ಮಂಗಳೂರು: ಕೇಂದ್ರ ಸರ್ಕಾರದ ಮನವಿಯ ಮೇರೆಗೆ ರಾಮಕೃಷ್ಣ ಮಿಷನ್ ಕಳೆದ ಐದು ವರ್ಷಗಳಿಂದ ರಾಷ್ಟ್ರದಾದ್ಯಂತ ಅನೇಕ ಶ್ರಮದಾನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ.
ಮಂಗಳೂರಿನ ರಾಮಕೃಷ್ಣ ಮಿಷನ್ ಕೂಡ ಅನೇಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಅವಿಭಜಿತ ದಕ್ಷಿಣ ಕನ್ನಡದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮಹತ್ತರದ ಪಾತ್ರವಹಿಸಿದೆ.2019 ರ ಅಕ್ಟೋಬರ್ 2ಕ್ಕೆ ಐದು ವರ್ಷದ ಈ ಯೋಜನೆ ಸಂಪೂರ್ಣಗೊಂಡಿದ್ದು, ಈ ಯೋಜನೆಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡ ಸ್ವಯಂಸೇವಕರನ್ನು ಒಟ್ಟು ಸೇರಿಸಿ ಅಭಿನಂದನಾ ಸಭೆಯನು ರಾಮಕೃಷ್ಣ ಮಠದ ಸಭಾಭವನದಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್’ನ ಮಾರ್ಗದರ್ಶನದಿಂದ ಪುತ್ತೂರಲ್ಲಿ ಕಳೆದ ನಾಲ್ಕು ವರ್ಷದಿಂದ ಸ್ವಚ್ಛ ಪುತ್ತೂರು ಎಂಬ ಹೆಸರಿನಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದ ತಂಡದ ಸದಸ್ಯರೂ ಭಾಗವಹಿಸಿದರು. ತಂಡದ ಸಕ್ರಿಯ ಕಾರ್ಯಕರ್ತರಾದ ಕಿರಣ್ ಶಂಕರ ಮಲ್ಯ, ಸಂದೀಪ್ ಲೋಬೋ, ಸುರೇಶ್ ಕಲ್ಲಾರೆ, ಸುರೇಶ್ ಶ್ರೀಶಾಂತಿ, ಮನೋಜ್, ಶ್ರೀಧರ್, ಮೋಹನ್, ನಿಶ್ಚಲ್, ಮೈತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Discussion about this post