ಕಲ್ಪ ಮೀಡಿಯಾ ಹೌಸ್ | ಮಿಜೋರಾಂನಿಂದ ಪ್ರತ್ಯಕ್ಷ ವರದಿ-3 |
ಮಿಜೋರಾಂ ರಾಜಧಾನಿ ಐಜ್ವಾಲ್ ಪ್ರಾಕೃತಿಕ ಸೊಬಗನ್ನು ಹೊದ್ದು, ಅಷ್ಟೇ ಭಯಾಕನಕರ ಕಣಿವೆ, ಬೆಟ್ಟಗಳೊಂದಿಗೆ ನೋಡುಗರ ಕಣ್ಮನ ತಣಿಸುವ ಪ್ರದೇಶವೇ ಆಗಿದ್ದರೂ, ಅಲ್ಲಿನ ಜನರ ಜೀವನ ಮಾತ್ರ ಎಲ್ಲ ರೀತಿಯಲ್ಲೂ ಸಹ ಸಾಹಸವೇ ಸರಿ.
ಕೃಷಿಯನ್ನೇ ಮೂಲವಾಗಿ ಅವಲಂಭಿಸಿರುವ ಇಲ್ಲಿನ ಜನರಿಗೆ ದೊಡ್ಡ ಶಿಕ್ಷಣ ಸಂಸ್ಥೆಗಳು, ಬೃಹತ್ ಕೈಗಾರಿಕೆಗಳು, ಪ್ರಾಕೃತಿಕ ಸೊಬಗು ಇದ್ದರೂ ಪ್ರವಾಸೋದ್ಯಮ ಎನ್ನುವುದು ಮರೀಚಿಕೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಸೈರಾಂಗ್ ಹಾಗೂ ಬೈರೋಬಿ ನಡುವಿನ ನೂತನ ರೈಲು ಮಾರ್ಗ ಸ್ಥಳೀಯರಿಗೆ ಆಶಾಕಿರಣವಾಗಿದೆ.

ಮಿಜೋರಾಂಗೆ ಬಹುತೇಕ ಎಲ್ಲಾ ಅಗತ್ಯ ವಸ್ತುಗಳನ್ನು ಅಸ್ಸಾಂನ ಸಿಲ್ಚಾರ್’ನಿಂದ ತರಲಾಗುತ್ತದೆ. ಇದು ರಸ್ತೆಯ ಮೂಲಕ ಸುಮಾರು 10 ಗಂಟೆಗಳ ಪ್ರಯಾಣ. ಹೊಸ ಮಾರ್ಗ ಕಾರ್ಯಾರಂಭದೊಂದಿಗೆ, ಪ್ರಯಾಣದ ಸಮಯ ಸುಮಾರು ಮೂರು ಗಂಟೆಗಳವರೆಗೆ ಕಡಿಮೆಯಾಗುತ್ತದೆ. ಇದರಿಂದಾಗಿ ಪುಟ್ಟ ರಾಜ್ಯದ ನಿವಾಸಿಗಳಿಗೆ ಭಾರಿ ಪರಿಹಾರ ಸಿಗುತ್ತದೆ.
ಐಜ್ವಾಲ್’ನಿಂದ ಗೌಹಾಟಿ, ಸಿಲ್ಚರ್ ಹಾಗೂ ನವದೆಹಲಿಗಳಿಗೆ ಶಿಕ್ಷಣ, ಆರೋಗ್ಯ ಹಾಗೂ ವ್ಯವಹಾರಗಳಿಗೆ ತೆರಳುವ ಜನರಿಗೆ ಇದು ಅತ್ಯಂತ ಸಹಕಾರಿಯಾಗಿದೆ.
ಪ್ರವಾಸೋದ್ಯಮಕ್ಕೆ ಸಹಕಾರಿ
ಪ್ರಾಕೃತಿಕ ಸೊಬಗಿನ ಈ ಪ್ರದೇಶದಲ್ಲಿ ನೂತನ ರೈಲು ಮಾರ್ಗ ಪ್ರವಾಸೋದ್ಯಮಕ್ಕೆ ರಾಜಪಥವನ್ನು ತೆರೆಯಲಿದೆ.
ಇದಕ್ಕೆ ಪೂರಕವಾಗಿ, 2025ರ ಆಗಸ್ಟ್’ನಲ್ಲಿ ಐಅರ್’ಸಿಟಿಸಿಯು ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಒಪ್ಪಂದ ಮಾಡಿಕೊಂಡಿದೆ.
ಪ್ರಮುಖವಾಗಿ, ಮಿಜೋರಾಂ ಜನರ ಸಾಂಪ್ರದಾಯಿಕ ಹಸ್ತಕಲೆ, ವಸ್ತ್ರ ಹಾಗೂ ಕೃಷಿ ಸಂಬಂಧಿತ ವ್ಯಾಪಾರಗಳಿಗೆ ಇದು ಬಾಗಿಲು ತೆರೆಯಲಿದೆ. ಈ ಮೂಲಕ ಇಲ್ಲಿನ ಜನರ ಜೀವನ ಸುಧಾರಣೆಯಾಗಲಿದೆ.
ನಾಳೆ: ಮಿಜೋರಾಂ | ಬೈರಾಬಿ-ಸೈರಾಂಗ್ ನೂತನ ರೈಲು ಮಾರ್ಗದ ಪ್ರಯೋಜನಗಳೇನು? ಸ್ಥಳೀಯರು ಏನೆನ್ನುತ್ತಾರೆ?
(ಸೈರಾಂಗ್-ಬೈರಾಬಿ ನಡುವಿನ ಈ ಯೋಜನೆಯ ಪ್ರತ್ಯಕ್ಷ ಅನುಭವ ಪಡೆಯಲು ಭಾರತೀಯ ರೈಲ್ವೆ ಆಯೋಜಿಸಿದ್ದ ಮೂರು ದಿನಗಳ ಕ್ಷೇತ್ರ ಭೇಟಿಯಲ್ಲಿ ಕಲ್ಪ ನ್ಯೂಸ್ ಸಂಪಾದಕರು ಪಾಲ್ಗೊಂಡಿದ್ದ ಖುದ್ಧು ಅನುಭವದ ಲೇಖನ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post