ಉಡುಪಿ: ಚುನಾವಣೆಯ ವಿಚಾರಗಳು ಅಭಿವೃದ್ಧಿಯ ಕುರಿತಾಗಿ ಇರಬೇಕು ಎನ್ನುವ ಕಾಲ ಹೋಗಿ, ವೈಯಕ್ತಿಕ ನಿಂದನೆಯ ಕಾಲ ಕೇಕೆ ಹಾಕುತ್ತಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಎಚ್ ಡಿ ಕುಮಾರಸ್ವಾಮಿ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ.
ಉಡುಪಿಯಲ್ಲಿಂದು ಮಾತನಾಡಿರುವ ಅವರು, ಮೋದಿ ಬೆಳಿಗ್ಗೆ ಹೊರಡುವಾಗ ಮುಖ ಪಳಪಳ ಹೊಳೆಯುವಂತೆ ವ್ಯಾಕ್ಸ್ ಮಾಡಿಸಿಕೊಳ್ಳುತ್ತಾರೆ. ಆದರೆ ನಾವು ಬಿಸಿಲು, ಮಳೆಯಲ್ಲಿ ಅಡ್ಡಾಡುತ್ತೇವೆ, ದಿನಕ್ಕೆ ಒಂದೇ ಬಾರಿ ಮುಖ ತೊಳೆಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಮೋದಿ ಪ್ರತಿದಿನ ವ್ಯಾಕ್ಸ್ ಮಾಡಿಸಿಕೊಳ್ಳುತ್ತಾರೆ. ಅದರಿಂದ ಮುಖ ಹೊಳೆಯುತ್ತದೆ. ಆದರೆ, ನಾನು ಹಾಗಲ್ಲ ದಿನಕ್ಕೆ ಒಂದೇ ಬಾರಿ ಮುಖ ತೊಳೆಯುತ್ತೇನೆ ಆದ್ದರಿಂದ ನನ್ನ ಮುಖ ನಿಮಗೆ ಇಷ್ಟವಾಗೋಲ್ಲ ಎಂದಿದ್ದಾರೆ.
ಕುಮಾರಸ್ವಾಮಿಯವರು ಈ ಟೀಕಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ಹಾಗೂ ಅಪಹಾಸ್ಯವನ್ನು ಸೃಷ್ಠಿಸಿದೆ.
Discussion about this post