No Result
View All Result
Sagara Engulfed In The Ocean of Music
English Articles

Sagara Engulfed In The Ocean of Music

by ಕಲ್ಪ ನ್ಯೂಸ್
March 23, 2026
0

Kalpa Media House  |  Special Article by Rasikapriya  | An invigorating music festival held recently at Sagara, Shimoga Dist., took...

Read moreDetails
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
  • Advertise With Us
  • Grievances
  • About Us
  • Contact Us
Tuesday, March 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಾರ್ಚ್ 31-ಏ.3 | ಕಾಕೋಳು ವೇಣುಗೋಪಾಲಕೃಷ್ಣನ 92ನೇ ಬ್ರಹ್ಮರಥೋತ್ಸವ

ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರಿಂದ ನೂತನ ರಾಜಗೋಪುರ ಉದ್ಘಾಟನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 30, 2025
in Special Articles
0
ಮಾರ್ಚ್ 31-ಏ.3 | ಕಾಕೋಳು ವೇಣುಗೋಪಾಲಕೃಷ್ಣನ 92ನೇ ಬ್ರಹ್ಮರಥೋತ್ಸವ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಬೆಂಗಳೂರಿನ ಹೊರವಲಯದ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಪೌರಾಣಿಕ ಹಿನ್ನೆಲೆಯ ಕಾಕೋಳು ಗ್ರಾಮದಲ್ಲಿ ದಾಸಸಾಹಿತ್ಯ ಆದ್ಯಪ್ರವರ್ತಕ ಶ್ರೀಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ಶ್ರೀ ವೇಣುಗೋಪಾಲ ಸ್ವಾಮಿಯ ಜಾಗೃತ ಸನ್ನಿಧಾನವಾಗಿ ನಂಬಿ ಬರುವ ಆಸ್ತಿಕ ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.

ಮೂಲವಿಗ್ರಹಗಳ ಪುನರ್ ಪ್ರತಿಷ್ಠಾಪನೆಯ ಸಂಸ್ಮರಣಾರ್ಥವಾಗಿ ಆಚರಿಸುವ ಉತ್ಸವವೇ ಬ್ರಹ್ಮರಥೋತ್ಸವ. ಇದೇ ವಿಶ್ವಾವಸು ಸಂ. ಚೈತ್ರ ಶುದ್ಧ ಪಂಚಮಿ (ಏಪ್ರಿಲ್ 2, 2025ಕ್ಕೆ ). ಶ್ರೀಸ್ವಾಮಿಯವರ ಬ್ರಹ್ಮರಥೋತ್ಸವಕ್ಕೆ 92ನೇ ವಸಂತದ ಸಂಭ್ರಮ. 1933ರಲ್ಲಿ ಆರಂಭಗೊಂಡ ಈ ಪರಂಪರೆ ಇಲ್ಲಿಯವರೆಗೂ ಅವಿಚ್ಛಿನವಾಗಿ ನಡೆದು ಬಂದಿರುವುದು ಒಂದು ದಾಖಲೆಯೇ ಸರಿ!

Also Read>> ಗಮನಿಸಿ! ಅರಸೀಕೆರೆ-ನರಸಾಪುರ ರೈಲು ಪ್ರಯಾಣಿಕರಿಗೆ ಇಲ್ಲಿದೆ ಲೇಟೆಸ್ಟ್ ಅಪ್ಡೇಟ್

ಕಾಕೋಳು ಗ್ರಾಮದ ಗ್ರಾಮಸ್ಥರೂ ಸೇರಿದಂತೆ 4 ತಲೆಮಾರಿನ ಭಕ್ತ ಜನರು ಈ ಉತ್ಸವಕ್ಕೆ ಸಾಕ್ಷಿಯಾಗಿ ಹಲವು ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮುನ್ನಡೆಸುತ್ತಿದ್ದಾರೆ. ಇದೀಗ ವಿಶ್ವಾವಸು ಸಂ|| ಚೈತ್ರ ಶುದ್ಧ ಪಂಚಮಿ (ಏಪ್ರಿಲ್ 2, 2025ಕ್ಕೆ ) ಭಾಗವತಪ್ರಿಯ ಭಕ್ತವತ್ಸಲನ 92ನೇ ವರ್ಷದ ಬ್ರಹ್ಮರಥೋತ್ಸವದ ಸಂಭ್ರಮದ ಆಚರಣೆಯನ್ನು ಕಾಕೋಳು ಗ್ರಾಮಸ್ಥರು, ಗ್ರಾಮೀಣ ಪ್ರದೇಶದಲ್ಲಿ ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ, ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ ಸಹಯೋಗ ಹಾಗು ಸಕಲ ಸದ್ಭಕ್ತರ ಸಹಕಾರದೊಡನೆ ನಾಡಿನ ಧಾರ್ಮಿಕ – ಸಾಂಸ್ಕೃತಿಕ ಕ್ಷೇತ್ರದ ಖ್ಯಾತನಾಮ ಗಣ್ಯರ ಉಪಸ್ಥಿತಿಯಲ್ಲಿ ಆಗಮೋಕ್ತ ರೀತಿಯಲ್ಲಿ ಅರ್ಥಪೂರ್ಣವಾಗಿ ಹಲವು ವಿಶಿಷ್ಠ ಗಾನ-ಜ್ಞಾನ ಯಜ್ಞ – ಉತ್ಸವಗಳಿಂದ ವಿಜೃಂಭಣೆಯಿಂದ ನಡೆಸಲು ಯೋಜಿಸಿದೆ.

http://kalpa.news/wp-content/uploads/2025/03/PES-Video.mp4

ಕಾಕೋಳು ತೇರು – ವೇಣುಗೋಪಾಲನ ವೈಭವದ ಮೇರು
ಮಾರ್ಚ್ 31 ರಿಂದ ಏ. 3ರವರೆಗೆ ದೇವಾಲಯದ ಆವರಣದ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ನಡೆಯುವ ವೈವಿಧ್ಯಮಯ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು.

ಮಾರ್ಚ್ 31 ಸೋಮವಾರ ಬೆಳಿಗ್ಗೆ 9.30ಕ್ಕೆ ದೇವಾಲಯದ ಮುಂಭಾಗದಲ್ಲಿ ಭಕ್ತಜನರ ಸಹಕಾರದಿಂದ ನೂತನವಾಗಿ ನಿರ್ಮಾಣವಾಗಿರುವ ಶಿಲಾಮಯ ರಾಜಗೋಪುರ ಲೋಕಾರ್ಪಣೆ ಮತ್ತು 92ನೇ ಬ್ರಹ್ಮರಥೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯನ್ನು ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ನೆರವೇರಿಸುವರು. ನಂತರ ಶ್ರೀಪಾದರಿಂದ ಕಾಷ್ಠ ಪ್ರಾಕಾರ ರಥ – ಹಿತ್ತಾಳೆ ಕವಚದ ಧ್ವಜಸ್ತಂಭದ ಸಂಪ್ರೋಕ್ಷಣೆ, ಅಮೃತೋಪದೇಶ, ಪ್ರಮುಖ ದಾನಿಗಳಿಗೆ ಗೌರವ ಸಂಮಾನ – ಸಂಸ್ಥಾನ ಪೂಜೆ ನಡೆಯಲಿದೆ.

ಸಂಜೆ 4.30ರಿಂದ ದೊಡ್ಡಬಳ್ಳಾಪುರದ ಪಾಂಚರಾತ್ರಾಗಮ ಪ್ರವೀಣ ಡಾ. ಶ್ರೀನಿವಾಸ ರಾಘವನ್ ಮತ್ತು ಮಕ್ಕಳ ಆಗಮ ಸಾರಥ್ಯದಲ್ಲಿ ಪಲ್ಲಕ್ಕಿ ಉತ್ಸವ, ಗರುಡ ಧ್ವಜಾರೋಹಣ , ಸಂತಾನಾಪೇಕ್ಷಿಗಳಿಗೆ ಗರುಡ ಬುತ್ತಿ, ತೊಟ್ಟಿಲುಪೂಜೆ ಆಯೋಜಿಸಲಾಗಿದೆ. ಬ್ರಹ್ಮರಥೋತ್ಸವದ ಪ್ರಮುಖ ಅಂಗವೇ ಗರುಡಬುತ್ತಿ. ಧ್ವಜಾರೋಹಣದಂದು ನೀಡುವ ಗರುಡದೇವರ ಪ್ರಸಾದವನ್ನು ಸಂತಾನಾಪೇಕ್ಷಿಗಳು ಸೇವಿಸಿ, ತೊಟ್ಟಿಲು ಪೂಜೆ ಮಾಡಿದರೆ ಸಂತಾನಭಾಗ್ಯ ನಿಶ್ಚಿತ ಎನ್ನುವ ನಂಬಿಕೆಯಿದೆ. ಹಾಗಾಗಿ ಇಲ್ಲಿಯ ಕೃಷ್ಣ ಸಂತಾನ ವೇಣುಗೋಪಾಲ ಎಂದೂ ಜನಜನಿತ.ಏ.1 ಮಂಗಳವಾರ ಬೆಳಿಗ್ಗೆ 9.00ರಿಂದ ನಾಮ ಸಂಕೀರ್ತನೆ
ಶ್ರೀಶ್ರೀನಿಧಿ ಶ್ರಿನಿವಾಸ ಭಜನಾ ಮಂಡಲಿ , ಕೋನಣಕುಂಟೆ ನಂತರ ಗಜೇಂದ್ರ ಮೋಕ್ಷ ಉತ್ಸವ ಪುಣ್ಯಕಥಾ ಸಮಯ – ಧಾರ್ಮಿಕ ಚಿಂತಕ ಮ|ಶಾ|ಸಂ ವಿದ್ವಾನ್ ಮುರಳಿಧರಾಚಾರ್ಯರಿಂದ ಪ್ರವಚನ; ಸಂಜೆ 6.00ಕ್ಕೆ ವೈಭವದ ಪರಮ ಮಂಗಳಕರ ಮಹಾಕಲ್ಯಾಣೋತ್ಸವ ಏರ್ಪಡಿಸಲಾಗಿದೆ.

ಏ. 2 ಬುಧವಾರ ಬೆಳಿಗ್ಗೆ ಗರುಡೋತ್ಸವ, ಶೇಷವಾಹನದಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀಕೃಷ್ಣನ ಉತ್ಸವಮೂರ್ತಿಯ ಮಂಟಪ್ಪಡಿ (ಗ್ರಾಮ ಪ್ರದಕ್ಷಿಣೆ) ಹಾಗೂ ವ್ಯಾಸ ದಾಸ ಸಾಹಿತ್ಯ ಪಂಥದವರ ಸಮಾಗಮದ ವಿವಿಧ ಭಜನಾ ಮಂಡಳಿಯಿಂದ ನಾಮ ಸಂಕೀರ್ತನೆಯೊಂದಿಗೆ ಅಭಿಜಿನ್ ಮುಹೂರ್ತದಲ್ಲಿ ಪೂರ್ಣಾಹುತಿಯಾಗಿ ದಿವ್ಯ ಪುಷ್ಪಾಲಂಕೃತ ಮಹಾರಥಾರೋಹಣ – 92ನೇ ಬ್ರಹ್ಮರಥೋತ್ಸವ, ಅನ್ನ ಸಂತರ್ಪಣೆ ನಡೆಯಲಿದೆ.

ಏ.3 ಗುರುವಾರ ಬೆಳಿಗ್ಗೆ 10.00ಕ್ಕೆ ತಿರುಮಲ ತಿರುಪತಿ ದೇವಾಲಯ ಹಿಂದೂ ಧರ್ಮಪ್ರಚಾರ ಪರಿಷತ್ ಪಾಯೋಜಕತ್ವದಲ್ಲಿ ನಾದ ನೀರಾಜನ: ಭಜನಾ ಮಂಡಳಿಯವರಿಂದ ಗೋಪಿವಲ್ಲಭ ಗಾನಸುಧಾ ದಾಸರ ಪದಗಳ ಗಾಯನ : ವಸಂತೋತ್ಸವದೊಡನೆ ಅಷ್ಟಮಿಪ್ರಿಯನ ಅವಿಸ್ಮರಣೀಯ ಉತ್ಸವ ಸಂಪನ್ನವಾಗಲಿದೆ.

ಈ ಎಲ್ಲಾ ಉತ್ಸವಗಳ ಮಹಾಸರಣಿಯು ಭಕ್ತ ಬಂಧುಗಳ ಭವ ಬಂಧನಕ್ಕೊAದು ಆಧ್ಯಾತ್ಮಿಕ ಸ್ಪಂದನ ನೀಡಿ. ಇಂದಿನ ಒತ್ತಡಯುತ ಜೀವನಶೈಲಿಯ ಹತಾಶೆ, ಉದ್ವಿಗ್ನತೆ, ಮಾನಸಿಕ ತೊಳಲಾಟಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾಕೋಳು ದೇವಸ್ಥಾನವು ಅಗಾಧ ಕೊಡುಗೆ ನೀಡುತ್ತಿದೆ. ಒಟ್ಟಾರೆ ಈ ದೇಗುಲ ಸಂಕೀರ್ಣ ಕೃಷ್ಣಭಕ್ತಿಗೆ ಪ್ರೇರಕವೆನಿಸುತ್ತದೆ. ಗ್ರಾಮಾಂತರದಲ್ಲಿ ಆಧ್ಯಾತ್ಮಿಕತೆಯನ್ನಾಧರಿಸಿದ ಸಂಘಟನೆ, ಧರ್ಮಸಂಸ್ಕೃತಿ ಜಾಗೃತಿಯೇ ಇಲ್ಲಿ ಪರಮಲಕ್ಷ್ಯವಾಗಿದೆ ಎಂದು ದೇವಸ್ಥಾನ ವಿಶ್ವಸ್ಥ ಮಂಡಲಿಯವರು ತಿಳಿಸಿರುತ್ತಾರೆ. ಸಂಪರ್ಕಕ್ಕೆ – 97393 69621/98450 75250.ದೇಗುಲದ ಕಿರು ಪರಿಚಯ: ಬೃಂದಾವನದಲಿ ನಲಿಯುವ ಕೃಷ್ಣ
ಅಲ್ಲೊಂದು ತುಳಸಿ ಬೃಂದಾವನ. ನಡುವೆ ಎಡಗಾಲ ಮೇಲೆ ಬಲಗಾಲನ್ನಿಟ್ಟು ಕೊಳಲನ್ನು ಹಿಡಿದ ಮುರಳಿ, ಇಕ್ಕೆಲಗಳಲ್ಲಿ ವೇಣುಗಾನದಲ್ಲಿ ಭಾವ ಪರವಶವಾಗಿರುವ ಗೋವುಗಳು, ಎದುರಿಗೆ ಕೃಷ್ಣನ ದಿವ್ಯ ಸ್ವರೂಪವನ್ನು ಕಣ್ತುಂಬಿಸಿಕೊಳ್ಳುತ್ತಿರುವ ವೇದವ್ಯಾಸ, ಆಚಾರ್ಯ ಮಧ್ವ, ಶ್ರೀಪಾದರಾಜರು… ಸನಿಹದಲ್ಲಿಯೇ ಕನಕ- ಪುರಂದರದಾಸರು…ಮನದಲ್ಲಿ ನೆಮ್ಮದಿ, ಮಾತಿನಲ್ಲಿ ಸಿದ್ಧಿ, ಮನೆಯಲ್ಲಿ ಸಮೃದ್ಧಿ ಬೇಕೆ? ಹಾಗಿದ್ದರೆ ಬನ್ನಿ ಇಲ್ಲಿಗೆ ಎಂದು ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಿದೆ ಈ ತಾಣ. ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಚಾರಿತ್ರಿಕ, ಪೌರಾಣಿಕ ನೆಲೆಯೆಂದು ಜನಪ್ರಿಯವಾಗಿದೆ. ಕಾಲಕ್ಕೆ ತಕ್ಕಂತೆ ಕೊಂಚ ಆಧುನಿಕತೆಯ ಲೇಪವಿದ್ದರೂ ಗ್ರಾಮೀಣ ಸಂಸ್ಕೃತಿಯಿAದ ಬೇರ್ಪಟ್ಟಿಲ್ಲ. ಒಂದು ಊರಿನ ಇತಿಹಾಸವೆಂದರೆ ಅದು ಜನತೆಯ ಇತಿಹಾಸ, ಅವರು ಬಾಳಿ ಬದುಕಿದ ರೀತಿ, ಅನುಸರಿಸಿದ ಧರ್ಮ, ಸಾಂಸ್ಕೃತಿಕ ಸಾಮಾಜಿಕ ಪ್ರಜ್ಞೆ, ಜೀವನ ಮೌಲ್ಯಗಳನ್ನು ಶ್ರೀ ಕ್ಷೇತ್ರ ಕಾಕೋಳಿನಲ್ಲಿ ಕಾಣಬಹುದು.

ಕಾಕೋಳು ಕ್ಷೇತ್ರಕ್ಕೆ ಭೇಟಿ -ಪುಣ್ಯ ಆಗುವುದು ಕೋಟಿ – ಚತುರ್ಭುಜ ವೇಣುಗೋಪಾಲ
ಹೆಸರುಘಟ್ಟ ಕೆರೆ ಸನಿಹದ ಕಾಕೋಳಿನ ಪ್ರಧಾನ ಆಕರ್ಷಣೆ ದಾಸಸಾಹಿತ್ಯದ ಆದ್ಯ ಪ್ರವರ್ತಕ ಶ್ರೀ ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಸ್ವಾಮಿ ಮತ್ತು ಒಳ ಪ್ರವೇಶಿಸಿದೊಡನೆ ಎದುರು ಕಾಣುವುದೇ ಶೀಘ್ರ ವರಪ್ರದ ಮೋದ ಮಾರುತಿ. ವ್ಯಾಸರಾಜರು ಪ್ರತಿಷ್ಠಾಪನೆ ಮಾಡಿರುವ 732 ಹನುಮನ ವಿಗ್ರಹಗಳಲ್ಲಿ ಒಂದಾದ ಕಂಬದ ಆಂಜನೇಯಸ್ವಾಮಿಯ ದರ್ಶನ ಇಲ್ಲಾಗುತ್ತದೆ. ಈ ಕ್ಷೇತ್ರ ಮೊದಲು ವಿಜಯನಗರ ಅರಸರ ಸಾಮಂತನೊಬ್ಬನ ಆಳ್ವಿಕೆಯಲ್ಲಿತ್ತು. ಆಗ ಇದಕ್ಕೆ ಕಾಕೋಡು, ಕಾಕಾಪುರ, ಮುಂತಾದ ಹೆಸರುಗಳಿದ್ದವು. ಕಾಕೋಡು ಎಂದರೆ ಸುಖ ಸಮೃದ್ಧಿಯಿಂದ ಕೂಡಿದ ಸ್ಥಳವೆಂದರ್ಥ.
ರಾಮಾಯಣದ ಕಾಕಾಸುರನು (ಇಂದ್ರನ ಮಗ ಜಯಂತ) ಶಾಪ ವಿಮೋಚನೆಗಾಗಿ ಸ್ನಾನ ಮಾಡಿದ ಕೊಳ ಅದುವೇ `ಕಾಕೋಳು’ ಆಯಿತೆನ್ನುತ್ತದೆ ಸ್ಥಳ ಪುರಾಣ. ಕಾಕೋಳು ಶ್ಯಾನುಭೋಗ್ ನರಸಣ್ಣ ಮತ್ತು ಶೇಷಗಿರಿರಾವ್ ಸಹೋದರರು ತಮ್ಮ ಜೀವನವನ್ನು ರಾಮ ಮತ್ತು ಲಕ್ಷ್ಮಣರಂತೆ ಕಳೆದರು, ಸಹೋದರತ್ವ, ಉದಾತ್ತ ಚಿಂತನೆಗಳು ಮತ್ತು ಸಮಾಜದ ಕಾಳಜಿಯ ಪ್ರತಿರೂಪವಾಗಿದ್ದರು. ಹಿಂದಿನ ಹೆಸರುಘಟ್ಟ ಕೆರೆ ಪ್ರದೇಶದಿಂದ 1900ರ ಸುಮಾರಿನಲ್ಲಿ ಕಾಕೋಳು ಗ್ರಾಮವನ್ನು ಸ್ಥಳಾಂತರಿಸಿದಾಗ, ಶ್ರೀ ವೇಣುಗೋಪಾಲಸ್ವಾಮಿ ಮತ್ತು ಮುಖ್ಯಪ್ರಾಣದೇವರ ವಿಗ್ರಹಗಳನ್ನು ಈಗಿನ ಕಾಕೋಳು ಗ್ರಾಮಕ್ಕೆ ಸ್ಥಳಾಂತರಿಸಿ ಮತ್ತು ಆರಾಧ್ಯ ದೇವತೆಯಾಗಿ ಪೂಜಿಸಲು ಸಣ್ಣ ದೇವಾಲಯವನ್ನು ನಿರ್ಮಿಸಿದರು.

ದೇವಾಲಯದ ಆವರಣದಲ್ಲಿ ಸುಸಜ್ಜಿತವಾದ ಪಾಂಚಜನ್ಯ – ಸುದರ್ಶನವೆಂಬ ಸಭಾಂಗಣಗಳಿವೆ. ಬ್ರಹ್ಮರಥೋತ್ಸವದ ಅಷ್ಟದಶಮಾನೋತ್ಸವದ ಸ್ಮರಣಾರ್ಥ ನಡೆದ ಶ್ರೀ ಕೃಷ್ಣ ಕಲಾದರ್ಶನ ಆರ್ಟ್ ಗ್ಯಾಲರಿ ಕಣ್ತುಂಬಿಕೊಳ್ಳಬಹುದು. 90ನೇ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ‘ಶ್ರೀ ಕೃಷ್ಣಾರ್ಪಣ’ ಸಂಗ್ರಹಯೋಗ್ಯ ಸ್ಮರಣ ಸಂಪುಟವು ಭಾಗವತಪ್ರಿಯನಿಗೊಂದು ಭಕ್ತಿ ನಮನವಾಗಿ ಪ್ರಕಟವಾಗಿದೆ. ಇತ್ತಿಚೆಗೆ ಸಮಗ್ರ ವಿಷ್ಣು ಸಹಸ್ರನಾಮ ಶಿಲಾ ಫಲಕ ಅನಾವರಣಗೊಂಡು ವಿಷ್ಣುಧಾಮವೆನಿಸಿದೆ. ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಿಂದ ಕಾಕೋಳು ತಲುಪಲು ಸಾಕಷ್ಟು ಬಸ್ ಸೌಕರ್ಯಗಳಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4
Tags: BENGALURUBrahma RathotsavaDoddaballapuraKakolu TempleLord KrishnaRamayanaಕಾಕೋಳುದೇವಾಲಯದೊಡ್ಡಬಳ್ಳಾಪುರಬೆಂಗಳೂರುಬ್ರಹ್ಮರಥೋತ್ಸವರಾಜಾನುಕುಂಟೆರಾಮಾಯಣವೇಣುಗೋಪಾಲಶ್ರೀ ವೇಣುಗೋಪಾಲ ಸ್ವಾಮಿ
Share202Tweet123Send
Previous Post

ಗಮನಿಸಿ! ಅರಸೀಕೆರೆ-ನರಸಾಪುರ ರೈಲು ಪ್ರಯಾಣಿಕರಿಗೆ ಇಲ್ಲಿದೆ ಲೇಟೆಸ್ಟ್ ಅಪ್ಡೇಟ್

Next Post

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ಪ್ರಮುಖ ದೇಗುಲಗಳ ಪ್ರಸಾದ | ಪಡೆಯುವುದು ಹೇಗೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ಪ್ರಮುಖ ದೇಗುಲಗಳ ಪ್ರಸಾದ | ಪಡೆಯುವುದು ಹೇಗೆ?

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ಪ್ರಮುಖ ದೇಗುಲಗಳ ಪ್ರಸಾದ | ಪಡೆಯುವುದು ಹೇಗೆ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಸ್ವಾರ್ಥ ರಹಿತ ತ್ಯಾಗದಿಂದ ಭಗತ್ ಸಿಂಗ್ ಅಮರತ್ವ | ಸುರೇಶ್ ಋಗ್ವೇದಿ ಅಭಿಮತ

ಸ್ವಾರ್ಥ ರಹಿತ ತ್ಯಾಗದಿಂದ ಭಗತ್ ಸಿಂಗ್ ಅಮರತ್ವ | ಸುರೇಶ್ ಋಗ್ವೇದಿ ಅಭಿಮತ

March 24, 2026
ಏ.11-26 | ಇಸ್ಕಾನ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

ಏ.11-26 | ಇಸ್ಕಾನ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

March 24, 2026
ಶಿವಮೊಗ್ಗದಲ್ಲಿ ಅರಳಿದ ಮೊಗ್ಗುಗಳು-5 | 80 ವಸಂತಗಳನ್ನು ಸಾರ್ಥಕವಾಗಿ ಕಳೆದ ಸಜ್ಜನಿಕೆಯ ಸೀತಾರಾಮ

ಶಿವಮೊಗ್ಗದಲ್ಲಿ ಅರಳಿದ ಮೊಗ್ಗುಗಳು-5 | 80 ವಸಂತಗಳನ್ನು ಸಾರ್ಥಕವಾಗಿ ಕಳೆದ ಸಜ್ಜನಿಕೆಯ ಸೀತಾರಾಮ

March 24, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ಸ್ವಾಭಿಮಾನದ ಬದುಕಿಗೆ ವಿಶ್ವಕರ್ಮ ಯೋಜನೆ ಶಕ್ತಿ ತುಂಬಿದೆ: ಸಂಸದ ರಾಘವೇಂದ್ರ

March 24, 2026
ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಗುಡ್ ನ್ಯೂಸ್ | ಹುಬ್ಬಳ್ಳಿ – ರಾಮೇಶ್ವರಂ ನಡುವೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

March 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL