No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Tuesday, May 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಿಜೋರಾಂ | ದುರ್ಗಮ ಪ್ರದೇಶದ ಕಷ್ಟ ಮೆಟ್ಟಿ ದಾಖಲೆ ಬರೆದ ಭಾರತೀಯ ರೈಲ್ವೆ | ಎದುರಿಸಿದ ಸವಾಲುಗಳೇನು?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 9, 2025
in Special Articles
0
ಮಿಜೋರಾಂ | ದುರ್ಗಮ ಪ್ರದೇಶದ ಕಷ್ಟ ಮೆಟ್ಟಿ ದಾಖಲೆ ಬರೆದ ಭಾರತೀಯ ರೈಲ್ವೆ | ಎದುರಿಸಿದ ಸವಾಲುಗಳೇನು?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮಿಜೋರಾಂನಿಂದ ಪ್ರತ್ಯಕ್ಷ ವರದಿ-2  |

ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರು, ದಟ್ಟ ಕಾನನ, ಭಯಾನಕ ಪ್ರಪಾತಗಳು ಹಾಗೂ ದುರ್ಗಮ ಪ್ರದೇಶ. ಅದೇ ಈಶಾನ್ಯ ಪ್ರದೇಶದ ಮಿಜೋರಾಂ ಎಂಬ ಪುಟ್ಟ ರಾಜ್ಯ. ಇಲ್ಲಿ ನಮ್ಮ ಹೆಮ್ಮೆಯ ರೈಲ್ವೆ ಇಂಜಿನಿಯರ್’ಗೆ ಸೃಷ್ಠಿಸಿರುವ ಒಂದು ಅದ್ಭುತವೇ ಸೈರಾಂಗ್ – ಬೈರಾಬಿ ಬ್ರಾಡ್ ಗೇಜ್ ಮಾರ್ಗ.

ಹೌದು… ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ, ಪ್ರಾಕೃತಿಕ ಸೊಬಗನ್ನು ಹೊದ್ದುಕೊಂಡಿದ್ದರೂ, ಈಶಾನ್ಯ ರಾಜ್ಯಗಳಲ್ಲೇ ಅತಿ ಹಿಂದುಳಿದ ಮಿಜೋರಾಂನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಮುಖವಾಗಿ, ಮಿಜೋರಾಂನ ಸಮಗ್ರ ಅಭಿವೃದ್ಧಿಯ ಭಾಗವಾಗಿ ಈ ರಾಜ್ಯದ ರಾಷ್ಟ್ರೀಯ ಸಂಪರ್ಕವನ್ನು ವಿಸ್ತರಿಸಲು ಸೈರಾಂಗ್ – ಬೈರಾಬಿ ನೂತನ ಬ್ರಾಡ್ ಗೇಜ್ ರೈಲು ಮಾರ್ಗವನ್ನು ನಿರ್ಮಿಸಿದೆ. ಈ ಮೂಲಕ ಸ್ಥಳೀಯರ 26 ವರ್ಷಗಳ ಕನಸನ್ನು ನನಸಾಗಿಸಿದೆ.

ಸಮುದ್ರ ಮಟ್ಟದಿಂದ 900 ಮೀಟರ್, ಭೂಮಿಯ ಸಮತಟ್ಟಿನಿಂದ 2,165 ಮೀಟರ್ ಎತ್ತರ ಪ್ರದೇಶದಲ್ಲಿರುವ ಈ ಪ್ರದೇಶದಲ್ಲಿ ರೈಲ್ವೆ ಮಾರ್ಗ ನಿರ್ಮಿಸುವುದು ಅತ್ಯಂತ ಸಾಹಸವಾದ ಕೆಲಸವಾಗಿತ್ತು. ಅಲ್ಲಿರುವ ಬೆಟ್ಟುಗಳು ಹಾಗೂ ಕಣಿವೆಗಳ ನಡುವೆ ರೈಲ್ವೆ ಯೋಜನೆ ಜಾರಿಗೊಳಿಸುವ ವೇಳೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೀವವನ್ನೇ ಒತ್ತೆಯಿಟ್ಟಿದ್ದಾರೆ.

  • 70 ಮೀಟರ್’ಗಿಂತಲೂ ಎತ್ತರದ 6 ಸೇತುವೆಗಳು (ಗರಿಷ್ಠ 114 ಮೀ)
  • ದುರ್ಗಮ ಸವಾಲಿನ ಭೂವೈಜ್ಞಾನಿಕ ಪರಿಸ್ಥಿತಿಗಳಲ್ಲಿ 45 ಸುರಂಗಗಳು
  • ಎಲ್ಲಾ ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಅಳವಡಿಕೆ
  • ಒಟ್ಟು ಸೇತುವೆಗಳ ಉದ್ದ – 11.78 ಕಿ.ಮೀ (23%)
  • ಒಟ್ಟು ಸೇತುವೆಗಳು – 153
  • ಸಣ್ಣ ಸೇತುವೆಗಳು – 88
  • ಆರ್’ಒಬಿ ಮತ್ತು ಆರ್’ಯುಬಿ – 10
  • ದೊಡ್ಡ ಸೇತುವೆಗಳು – 55
  • ಮಾರ್ಗದ ಒಟ್ಟು ಸುರಂಗಗಳು – 45
  • ಸುರಂಗಗಳ ಒಟ್ಟು ಉದ್ದ – 15.885 ಕಿ.ಮೀ (31%)
  • ಅತಿದೊಡ್ಡ ಸುರಂಗ – 1.868 ಕಿ.ಮೀ

ಸೇತುವೆಗಳಲ್ಲಿ, ಸೈರಾಂಗ್ ಬಳಿಯ ಕುರುಂಗ್ ನದಿಯ ಮೇಲಿನ ಸೇತುವೆ ಸಂಖ್ಯೆ 144 ವಿಶ್ವದ ಎರಡನೇ ಅತಿ ಎತ್ತರದ ಪಿಯರ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನೆಲದಿಂದ 114 ಮೀಟರ್ ಎತ್ತರದಲ್ಲಿದೆ.

ನೆರೆಯ ಮಣಿಪುರದಲ್ಲಿರುವ ನೋನಿ ಸೇತುವೆ ಅತಿ ಎತ್ತರವಾಗಿದ್ದು, 141 ಮೀಟರ್ ಎತ್ತರವಿದೆ, ಇದನ್ನು ನಿರ್ಮಾಣ ಹಂತದಲ್ಲಿರುವ 111-ಕಿಮೀ ಜಿರಿಬಮ್-ಇಂಫಾಲ್ ರೈಲು ಮಾರ್ಗದ ಭಾಗವಾಗಿ ನಿರ್ಮಾಣವಾಗಿದೆ.

ಏನೆಲ್ಲಾ ಸವಾಲುಗಳು ಎದುರಾಗಿದ್ದವು?
ಬೈರಾಬಿ-ಸೈರಾಂಗ್ ಮಾರ್ಗವನ್ನು ನಿರ್ಮಿಸುವಾಗ ರೈಲ್ವೆಗಳು ಕಠಿಣವಾದ ಇಂಡೋ-ಬರ್ಮೀಸ್ ಟೆಕ್ಟೋನಿಕ್ ಭೂಪ್ರದೇಶವನ್ನು ಹೊಂದಿದ್ದರಿಂದ, ಕಡಿದಾದ ಇಳಿಜಾರುಗಳು, ಆಳವಾದ ಕಣಿವೆಗಳು ಮತ್ತು ಸವೆತಕ್ಕೆ ಒಳಗಾಗುವ ದುರ್ಬಲವಾದ, ಜೇಡಿಮಣ್ಣಿನಂತಹ ಮಣ್ಣಿನಿಂದ ಕೂಡಿರುವ ಕಾರಣ, ನಿರ್ಮಾಣದ ವೇಳೆ ದೊಡ್ಡ ಸವಾಲುಗಳನ್ನು ತಂಡ ಎದುರಿಸಬೇಕಾಯಿತು.

ಐಐಟಿ ಗುವಾಹಟಿ ಮತ್ತು ಐಐಟಿ ರೂರ್ಕಿಯಿಂದ ವಿನ್ಯಾಸ ಮತ್ತು ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದ ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಸಂಸ್ಥೆಯಾದ ಈಶಾನ್ಯ ಗಡಿನಾಡು ರೈಲ್ವೆ (ನಿರ್ಮಾಣ), 223 ಕಿಮೀ ಸಂಪರ್ಕ ರಸ್ತೆಗಳನ್ನು ಸಹ ನಿರ್ಮಿಸಿದೆ.

ಹಳಿ ನಿರ್ಮಾಣಕ್ಕಾಗಿ ಗುಡ್ಡ ಅಗೆಯುವುದು, ಪಿಯರ್(ಕಂಬ) ನಿರ್ಮಾಣದ ಹಂತಕ್ಕೆ ತಲುಪುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಇಲ್ಲಿನ ಬಹುತೇಕ ಪ್ರದೇಶಗಳಿಗೆ ರಸ್ತೆ ಸಂಪರ್ಕವೇ ಇರಲಿಲ್ಲ. ಹೀಗಾಗಿ, ಎನ್’ಎಫ್’ಆರ್ ವತಿಯಿಂದ ಇಲ್ಲಿನ 23 ಕಿಲೋ ಮೀಟರ್ ರಸ್ತೆ ನಿರ್ಮಿಸಲಾಯಿತು. ಇದು ಅಂದಿನಿಂದ ಕೊಲಾಸಿಬ್ ಮತ್ತು ಐಜ್ವಾಲ್ ಜಿಲ್ಲೆಗಳ ಹಲವಾರು ಹಳ್ಳಿಗಳಿಗೆ ಪ್ರಯೋಜನವನ್ನು ನೀಡಿದೆ.

ಇನ್ನು, ಈ ಪ್ರದೇಶದಲ್ಲಿ ಪ್ರತಿ ವರ್ಷ ಕೇವಲ 4-5 ತಿಂಗಳು ಅಂದರೆ ನವೆಂಬರ್’ನಿಂದ -ಮಾರ್ಚ್’ವರೆಗೆ ಮಾತ್ರ ಇಲ್ಲಿ ಕೆಲಸ ನಿರ್ವಹಿಸುವುದು ಸಾಧ್ಯವಾಗಿತ್ತು. ಏಪ್ರಿಲ್-ಅಕ್ಟೋಬರ್’ಗಳು ಭಾರಿ ಮಳೆಯಿಂದ ಕಾರ್ಯ ನಿಂತುಹೋಗುತ್ತದೆ.ದುರ್ಗಮವಾದ ಗುಡ್ಡಗಾಡು, ಕಣಿವೆ, ಆಳವಾದ ಕಣಿವೆಗಳಲ್ಲಿ ಸುರಂಗಗಳು ಮತ್ತು ಎತ್ತರದ ಸೇತುವೆಗಳು ನಿರ್ಮಾಣಗಳು ಕಷ್ಟದಾಯಕವಾಗಿತ್ತು.

ಶೇಲ್, ಸಿಲ್ಟ್ಸ್ಟೋನ್, ಸ್ಯಾಂಡ್ಸ್ಟೋನ್ ಹಗುರ ಕಲ್ಲುಗಳು ನೀರು ನುಗ್ಗುವಿಕೆ ಮತ್ತು ಕುಸಿತಕ್ಕೆ ಕಾರಣವಾಗುತ್ತವೆ. ಅಲ್ಲದೇ, ಕೆಲಸದ ಸ್ಥಳಗಳಿಗೆ ಹೋಗುವ ರಸ್ತೆಗಳಲ್ಲಿ ಭೂಕುಸಿತ ಸಾಮಾನ್ಯ. ಸಣ್ಣ ಮಳೆಯಾದರೂ ರಸ್ತೆ ಜಾರಿ ಹೋಗಿ ಜನರು ಮತ್ತು ಸಾಮಗ್ರಿಗಳ ಚಲನೆ ಅಸಾಧ್ಯವಾಗಿತ್ತು.

ಇದರ ಜೊತೆಯಲ್ಲಿ ಕಾಮಗಾರಿಗೆ ಸ್ಥಳೀಯ ಕಾರ್ಮಿಕರ ಕೊರತೆಯಿತ್ತು. ಹೀಗಾಗಿ ಇತರ ರಾಜ್ಯಗಳಿಂದ ಕಾರ್ಮಿಕರನ್ನು ತರಬೇಕಾಯಿತು. ಕಾಮಗಾರಿಗೆ ಅಗತ್ಯವಾಗಿದ್ದ ಮರಳು, ಕಲ್ಲು ಮುಂತಾದ ಸಾಮಗ್ರಿಗಳು ಮಿಜೋರಾಂನಲ್ಲಿ ಲಭ್ಯವಿಲ್ಲ. ಹೀಗಾಗಿ, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಹಾಗೂ ಇತರ ರಾಜ್ಯಗಳಿಂದ ತರಬೇಕಾಗಿತ್ತು.

ಸ್ಥಳೀಯ ಪ್ರತಿರೋಧವನ್ನು ಪರಿಹರಿಸಲು, ರೈಲ್ವೆ ಇಲಾಖೆ ಅಂತಿಮವಾಗಿ ಮಿಜೋರಾಂನ ಸ್ಥಳೀಯ ಜನರನ್ನು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿತು.

ಈ ಪ್ರದೇಶದಲ್ಲಿ ವರ್ಷಕ್ಕೆ ಕೇವಲ 6-7 ತಿಂಗಳುಗಳ ಕೆಲಸದ ಅವಧಿ ಕಡಿಮೆ ಇದ್ದ ಕಾರಣ ಯೋಜನೆಯು ನಿಧಾನಗತಿಯಲ್ಲಿ ಪ್ರಗತಿ ಕಂಡಿತು. ಹೆಚ್ಚಿನ ವೇತನದ ಹೊರತಾಗಿಯೂ, ದೂರದ ಸ್ಥಳ ಮತ್ತು ಕೆಲಸದ ಸ್ಥಳಗಳಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆಯಿಂದಾಗಿ ಅನೇಕ ಕಾರ್ಮಿಕರು ಯೋಜನೆಯನ್ನು ತೊರೆದಿದ್ದಾರೆ.

ಪರ್ವತ ಪ್ರದೇಶಗಳಾದ ಇಲ್ಲಿ ಈ ರೀತಿ ಸಾಮಗ್ರಿಗಳನ್ನು ಒದಗಿಸಿಕೊಂಡು ನಿರ್ಮಾಣ ಮಾಡಿರುವುದೇ ಒಂದು ಸಾಹಸವಾಗಿದೆ.

ನಾಳೆ: ಮಿಜೋರಾಂ | ಈಶಾನ್ಯ ರಾಜ್ಯವೊಂದರಲ್ಲಿ ರೈಲ್ವೆ ಇಂಜಿನಿಯರಿಂಗ್ ಅದ್ಭುತ | ಯಾಕಿಷ್ಟು ಮಹತ್ವ?

(ಸೈರಾಂಗ್-ಬೈರಾಬಿ ನಡುವಿನ ಈ ಯೋಜನೆಯ ಪ್ರತ್ಯಕ್ಷ ಅನುಭವ ಪಡೆಯಲು ಭಾರತೀಯ ರೈಲ್ವೆ ಆಯೋಜಿಸಿದ್ದ ಮೂರು ದಿನಗಳ ಕ್ಷೇತ್ರ ಭೇಟಿಯಲ್ಲಿ ಕಲ್ಪ ನ್ಯೂಸ್ ಸಂಪಾದಕರು ಪಾಲ್ಗೊಂಡಿದ್ದ ಖುದ್ಧು ಅನುಭವದ ಲೇಖನ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: BangladeshBirobiIndian RailwayIRCTCKannada News WebsiteLatest News KannadaMizoramNortheast Frontier RailwaySairangಈಶಾನ್ಯ ರಾಜ್ಯಕಾನನಕೇಂದ್ರ ಸರ್ಕಾರಪಿಯರ್ಪ್ರಧಾನಿ ನರೇಂದ್ರ ಮೋದಿಪ್ರಪಾತಬಾಂಗ್ಲಾದೇಶಬೈರಾಬಿಬ್ರಾಡ್ ಗೇಜ್ಮಿಜೋರಾಂಮ್ಯಾನ್ಮಾರ್ರೈಲ್ವೆಸಮುದ್ರ ಮಟ್ಟಸುರಂಗಸೇತುವೆಸೈರಾಂಗ್
Share196Tweet123Send
Previous Post

ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಅಭಿಷೇಕ್ ಅಧಿಕಾರ ಸ್ವೀಕಾರ

Next Post

ಸುಬ್ರೋತೋ ಕಪ್ (U-15): ಫೈನಲ್ ಪ್ರವೇಶಿಸಿದ ಮಿನರ್ವಾ ಪಬ್ಲಿಕ್ ಸ್ಕೂಲ್ ಮತ್ತು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸುಬ್ರೋತೋ ಕಪ್ (U-15): ಫೈನಲ್ ಪ್ರವೇಶಿಸಿದ ಮಿನರ್ವಾ ಪಬ್ಲಿಕ್ ಸ್ಕೂಲ್ ಮತ್ತು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!

ಸುಬ್ರೋತೋ ಕಪ್ (U-15): ಫೈನಲ್ ಪ್ರವೇಶಿಸಿದ ಮಿನರ್ವಾ ಪಬ್ಲಿಕ್ ಸ್ಕೂಲ್ ಮತ್ತು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!

Leave a Reply Cancel reply

Your email address will not be published. Required fields are marked *

  • Trending
  • Latest
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಇಂದಿನಿಂದ ಪಶ್ಚಿಮ ಬಂಗಾಳದಲ್ಲಿ ಹೊಸ ಸೂರ್ಯ ಉದಯಿಸುತ್ತಾನೆ | ಪ್ರಧಾನಿ ನರೇಂದ್ರ ಮೋದಿ

ಇಂದಿನಿಂದ ಪಶ್ಚಿಮ ಬಂಗಾಳದಲ್ಲಿ ಹೊಸ ಸೂರ್ಯ ಉದಯಿಸುತ್ತಾನೆ | ಪ್ರಧಾನಿ ನರೇಂದ್ರ ಮೋದಿ

May 4, 2026
ಆಗುಂಬೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು | ಅಪಾಯದಿಂದ ಪಾರು

ಆಗುಂಬೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು | ಅಪಾಯದಿಂದ ಪಾರು

May 4, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ಸಾರ್ವಜನಿಕ ಉದ್ಯಮಗಳ ಸಮಿತಿಗೆ ಸಂಸದ ಬಿ.ವೈ. ರಾಘವೇಂದ್ರ ಸತತ ಮೂರನೇ ಬಾರಿಗೆ ಆಯ್ಕೆ

May 4, 2026
ವಿಜಯ್’ಗಾಗಿ ತಿರುಪತಿಯಲ್ಲಿ ಪೂಜೆ ಮಾಡಿಸಿದ ನಟಿ ತ್ರಿಶಾ ಟಿವಿಕೆ ಸಂಪುಟದಲ್ಲಿ ಡಿಸಿಎಂ?

ವಿಜಯ್’ಗಾಗಿ ತಿರುಪತಿಯಲ್ಲಿ ಪೂಜೆ ಮಾಡಿಸಿದ ನಟಿ ತ್ರಿಶಾ ಟಿವಿಕೆ ಸಂಪುಟದಲ್ಲಿ ಡಿಸಿಎಂ?

May 4, 2026
ಬೇಸಿಗೆ ರಜೆ | ಬೆಂಗಳೂರಿನಿಂದ ಕಾನ್ಪುರ, ಚೆನ್ನೈ ನಗರಗಳಿಗೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

ಯಶವಂತಪುರ-ವಿಜಯಪುರ, ಸಿಂಧನೂರು, ಹಿಂದೂಪುರ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

May 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL