ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ತೀರ್ಥಹಳ್ಳಿ |
ಮಲೆನಾಡಿನ ಶಿವಮೊಗ್ಗ #Shivamogga ಹಾಗೂ ಕರಾವಳಿಯ ಉಡುಪಿ #Udupi ಜಿಲ್ಲೆಗಳನ್ನು ಸಂಪರ್ಕಿಸುವ ಮಹತ್ವ ಆಗುಂಬೆ ಘಾಟಿಗೆ ಸುರಂಗ ಮಾರ್ಗ ನಿರ್ಮಾಣ ಮಾಡಲು ಡಿಪಿಆರ್ #DPR ತಯಾರಿಗೆ 2 ಕೋಟಿ ರೂ. ಅನುದಾನ ನೀಡಿರುವ ಕುರಿತಾಗಿ ಮಾಹಿತಿ ಹೊರಬಿದಿದ್ದಿದೆ.
ಶಿವಮೊಗ್ಗ-ಆಗುಂಬೆ-ಮಲ್ಪೆವರೆಗಿನ ಹೆದ್ದಾರಿ ನಿರ್ಮಾಣ ಕಾಮಗಾರಿ ಈಗಾಗಲೇ ಚಾಲ್ತಿಯಲ್ಲಿದ್ದು, ಇದಕ್ಕೆ ಸಂಪರ್ಕಿಸುವ ಆಗುಂಬೆ ಘಾಟಿಗೆ #AgumbeGhat ಸುರಂಗ ಮಾರ್ಗ ನಿರ್ಮಾಣ ಮಾಡುವ ಕುರಿತಾಗಿ ಪ್ರಸ್ತಾಪವಾಗಿತ್ತು. ಈ ಕುರಿತಂತೆ ಕೇಂದ್ರ ಹೆದ್ದಾರಿ ಸಚಿವ ನಿತನ್ ಗಡ್ಕರಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ ವೇಳೆ ಸುರಂಗ ಮಾರ್ಗದ ಪ್ರಸ್ತಾವನೆ ಮುಂದಿಟ್ಟಿದ್ದರು.
ಆನಂತರ ಉದ್ದೇಶಿತ ಯೋಜನೆಯ ಕಾರ್ಯಸಾಧ್ಯತೆ ಮತ್ತು ಪರಿಣಾಮಗಳನ್ನು ನಿರ್ಣಯಿಸಲು ಪ್ರಯತ್ನಗಳನ್ನು ಪ್ರಾರಂಭಿಸಲಾಗಿದೆ.

ಆಗುಂಬೆ ಘಾಟಿಯ ಶಿವಮೊಗ್ಗ-ಉಡುಪಿ ಜಿಲ್ಲೆಗಳಲ್ಲಿ ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಭಾರೀ ಉದ್ದದ ವಾಹನಗಳ ಹೊರತಾಗಿ ಬಹಳಷ್ಟು ವಾಹನಗಳು ಇದೇ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುತ್ತವೆ.
ಆದರೆ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತದೆ. ಭೂಕುಸಿತಗಳು ಮತ್ತು ಇತರ ನೈಸರ್ಗಿಕ ಘಟನೆಗಳು ಗಂಭೀರ ಅಪಾಯಗಳನ್ನು ಉಂಟುಮಾಡುತ್ತವೆ. ಇದು ಆಗಾಗ್ಗೆ ದುಸ್ತರ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ.
ಆಗುಂಬೆ ಘಾಟಿಯ ರಸ್ತೆ ಸುಸ್ಥಿತಿಯಲ್ಲಿದ್ದರೂ ಇಲ್ಲಿ ಲಾಂಗ್ ಚಸ್ಸಿ ವಾಹನಗಳ ಸಂಚಾರ ಕಷ್ಟಸಾಧ್ಯ. ಇನ್ನೊಂದೆಡೆ ಆಗುಂಬೆಯ ಅಡಿಯಲ್ಲಿ ಕರಾವಳಿಗೆ #Karavali ಸುರಂಗ ಕಲ್ಪಿಸಿದರೆ, ನೇರ ಹಾಗೂ ಹೆವಿ ಲೋಡ್ ವಾಹನಗಳ ಸಂಚಾರ ಶಿವಮೊಗ್ಗ ಮೂಲಕವಾಗಿ ಸಾಗುವ ಅವಕಾಶ ಇದೆ. ಇದು ವಾಣಿಜ್ಯ ವಹಿವಾಟಿಗೆ ಸಹಕಾರಿಯಾಗಲಿದೆ ಎಂಬ ಚಿಂತನೆಯಿದೆ.

ಆಗುಂಬೆ ಘಾಟಿಗೆ ಸುರಂಗ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು #NHAI ಸುರಂಗ ಮಾರ್ಗ ಯೋಜನೆಯ ವ್ಯಾಪ್ತಿಯ ಯೋಜನೆ ತಯಾರಿಗೆ ಮುಂದಾಗಿದೆ. ಪ್ರಮುಖವಾಗಿ ಯೋಜನೆಯ ಪ್ರಾಮುಖ್ಯತೆ ಮತ್ತು ಸಾಧಕ ಬಾಧಕಗಳು ಹಾಗೂ ತಗಲುವ ಅಂದಾಜು ವೆಚ್ಚ ಮತ್ತು ಅನುಷ್ಠಾನದ ಅವಧಿ ಮತ್ತು ಪರ್ಯಾಯ ಮಾರ್ಗಗಳನ್ನು ವಿವರಿಸಲು ವಿಸ್ಕೃತ ಯೋಜನೆ ವರದಿ ತಯಾರಿಸಲು ಸೂಚಿಸಲಾಗಿದ್ದು, ಈ ಸಂಬಂಧ (ಡಿಪಿಆರ್) ತಯಾರಿಸಲು 2 ಕೋಟಿ ರೂ. ಅನುದಾನ ನೀಡಿದೆ.
ಈ ಸುರಂಗ ಮಾರ್ಗದ ಯೋಜನೆ ರಾಷ್ಟ್ರೀಯ ಹೆದ್ದಾರಿ 169ಎ (ಮಲ್ಪೆ- ತೀರ್ಥಹಳ್ಳಿ) ಚತುಷ್ಪಥ ಯೋಜನೆಯಡಿಯಲ್ಲಿ ಬರುತ್ತದೆ.
ಎಲ್ಲಿಂದ ಎಲ್ಲಿಗೆ ಸಂಪರ್ಕ ಸಾಧ್ಯತೆ?
ಇನ್ನು, ಒಂದು ಯೋಜನೆಯಂತೆ ಹೆಬ್ರಿ #Hebri ತಾಲ್ಲೂಕಿನ ಸೋಮೇಶ್ವರದಿಂದ ತೀರ್ಥಹಳ್ಳಿ #Thirthahalli ತಾಲೂಕಿನ ಮೇಗರವಳ್ಳಿಯವರೆಗೆ #Megaravalli ಸುಮಾರು 12 ಕಿಲೋಮೀಟರ್’ಗಳಷ್ಟು ಸುರಂಗ ಮಾರ್ಗ ವ್ಯಾಪಿಸಲಿದೆ ಎಂದು ಅಂದಾಜಿಸಲಾಗಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಯೋಜನಾ ವೆಚ್ಚವು 3,000 ಕೋಟಿ ರೂ.ಗಳಿಂದ 3,500 ಕೋಟಿ ರೂ.ಗಳ ನಡುವೆ ಇರುತ್ತದೆ ಎಂದು ಹೇಳಲಾಗಿದೆ. ಯೋಜನೆ ಆರಂಭವಾದ ನಂತರ ಮತ್ತಷ್ಟು ಅನುದಾನ ಹೊಂದಾಣಿಕೆ ಆಗಬಹುದು.
ಪ್ರಯೋಜನ ಹಾಗೂ ಅಪಾಯಗಳೇನು?
#Malpe ಮಲ್ಪೆ-ತೀರ್ಥಹಳ್ಳಿ ಮಾರ್ಗದಂತಹ ಚಾಲ್ತಿಯಲ್ಲಿರುವ ಹೆದ್ದಾರಿ ಯೋಜನೆಗಳು ಸುರಂಗ ಮಾರ್ಗ, ಸುವ್ಯವಸ್ಥಿತ ಪ್ರಯತ್ನಗಳು ಮತ್ತು ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸುವ ಸಾಧ್ಯತೆಯಿದೆ.

ಅಪಾಯಗಳೇನು?
ಈ ಯೋಜನೆ ಜಾರಿಯಿಂದ ಅಪಾರವಾದ ಜೈವಿಕ ವೈವಿಧ್ಯತೆ ಹೊಂದಿಗೆ ಆಗುಂಬೆ ಘಾಟಿಗೆ ಅಪಾಯವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಶ್ಚಿಮ ಘಟ್ಟದ ಆಗುಂಬೆ ಘಾಟಿ ಅರಣ್ಯದಲ್ಲಿ ಶ್ರಿಮಂತ ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿದೆ. ಇದು ಪರಿಸರ ಸೂಕ್ಷ್ಮ ವಲಯವಾಗಿದೆ. ಸುರಂಗ ನಿರ್ಮಾಣವು ಈ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಅಪಾಯ ಉಂಟು ಮಾಡುವ ಸಾಧ್ಯತೆಯಿದೆ ಎಂಬ ವಾದಗಳೂ ಕೇಳಿ ಬರುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post