ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗೋ ಸಂತತಿಯನ್ನು ರಕ್ಷಿಸಿ, ಪೋಷಿಸುವ ಸಲುವಾಗಿನ ಸದುದ್ದೇಶದೊಂದಿಗೆ ರೂಪಿಸಲಾಗಿರುವ ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಟ್ರಾಕ್ಟರ್ ಓಡಿಸುವ ಮೂಲಕ ರೈತರ ಮೊಗದಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ನಗರದ ಸವಳಂಗ ರಸ್ತೆಯಲ್ಲಿರುವ ಬಾಪೂಜಿ ಆರ್ಯುವೇದಿಕ್ ಕಾಲೇಜು ಜಮೀನಿನಲ್ಲಿ ಇಂದು ಮುಂಜಾನೆ ನಮ್ಮೂರು ನಮ್ಮ ಗೋವುಗಳು ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ವತಃ ಟ್ರಾಕ್ಟರ್ ಓಡಿಸಿ, ಭೂಮಿ ಉಳುಮೆ ಮಾಡಿದ ಸಚಿವರು, ಬೀಜ ಬಿತ್ತನೆ ಮಾಡಿ ರೈತರ ಮೊಗದಲ್ಲಿ ಹರ್ಷ ಮೂಡಿಸಿದರು.
ನಂತರ ಮಾತನಾಡಿದ ಸಚಿವರು, ನಮ್ಮೂರಿನಲ್ಲಿ ಖಾಲಿಯಿರುವ ಸೈಟುಗಳನ್ನು ಮಾಲೀಕರ ಅನುಮತಿಯ ಮೇರೆಗೆ ಬಳಸಿಕೊಂಡು ಗೋವುಗಳಿಗೆ ಅಗತ್ಯವಿರುವ ಮೇವು ಬೆಳೆಯುವ ಪ್ರಯತ್ನಗಳನ್ನು ಮಾಡಬೇಕು. ಇದಕ್ಕಾಗಿ ಸರ್ಕಾರ ಸಹಕಾರ ನೀಡಲಿದೆ. ಇದು ಕಾರ್ಯಗತವಾಗಿ ಬೆಳೆದ ಮೇವು ಗೋವಿನ ಬಾಯಿಗೆ ಸೇರಿದಾಗ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಇಂತಹ ಕೆಲಸವನ್ನು ನಾವೆಲ್ಲಾ ಒಟ್ಟಾಗಿ ಸೇರಿ ಮಾಡೋಣ ಎಂದು ಕರೆ ನೀಡಿದರು.
Get In Touch With Us info@kalpa.news Whatsapp: 9481252093
Discussion about this post