ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ಭಾರೀ ನಿರೀಕ್ಷೆ ಹುಟ್ಟಿಸಿದ್ದ ತಾಲೂಕು ಲೇಖಕಿಯರ ಸಮಾವೇಶ ಅರ್ಥಪೂರ್ಣವಾಗಿ ನಡೆದು, ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿತ್ತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿತ್ತು.
ನಗರದ ಮಲ್ಲಿಗೆ ಹೊಟೇಲ್ ಸಭಾಂಗಣದಲ್ಲಿ ಪ್ರಥಮ ಹಂತದಲ್ಲಿ 30 ನಿಮಿಷಗಳ ಕಾಲ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಡುಗಾರಿಕೆ ನಡೆಯಿತು. ಕಾರ್ಯಕ್ರಮವು ಪ್ರಾರಂಭವಾಗಿ ಉದ್ಘಾಟನೆಗೆ ಮುನ್ನ ಕಮಲಾಪುರದ ಶಾಲೆಯ ಮಕ್ಕಳಿಂದ ಡೊಳ್ಳು ಕುಣಿತದಿಂದ ನಡೆಯಿತು.
ಹೊಸಪೇಟೆಯ ಹಂಸಾಂಬಾಶ್ರಮದ ಮುಖ್ಯಸ್ಥರಾದ ಮಾತಾಜಿ ಪ್ರಭೋದಮಯಿಯವರ ಸಾನ್ನಿಧ್ಯದಲ್ಲಿ, ಹೊಸಪೇಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಪೂರ್ಣಿಮಾ ಕೆ. ಯಾದವ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಹೊಸಪೇಟೆ ಕಸಾಪ ನಿಕಟಪೂರ್ವ ಅಧ್ಯಕ್ಷೆ ಡಿ.ಎನ್. ಸುಜಾತ, ಕಿರ್ಲೋಸ್ಕರ್ ಫೆರಸ್ ಲೇಡೀಸ್ ಕ್ಲಬ್ ಮುಖ್ಯಸ್ಥರಾದ ಶಿಲ್ಪ ಶ್ರೀವತ್ಸನ್, ಜಯಕುಮಾರಿ ಈಶ್ವರ್, ಜೋಗದ ನೀಲಮ್ಮ ಮತ್ತು ಬಳ್ಳಾರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಳ್ಳಾರಿ ಶ್ರೀಸಿದ್ಧರಾಮ ಕಲ್ಮಠ್ ಹಾಗೂ ತಾಲೋಕೆ ಕಸಾಪ ಅದ್ಯಕ್ಷರಾದ ಶ್ರೀ ಎತ್ನಳ್ಳಿ ಮಲ್ಲಯ್ಯ ಇದ್ದರು.
ನಂತರ ಅಂಜಲಿ ನಾಟ್ಯಶಾಲೆಯ ಮಕ್ಕಳಿಂದ ಹಚ್ಚೇವು ಕನ್ನಡದ ದೀಪ ಗೀತೆಗೆ ಮಕ್ಕಳಿಂದ ನೃತ್ಯ ಆಕರ್ಷಣೆ ನಡೆಯಿತು. ಕಿರ್ಲೋಸ್ಕರ್ ಫೆರಸ್ ಲೇಡೀಸ್ ಕ್ಲಬ್ ಸದಸ್ಯರಾದ ಶ್ರೀಮತಿ ಶೈಲಜಾ ಗೋಣಿ ಮತ್ತು ಶ್ರೀಮತಿ ಲಕ್ಷ್ಮೀ ನಾಡಿಗೇರ್ ಅವರು ಶ್ರೀ ಅಂಜಲಿ ಭರತನಾಟ್ಯ ಕಲಾ ಕೇಂದ್ರದ ಮಕ್ಕಳಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ಮಧ್ಯೆ ಮುಸ್ಸಂಜೆ ಮಾತು ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಪುಸ್ತಕ ಕುರಿತುಎಂ.ಎಂ. ಶಿವಪ್ರಕಾಶ್ ಕನ್ನಡ ವಿಶ್ವವಿದ್ಯಾಲಯ ಹಂಪೆ ಇವರು ತಿಳಿಸಿಕೂಟ್ಟರು.
ಉದ್ಘಾಟನೆಯ ನಂತರ ಮೂರು ಹಂತಗಳಲ್ಲಿ ಕವಿಗೋಷ್ಠಿ ನೆಡೆಯಿತು. ವಿವಿಧ ವಿಶಯಗಳ ಮೇಲೆ ಚರ್ಚಿಸಲಾಯಿತು. ಈ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಹೊಸಪೇಟೆ ತಾಲೋಕಿನ ಅನೇಕ ಲೇಖಕಿಯರು, ಉಪನ್ಯಾಸಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯೋಪಾಧ್ಯಾಯರು,ಶಿಕ್ಷಕರು ಶಿಕ್ಷಕಿಯರು, ಎಲ್ಲಾ ಸಂಘ ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು, ಗೃಹರಕ್ಷಕ ದಳ ಮಹಿಳಾ ಸಿಬ್ಬಂದಿ ಹಾವೂ ವಿವಿಧ ಹೋಬಳಿ, ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸ್ಥಳೀಯ ಮರಿಯಮ್ಮನ ಹಳ್ಳಿ ಗ್ರಾಮದ ರಂಗ ಕಲಾವಿದರು, ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ ನಾಗರತ್ನಮ್ಮ, ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರು ಡಣಾಪುರದ ರೇಖಾ ಪ್ರಕಾಶ್, ಶಾಂತಮ್ಮ ಗೂಗ್ಗ ಚನ್ನಬಸವರಾಜ ಬಳ್ಳಾರಿಯ ಹಿರಿಯ ಉಪನ್ಯಾಸಕರಾದ ಪಿ. ಸುನಂದ, ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆ ಹಾಗೂ ಡಾ.ಎಸ್.ಎಂ. ಸಾವಿತ್ರಿ ಮುಖ್ಯೋಪಾಧ್ಯಾಯನಿ ಇದ್ದರು.
ಹೊಸಪೇಟೆ ತಾಲ್ಲೂಕಿನ ಎಲ್ಲಾ ಸರಕಾರಿ, ಅರೆಸರಕಾರಿ ಕಚೇರಿ ಮಹಿಳಾ ನೌಕರರು, ಶಾಲಾ ಕಾಲೇಜುಗಳ ಮಹಿಳೆಯರು, ಹೊಸಪೇಟೆ ತಾಲೂಕಿನ ಎಲ್ಲಾ ಸರಕಾರಿ, ಅರೆಸರಕಾರಿ ಕಚೇರಿ ಮಹಿಳಾ ನೌಕರರು, ಶಾಲಾ ಕಾಲೇಜುಗಳ ಮಹಿಳಾ ಶಿಕ್ಷಕರ ಸಮಾಗಮದಲ್ಲಿ ನೆರವೇರಿತು.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)
Get in Touch With Us info@kalpa.news Whatsapp: 9481252093
Discussion about this post