಿ ತ್ರೀ-ಟಯರ್, 7 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ, 1 ಲಗೇಜ್/ಬ್ರೇಕ್ ವ್ಯಾನ್, 1 ಎಸ್ಎಲ್ಆರ್’ಡಿ ಕೋಚ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















