ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕ ಎಚ್. ಹಾಲಪ್ಪ ಅವರು ಸೂಚನೆ ನೀಡಿದರು.
ಇರುವಕ್ಕಿ-ಘಂಟಿನಕೊಪ್ಪದಲ್ಲಿ 125 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಉಪಯೋಗಕ್ಕಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸುವ ರಸ್ತೆಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಯಾವುದೇ ಹಂತದಲ್ಲಿ ರಾಜಿ ಮಾಡಿಕೊಳ್ಳದೇ ಗುಣಮಟ್ಟ ಕಾಯ್ದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಟಿ.ಡಿ. ಮೇಘರಾಜ್, ಲೋಕನಾಥ್ ಬಿಳಿಸಿರಿ, ರವಿಕುರ್ಮಾ, ಹಿರಿಯಣ್ಣ, ಬಿ.ಟಿ. ರವೀಂದ್ರ, ಗಂಟಿನಕೊಪ್ಪ ಗೋಪಿ, ತಿಪ್ಪೇಶ್ ನವೀನ್, ಮಂಜು, ಚಂದ್ರು, ಗಂಗಾಧರ್, ಯಡೇಹಳ್ಳಿ ಜಯಪ್ಪ, ಆನಂದ್ ಜನ್ನೇಹಕ್ಲು, ಹರೀಶ ಮೂಡಳ್ಳಿ, ಶಿವು, ಹಾಗೂ ಗ್ರಾಮಸ್ಥರು ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು, 55 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅನಂದಪುರದ ಬಸವನ ಬೀದಿ, ಹಾಗೂ ಸಂತೆ ಮಾರ್ಕೆಟ್ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್ ರವರು, ಲೋಕನಾಥ್ ಬಿಳಿಸಿರಿ, ನಾರಾಯಣಪ್ಪ ಮಾಷ್ಟ್ರು, ಜಯಪ್ಪ, ರವಿಕುಮಾರ್, ಹಿರಿಯಣ್ಣ, ಬಿ.ಟಿ. ರವೀಂದ್ರ, ಜಗದೀಶ್ ಶಾಂತಪ್ಪ ಗೌಡ್ರು, ಅಶೋಕ, ರೇವಪ್ಪ, ಗುರು, ನವೀನ್ ಸಂತೋಷ, ಮಲ್ಲಿಕ, ಪ್ರಮೋದ್, ಮಂಜುನಾಥ್ ಅರ್ಚಾ, ರಾಘವೇಂದ್ರ ಸಂತೋಷ, ತಿಮ್ಮಣ್ಣ ಅಧಿಕಾರಿಗಳು ಉಪಸ್ಥಿತರಿದ್ದರು.
ಎಚ್. ಹಾಲಪ್ಪ ನವರು ಹಾಗೂ ಎಂಎಡಿಬಿ ಅಧ್ಯಕ್ಷರಾದ ಗುರುಮೂರ್ತಿರವರು ಸಾಗರದ ಬಿಜೆಪಿ ಕಾರ್ಯಾಲಯದಲ್ಲಿ ’ಕರ್ನಾಟಕ ಜನ ಸಂವಾದ ಸಮಾರೋಪ ಸಮಾರಂಭ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು, ನಗರ ಮತ್ತು ಗ್ರಾಮಾಂತರ ಮಂಡಲಗಳ ಅಧ್ಯಕ್ಷರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post