ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆಗೆ ಬಲ ತುಂಬುವ ಸಲುವಾಗಿ, ರಷ್ಯಾ ಸಹಕಾರದೊಂದಿಗೆ ಕಲಾಸ್ನಿಕೋವ್ ಅಸಾಲ್ಟ್ ರೈಫಲ್’ಗಳನ್ನು ಅಮೇಥಿಯಲ್ಲಿ ತಯಾರಿಸಲು ಮೋದಿ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಹೌದು.. ಈ ಕುರಿತಂತೆ ಮೋದಿ ಸರ್ಕಾರ ರಾಹುಲ್ ಗಾಂಧಿ ಕ್ಷೇತ್ರ ಅಮೇಥಿಯಲ್ಲಿ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ಮೂಲಕ ರಷ್ಯಾ ಸಹಕಾರದೊಂದಿಗೆ ಭಾರತೀಯ ಸೇನೆಗಾಗಿ ಸುಮಾರು 7.47 ಲಕ್ಷ ಕಲಾಸ್ನಿಕೋವ್ ಸರಣಿಯ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಪ್ರಸ್ತಾವನೆಗೆ ಅಸ್ತು ಎಂದಿದೆ. ಇದಕ್ಕಾಗಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಹೊಸ ಘಟಕ ನಿರ್ಮಾಣವಾಗಲಿದೆ.
ಅಮೆರಿಕಾ ಮೂಲದ ಸಿಗ್ ಸಾಯರ್ ಕಂಪೆನಿ ಮೂಲಕ ಭಾರತೀಯ ಸೇನೆಗಾಗಿ ಸುಮಾರು 72,400 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನವೇ ಇಂತಹುದ್ದೊಂದು ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

















