ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಕೊರೋನಾ ವೈರಸ್ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹರಡಿ, ಸಾರ್ವಜನಿಕರಲ್ಲಿ ಭಯ ಉಂಟುಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಎಚ್. ಹಾಲಪ್ಪ ಸೂಚಿಸಿದರು.
ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೋವಿಡ್19 ವೈರಸ್ ನಿಯಂತ್ರಣದ ಕುರಿತಾಗಿ ಸಭೆ ನಡೆಸಿ ಅವರು ಮಾತನಾಡಿದರು.
ನಗರಸಭೆ, ಪೊಲೀಸ್ ಇಲಾಖೆ, ಹಾಗೂ ವೈದ್ಯಕೀಯ ಇಲಾಖೆಯವರು ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ ಸಹಮತದೊಂದಿಗೆ ಕೆಲಸ ಮಾಡಿ, ಕೊರೋನ ವೈರಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಡಿಎಚ್’ಒ ಅವರಿಗೆ ಕರೆ ಮಾಡಿ ಕೋವಿಡ್19 ಚಿಕಿತ್ಸೆಗಾಗಿ ಸಾಗರದ ಉಪವಿಭಾಗಿಯ ಆಸ್ಪತ್ರೆಗೆ ವೈದ್ಯಕೀಯ ಪರಿಕರಗಳನ್ನು ಹಾಗೂ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುವ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಇದಕ್ಕೆ ಪೂರಕವಾಗಿ ಸೌಲಭ್ಯ ಒದಗಿಸಲು ಸಹಮತ ಸೂಚಿಸಿದ್ದಾರೆ. ತುರ್ತಾಗಿ ಹೆಚ್ಚಿನ ಸೌಲಭ್ಯಗಳು ಬೇಕಾದಲ್ಲಿ ಗಮನಕ್ಕೆ ತನ್ನಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುತ್ತೇನೆ ಎಂದರು.
ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದರಿಂದ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ನಾಗರೀಕರು ಅನಗತ್ಯವಾಗಿ ಓಡಾಡಬಾರದೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿಗಳು, ತಹಶೀಲ್ದಾರರು, ಡಿವೈಎಸ್’ಪಿ, ಪೌರಾಯುಕ್ತರು, ಟಿಎಚ್’ಒ, ಡಾ. ಪ್ರಕಾಶ್ ಭೋಸ್ಲೆ, ಟಿ.ಡಿ. ಮೇಘರಾಜ್, ಗಣೇಶ್ ಪ್ರಸಾದ್, ಲೋಕನಾಥ್ ಬಿಳಿಸಿರಿ, ಗೌತಮ್ ವಕೀಲರು, ಮತ್ತಿತರರು ಉಪಸ್ಥಿತರಿದ್ದರು.
ಸಾಗರದ ತಾಯಿ-ಮಗು ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ಹೆರಿಗೆ ಸಂದರ್ಭದಲ್ಲಿ ಆಗಮಿಸುವ ಗರ್ಭಿಣಿಯರ ಸಂಬಂಧಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣದ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿಗಳು, ಪೌರಾಯುಕ್ತರಾದ ನಾಗಪ್ಪ ನವರು, ಟಿಎಚ್’ಪ ಮೋಹನ್ ರವರು, ಡಾ.ಪ್ರಕಾಶ್ ಭೋಸ್ಲೆ, ಆನಂದ್ ಮೆಣಸೆ, ಭಾಷಾ ಸಾಬ್, ಮತ್ತಿತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post