ಕಲ್ಪ ಮೀಡಿಯಾ ಹೌಸ್ | ಪ್ರಯಾಗರಾಜ್ |
ಅನಾರೋಗ್ಯದಿಂದ ಬಳಲುತ್ತಿದ್ದ ಆಪಲ್ #AppleCoFounder ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ #SteveJobs ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಗಂಗಾ ಸ್ನಾನದಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.
ಮಹಾಕುಂಭ ಮೇಳ 2025ರಲ್ಲಿ ಭಾಗಿಯಾಗಲು ಜಾಬ್ಸ್ ದಂಪತಿ ಭಾರತಕ್ಕೆ ಆಗಮಿಸಿದ್ದರು. ಅಪಾರ ಜನಸಂದಣಿಯಿಂದಾಗಿ ಅವರು ಸ್ವಲ್ಪ ಅನಾರೋಗ್ಯಕ್ಕೊಳಗಾಗಿದ್ದರು. ಇದೇ ವೇಳೆ ಅವರು ಗಂಗಾ ನದಿಯಲ್ಲಿ ಸ್ನಾನ ಮಾಡಿ, ವಿಶ್ರಾಂತಿ ಪಡೆದ ನಂತರ ಗುಣಮುಖರಾಗಿದ್ದಾರೆ.
Also Read>> ಸೊರಬ | ಬನದ ಹುಣ್ಣಿಮೆ | ಚಂದ್ರಗುತ್ತಿ ರೇಣುಕಾಂಬ ಸನ್ನಿಧಿಯಲ್ಲಿ ಹೇಗಿತ್ತು ಸಂಭ್ರಮ
ಈ ಕುರಿತಂತೆ ಮಾತನಾಡಿರುವ ಸ್ವಾಮಿ ಕೈಲಾಶಾನಂದರು, ಲಾರೆನ್ ಅವರು ಸೋಮವಾರ ಸ್ವಲ್ಪ ಕಾಲದವರೆಗೆ ಅಸ್ವಸ್ಥರಾಗಿದ್ದರು. ಆದರೆ `ಗಂಗಾ ಸ್ನಾನ’ ಮತ್ತು ವಿಶ್ರಾಂತಿಯ ನಂತರ ಆರಾಮಾಗಿದ್ದಾರೆ. ಸನಾತನ ಧರ್ಮವನ್ನು ಆಳವಾಗಿ ಅಧ್ಯಯನ ಮಾಡುವ ಅವರ ಉತ್ಸಾಹ ಇನ್ನೂ ಬಲವಾಗಿ ಉಳಿದಿದೆ ಎಂದಿದ್ದಾರೆ.

ಇದೇ ವೇಳೆ ತಮ್ಮ ಹೆಸರನ್ನು ಕಮಲಾ ಎಂದು ಬದಲಾವಣೆ ಮಾಡಿಕೊಂಡಿರುವ ಲಾರೆನ್ ಅವರು ಇಷ್ಟೊಂದು ಜನಸಂದಣಿ ಇರುವ ಪ್ರದೇಶಕ್ಕೆ ಎಂದಿಗೂ ತೆರಳಿಲ್ಲ. ಹೀಗಾಗಿ, ಅವರ ಆರೋಗ್ಯ ಹದಗೆಟ್ಟಿತು ಎಂದು ಹೇಳಲಾಗಿದೆ.
ಲಾರೆನ್ ಪಾವೆಲ್ ತುಂಬಾ ಸರಳ ವ್ಯಕ್ತಿಯಾದ್ದು, ಪೂಜೆಯ ಸಮಯದಲ್ಲಿ ಅವರು ನಮ್ಮೊಂದಿಗೆ ಇದ್ದರು. ಅವರು ಸನಾತನ ಧರ್ಮದಕ್ಕೆ ಸಂಬAಧಿಸಿದAತೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಸ್ವಾಮಿ ಕೈಲಾಶಾನಂದರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post