ಶಿಕಾರಿಪುರ: ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಹಲವು ದಿನಗಳಿಂದ ಕಾಣೆಯಾಗಿದ್ದು ಅವರನ್ನು ಹುಡುಕಿಕೊಡಿ ಎಂದು ಶಿಕಾರಿಪುರ ಯುವಕಾಂಗ್ರೆಸ್ ಅಧ್ಯಕ್ಷ ಮಯೂರ್ ದರ್ಶನ್ ಉಳ್ಳಿ ಅವರು ದೂರು ನೀಡಿದ್ದಾರೆ.
ಇಂತಹುದ್ದೊಂದು ವಿಚಿತ್ರ ದೂರು ನೀಡಿರುವ ಅವರು, ತಾಲೂಕಿನ ಅಂಬ್ಲಿಗೋಳದಲ್ಲಿ ಈಗಾಗಲೇ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ತಾಲೂಕನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಬರ ಅಧ್ಯಯನ ತಂಡವು ತಾಲೂಕಿಗೆ ಭೇಟಿ ನೀಡಿದಾಗ ಶಾಸಕರಾದ ಯಡಿಯೂರಪ್ಪ ಅವರು ಹಾಜರಿದ್ದು ಮಾಹಿತಿ ನೀಡಬೇಕಿತ್ತು. ಆದರೆ ಇದನ್ನು ಮಾಡದೆ ಕುದುರೆ ವ್ಯಾಪಾರದಲ್ಲಿ ರೆಸಾರ್ಟ್ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇವರನ್ನು ಹುಡುಕಿಕೊಟ್ಟು ತಾಲೂಕಿನ ಜನತೆಗೆ ನ್ಯಾಯ ಒದಗಿಸಬೇಕು ಎಂದು ಅವರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ಈ ದೂರು ಠಾಣೆಯಲ್ಲಿ ದಾಖಲಾಗಿದೆಯೇ ಎಂಬ ಕುರಿತಾಗಿ ಖಚಿತವಾಗಿ ತಿಳಿದುಬಂದಿಲ್ಲ.
Discussion about this post