ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕಳೆದ ಎರಡು ದಿನಗಳ ಹಿಂದ ಕಾಣೆಯಾಗಿದ್ದ ಕೆಎಸ್’ಆರ್’ಟಿಸಿ ಉದ್ಯೋಗಿ ಅರುಣ್(29) ಇಂದು ತುಂಗಾ ಹಿನ್ನೀರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕೆಎಸ್’ಆರ್’ಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಎರಡು ದಿನಗಳ ಹಿಂದೆ ಕಾಣೆಯಾಗಿದ್ದರು. ಹೀಗಾಗಿ, ಆತನ ಕುಟುಂಬಸ್ಥರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆದರೆ, ಇಂದು ಅರುಣ್ ಶವ ತುಂಗಾ ಹಿನ್ನೀರಿನಲ್ಲಿ ದೊರೆತಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಅರುಣ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ಪ್ರಕರಣ ಕುರಿತಂತೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
Get in Touch With Us info@kalpa.news Whatsapp: 9481252093
















